Ad Widget

ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರಿಗೆ ಪಿಎಚ್.ಡಿ ಪದವಿ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಮಂಡಿಸಿದ ಸಂಸ್ಕೃತ-ಸಂಸ್ಕೃತಿಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೊಡುಗೆ ಒಂದು ಅಧ್ಯಯನ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ನೀಡಿದೆ.ಡಾ. ಕುಮಾರ ಸುಬ್ರಹ್ಮಣ್ಯ ಭಟ್. ಎ ಸಹಾಯಕ ಪ್ರಾಧ್ಯಾಪಕರು ಸಂಸ್ಕೃತ ವಿಭಾಗ ವಿಶ್ವವಿದ್ಯಾಲಯ ಕಾಲೇಜು ಇವರು ಮಾರ್ಗದರ್ಶಕರಾಗಿದ್ದಾರೆ.ಈ ಮಹಾಪ್ರಬಂಧವು ಶ್ರೀ...

ಪಂಬೆತ್ತಾಡಿ : ಯುವಕ, ಯುವತಿ ಹಾಗೂ ಮಹಿಳಾ ಮಂಡಲದ ಜಂಟಿ ಪದಗ್ರಹಣ

ಪಂಚಶ್ರೀ ಯುವಕ ಮಂಡಲ, ಅಕ್ಷತಾ ಯುವತಿ ಮಂಡಲ, ಅಮೃತಾ ಮಹಿಳಾ ಮಂಡಲದ ಜಂಟಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜ.2 ರಂದು ಜನಾರ್ಧನ ಬೆಳಗಜೆ ಇವರ ಅಧ್ಯಕ್ಷತೆಯಲ್ಲಿ ಯುವಕ ಮಂಡಲ ವಠಾರದಲ್ಲಿ ನಡೆಯಿತು. ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ದಯಾನಂದ ಕೇರ್ಪಳರವರು ಯುವಕ ಮಂಡಲದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು....
Ad Widget

ಸಚಿವ ಸುನಿಲ್ ಕುಮಾರ್ ರಿಂದ ಕಡ್ಲಾರು ಜಲಶ್ರೀ ಪ್ರತಿಷ್ಠಾನದ ಮನವಿ ಪತ್ರ ಬಿಡುಗಡೆ

ಇತ್ತೀಚೆಗೆ ನೂತನವಾಗಿ ರಚಿಸಲಾದ ಸಾಹಿತ್ಯ, ಸಾಂಸ್ಕೃತಿಕ ಮತ್ತು ಜನಪದಕ್ಕೆ ಸಂಬಂಧಿಸಿದ ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇದರ ಮನವಿ ಪತ್ರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವರಾಗಿರುವ ಶ್ರೀ ಸುನೀಲ್ ಕುಮಾರ್ ಜ.೩ರಂದು ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನ ಗುತ್ತಿಗಾರುವಿನಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು.ಈ ಸುಸಂದರ್ಭದಲ್ಲಿ ದ.ಕ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಬಂದರು, ಮೀನುಗಾರಿಕಾ...

ಕೆವಿಜಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಮೆಸ್ಕಾಂ ಸಬ್ ಸ್ಟೇಷನ್ ಭೇಟಿ

ಸುಳ್ಯ ಕೆವಿಜಿ ಪಾಲಿಟೆಕ್ನಿಕ್ ಇಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿಗಳು ಮೆಸ್ಕಾಂ ಸಬ್ ಸ್ಟೇಷನ್ ಗೆ ಜ. 4 ರಂದು ಭೇಟಿ ನೀಡಿದರು. ವಿದ್ಯುತ್ ವಿತರಣಾ ವ್ಯವಸ್ಥೆ, ತಾಂತ್ರಿಕತೆಯ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು. ಮೆಸ್ಕಾ ಜೂನಿಯರ್ ಇಂಜಿನಿಯರ್ ಜಯಪ್ರಕಾಶ್ ಕೆ. ಮಾಹಿತಿ ನೀಡಿದರು. ಕೆವಿಜಿ ಪಾಲಿಟೆಕ್ನಿಕ್ ನ ಉಪನ್ಯಾಸಕರಿಗಳಾದ ಆನಂದ ಎ., ಅಣ್ಣಪ್ಪ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೊಲ್ಲಮೊಗ್ರು : ಪ್ರಥಮ ಹಂತದ ಗ್ರಾಮಸಭೆ

ಕೊಲ್ಲಮೊಗ್ರು ಗ್ರಾಮಪಂಚಾಯತ್ ನ ಪ್ರಥಮ ಹಂತದ ಗ್ರಾಮಸಭೆಯು ಜ.03 ರಂದು ಗ್ರಾಮಪಂಚಾಯತ್ ಅದ್ಯಕ್ಷ ಉದಯ ಕೊಪ್ಪಡ್ಕ ರವರ ಅಧ್ಯಕ್ಷತೆಯಲ್ಲಿ ಕೊಲ್ಲಮೊಗ್ರದ ಶ್ರೀ ಮಯೂರ ಕಲಾಮಂದಿರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ನೋಡೆಲ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ ಮಹಾದೇವ ಅವರು ಆಗಮಿಸಿದ್ದರು.ಬೆಂಡೋಡಿಯಲ್ಲಿ ಅಂಗನವಾಡಿ ಇಲ್ಲದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಹಾಗಾಗಿ ಬೆಂಡೋಡಿಯಲ್ಲಿ ಒಂದು ಅಂಗನವಾಡಿಯನ್ನು ನಿರ್ಮಿಸಬೇಕು ಹಾಗೂ ಬೆಂಡೋಡಿ...

ಕುಕ್ಕೆ ಸುಬ್ರಹ್ಮಣ್ಯ : ಇಂಧನ ಸಚಿವ ಸುನಿಲ್ ಕುಮಾರ್ ಭೇಟಿ

ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಜ.02 ರಂದು ಇಂಧನ ಸಚಿವ ಸುನಿಲ್ ಕುಮಾರ್ ಆಗಮಿಸಿ ಇಂದು(ಜ.03) ಬೆಳಿಗ್ಗೆ ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು ಆಶ್ಲೇಷ ಬಲಿ ಪೂಜೆ ನೆರವೇರಿಸಿದರು.ನಂತರ ಇಂದು(ಜ.03) ಸುಬ್ರಹ್ಮಣ್ಯದಲ್ಲಿ ಭೂಗತ ಕೇಬಲ್ ಮತ್ತು 8 ಮೆಗಾ ವೋಲ್ಟ್ ಪರಿವರ್ತಕ, 11 ಕೆ.ವಿ ಫೀಡರ್ ಉದ್ಘಾಟನಾ ಮಾಡಿದರು. ನಂತರ ಸುಬ್ರಹ್ಮಣ್ಯದ ವಲ್ಲೀಶ...

ಸುಬ್ರಹ್ಮಣ್ಯ :15 ರಿಂದ 18 ವರ್ಷದ ಮಕ್ಕಳ ಲಸಿಕೀಕರಣಕ್ಕೆ ಚಾಲನೆ

15 ರಿಂದ18 ವರ್ಷದ ಮಕ್ಕಳಿಗೆ ಲಸಿಕೀಕರಣಕ್ಕೆ ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಜ.03 ರಂದು ಚಾಲನೆ ನೀಡಲಾಯಿತು.ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಅಂಗಾರ ಚಾಲನೆ ನೀಡಿ ಮಾತನಾಡಿ, ಕೋವಿಡ್ ಎದುರಿಸಲು, ಅದರಿಂದ ರಕ್ಷಣೆ ಪಡೆಯಲು ಲಸಿಕೀಕರಣ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ 101541 ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಲಿದೆ. ಸರಕಾರದ...

ಮಣಿಮಜಲು ಜೈನ ಮನೆತನದ ಪಿ.ಗುಲಾಬಿಯಮ್ಮ ನಿಧನ

ಕಳಂಜ ಗ್ರಾಮದ ಮಣಿಮಜಲು ಜೈನ ಮನೆತನದ, ಪ್ರಸ್ತುತಮೂಡುಬಿದಿರೆಯಲ್ಲಿ ನೆಲೆಸಿದ್ದಪಿ ಗುಲಾಬಿಯಮ್ಮ ಜ.02ರಂದು ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ 90 ವರ್ಷ ವಯಸ್ಸಾಗಿತ್ತು. ಮೂಡುಬಿದಿರೆಯ ಜೈನ ಪೇಟೆ ಬಕ್ಕಾರು ಮನೆ ನಿವಾಸಿ ದಿ. ಎಂ ಮಿತ್ರ ಸೇನ ಶೆಟ್ಟಿ ಅವರ ಧರ್ಮಪತ್ನಿಯಾಗಿರುವ ಪಿ ಗುಲಾಬಿ ಅಮ್ಮನವರು ಓರ್ವ ಪುತ್ರ ,ಮೂವರು ಪುತ್ರಿಯರನ್ನು ಅಗಲಿದ್ದಾರೆ. ಧಾರ್ಮಿಕವಾಗಿ ಸಕ್ರಿಯರಾಗಿದ್ದ ಅವರು ಸಮ್ಮೇದ...

ಸುಳ್ಯ ; ಅಕ್ರಮ ಮದ್ಯ ವಶ : ಆರೋಪಿಗೆ ನ್ಯಾಯಾಂಗ ಬಂಧನ

ಸುಳ್ಯ ಜೂನಿಯರ್ ಕಾಲೇಜು ಬಳಿಯ ಮನೆಯೊಂದರ ಸಮೀಪ ಜೀಪಿನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 53,700 ರೂ. ಮೌಲ್ಯದ ಮದ್ಯವನ್ನು ಸುಳ್ಯ ಪೊಲೀಸರು ದ.28 ರಂದು ವಶಪಡಿಸಿಕೊಂಡಿದ್ದಾರೆ.ಆರೋಪಿ ಡಿನೋಹಿ ಎಂಬುವರನ್ನು ಪೊಲೀಸರು ಸೆರೆಹಿಡಿದಿದ್ದು, ಉಳಿದ ಇಬ್ಬರು ಆರೋಪಿಗಳಾದ ಜ್ಞಾನಪ್ರಕಾಶ್ ಅಲಿಯಾಸ್ ಸಲಾಂ ಹಾಗೂ ಡಯಾನ ಎಂಬುವವರು ತಪ್ಪಿಸಿಕೊಂಡಿರುವುದಾಗಿ ಪೋಲೀಸರು ತಿಳಿಸಿದ್ದಾರೆ.ಆರೋಪಿ ಡಿನೋಹಿ ಎಂಬವರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು...

ಅಬಕಾರಿ ಇಲಾಖೆಯ ಭರ್ಜರಿ ಬೇಟೆ – ಹಾಸ್ಟೆಲ್ ನಲ್ಲಿ ಸಂಗ್ರಹಿಸಿಟ್ಟಿದ್ದ ಗಾಂಜಾ ವಶ – ಆರೋಪಿ ಪರಾರಿ

ಸುಳ್ಯ ಮತ್ತು ಪುತ್ತೂರು ಅಬಕಾರಿ ಇಲಾಖೆಯವರು ಖಚಿತ ಮಾಹಿತಿ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಿ ಸುಳ್ಯದ ಬೆನಕ ಹಾಸ್ಟೆಲ್ ನಲ್ಲಿ ಬಾಡಿಗೆದಾರರಾಗಿದ್ದ ಪಲ್ಲತ್ತೂರಿನ ಮೊಯಿದ್ದೀನ್ ಕುಂಞಿ ಕೊಠಡಿಯಲ್ಲಿ ಸಂಗ್ರಹಿಸಿಟ್ಟ 11 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಸುಳ್ಯದ ಬೆನಕ ಹಾಸ್ಟೆಲ್ ನಲ್ಲಿ ಮೊಯಿದ್ದೀನ್ ಕುಂಞಿ ಎಂಬವರು ಕೊಠಡಿ ಬಾಡಿಗೆ ಪಡೆದು ಕುಟುಂಬದೊಂದಿಗೆ ವಾಸವಿದ್ದರು. ಇಲ್ಲಿ ಗಾಂಜಾ ಸಂಗ್ರಹಿಸಿ‌...
Loading posts...

All posts loaded

No more posts

error: Content is protected !!