Ad Widget

ಹಲ್ಗುಜಿ : ಬಿ.ಸಿ.ಟ್ರಸ್ಟ್ ವತಿಯಿಂದ ಶ್ರಮದಾನ

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಗುತ್ತಿಗಾರು ವಲಯ ನಾಲ್ಕೂರು ಇದರ ವತಿಯಿಂದ ನಾಲ್ಕೂರು ಗ್ರಾಮದ ಹಲ್ಗುಜಿ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಶ್ರಮದಾನವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ವಲಯ ಮೇಲ್ವಿಚಾರಕರಾದ ಮುರಳೀಧರ, ಸೇವಾಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪಾಡಿ ಹಾಗೂ ಒಕ್ಕೂಟದ ಪದಾಧಿಕಾರಿಗಳು, ವಿಪತ್ತು...

ಸುಳ್ಯ : ಚೆನ್ನಕೇಶವ ದೇವರ ರಥೋತ್ಸವ ಇಂದು

ಸುಳ್ಯ: ಸುಳ್ಯ ಶ್ರೀ ಚೆನ್ನಕೇಶವ ಜಾತ್ರೆಯ ರಥೋತ್ಸವ ಇಂದು ನಡೆಯಲಿದ್ದು ಸೋಮವಾರ ಬೆಳಗ್ಗೆ ದೊಡ್ಡ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಇಂದು ರಾತ್ರಿ ಕಲ್ಕುಡ ದೈವಗಳ‌ ಭಂಡಾರ ಬಂದ ಬಳಿಕ ಕೋವಿಡ್ ನಿಯಮಗಳ ಅನುಸಾರ ರಥೋತ್ಸವ ನಡೆಯಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.ಜ.೧೧ ರಂದು ಬೆ. ಆರಾಟ ಬಾಗಿಲು ತೆಗೆಯುವುದು, ವೇದ ಪಾರಾಯಣ, ಮಹಾ...
Ad Widget

ಮೇಕೆದಾಟು ಹೋರಾಟ ಬೆಂಬಲಿಸಿ ಸುಳ್ಯ ಕಾಂಗ್ರೆಸ್ ವತಿಯಿಂದ ಪಯಸ್ವಿನಿ ನದಿಗೆ ಭಾಗಿನ ಅರ್ಪಣೆ

ಮೇಕೆದಾಟು "ನೀರಿಗಾಗಿ ನಡಿಗೆ" ಪಾದಯಾತ್ರೆಗೆ ಸುಳ್ಯದ ಕಾಂಗ್ರೆಸ್ ಪ್ರಮುಖರಿಂದ ಸುಳ್ಯದ ಅರಂಬೂರು ಪಾಲಡ್ಕ ಪಯಸ್ವಿನಿ ನದಿಗೆ ಧವಸ ಧಾನ್ಯಗಳನ್ನು ಭಾಗಿನ ಅರ್ಪಣೆ ಮಾಡಿ 10 ದಿನಗಳ ಬೃಹತ್ ಪಾದಯಾತ್ರೆಗೆ ಶುಭ ಹಾರೈಸಲಾಯಿತು. ಈ ಸಂದರ್ಭ ಸುಳ್ಯ ನಗರ ಪಂಚಾಯತ್ ಶುದ್ಧ ಕುಡಿಯುವ ನೀರಿನ ಯೋಜನೆಯು ಆದಷ್ಟು ಶೀಘ್ರ ಕಾರ್ಯರೂಪಕ್ಕೆ ಬರಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದರು....

ನಿಂತಿಕಲ್ಲು: ಶ್ರೀ ಕಾಳಿಕಾಂಬಾ ಫ್ಲೈವುಡ್ & ಹಾರ್ಡ್ ವೇರ್ ಅಲ್ಯೂಮಿನಿಯಂ ವರ್ಕ್ಸ್ ಸ್ಥಳಾಂತರಗೊಂಡು ಶುಭಾರಂಭ

ನಿಂತಿಕಲ್ಲು ಸಮೀಪದ ಎಣ್ಮೂರಿನಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ಕಾಳಿಕಾಂಬಾ ಫ್ಲೈವುಡ್ & ಹಾರ್ಡ್ ವೇರ್ ಅಲ್ಯೂಮಿನಿಯಂ ವರ್ಕ್ಸ್ ಸಂಸ್ಥೆಯು ನಿಂತಿಕಲ್ಲಿನ ಸಾನಿಧ್ಯ ಸಂಕೀರ್ಣಕ್ಕೆ ಸ್ಥಳಾಂತರಗೊಂಡು ಜ.10ರಂದು ಶುಭಾರಂಭಗೊಂಡಿತು. ಧಾರ್ಮಿಕ ಪರಿಷತ್ ಸದಸ್ಯರಾದ ರಘುನಾಥ ರೈ ಅಲೆಂಗಾರ ದೀಪ ಬೆಳಗುವ ಮೂಲಕ ಮಳಿಗೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾಲಕರಾದ ಪ್ರಶಾಂತ್ ನರ್ಲಡ್ಕ, ಮಾಲಕರ ತಂದೆ ಜನಾರ್ದನ, ಮಾಲಕರ ತಾಯಿ...

ಜ.11 ರಂದು ಸೇವಾಜೆ ಮಡಪ್ಪಾಡಿ ರಸ್ತೆಗೆ ಗುದ್ದಲಿ ಪೂಜೆ- ಪತ್ರಕರ್ತರ ಗ್ರಾಮ ವಾಸ್ತವ್ಯದ ಫಲಶ್ರುತಿ

ಮಡಪ್ಪಾಡಿ ಗ್ರಾಮವನ್ನು ಸಂಪರ್ಕಿಸುವ ಸೇವಾಜೆ- ಮಡಪ್ಪಾಡಿ ರಸ್ತೆ ಅಭಿವೃದ್ಧಿಗೆ ಕಾಲ ಕೂಡಿಬಂದಿದ್ದು ಬಂದರು ಮೀನುಗಾರಿಕೆ ಮತ್ತು ಒಳನಾಡು ಜಲ ಸಾರಿಗೆ ಸಚಿವ ಎಸ್.ಅಂಗಾರ ಜ‌.11ರಂದು ಗುದ್ದಲಿಪೂಜೆ ನೆರವೇರಿಸಲಿದ್ದಾರೆ. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಗ್ರಾಮ ವಾಸ್ತವ್ಯ ಮಾಡಿದುದರ ಪಲಶ್ರುತಿಯಾಗಿ ಈ ರಸ್ತೆ ಅಭಿವೃದ್ಧಿ ಕಾಣಲಿದೆ. ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ಮಡಪ್ಪಾಡಿ ಗ್ರಾಮದ ಸಂಪರ್ಕ ರಸ್ತೆ ಅಭಿವೃದ್ಧಿ...

ಕುಕ್ಕೆ ; ಕಿರುಷಷ್ಠಿ ಮಹೋತ್ಸವ – ರಥ ಎಳೆದ ಸಿಬ್ಬಂದಿಗಳು

ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಪುಷ್ಯ ಶುದ್ದ ಕಿರುಷಷ್ಠಿಯ ದಿನವಾದ ಜ.8 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವವು ಸರಕಾರದ ಮತ್ತು ಜಿಲ್ಲಾಧಿಕಾರಿಗಳ ಕೋವಿಡ್ 19 ಮಾರ್ಗಸೂಚಿಗೆ ಅನುಗುಣವಾಗಿ ನೆರವೇರಿತು.ತಳಿರು, ತೋರಣ, ಸೀಯಾಳ, ಅಡಿಕೆ,ಬಾಳೆ, ಬಾಳೆಗೊನೆ ಅಲಂಕಾರದ ರಥದಲ್ಲಿ ಶ್ರೀ ದೇವರ ಉತ್ಸವ ನೆರವೇರಿತು. ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತರಾಮ...

ಪೆರಾಜೆ : ಮಕ್ಕಳಿಗೆ ಕೋ- ವ್ಯಾಕ್ಸಿನ್ ಲಸಿಕಾ ಅಭಿಯಾನ

ಕ್ಷೇಮ ಮತ್ತು ಆರೋಗ್ಯ ಕೇಂದ್ರ ಸಂಪಾಜೆ,ವಿದ್ವಾಲ ಶೈಕ್ಷಣಿಕ ಗ್ರಾಮೀಣ ಅಭಿವೃದ್ಧಿ ಕೇಂದ್ರ ಬೆಂಗಳೂರು, ಉಪಕೇಂದ್ರ ಪೆರಾಜೆ ಇದರ ವತಿಯಿಂದ 15-18ವರ್ಷ ವಯಸ್ಸಿನ ಮಕ್ಕಳಿಗೆ ಕೋ- ವ್ಯಾಕ್ಸಿನ್ ಲಸಿಕಾ ಅಭಿಯಾನ ಪೆರಾಜೆ ಜ್ಯೋತಿ ಪ್ರೌಢ ಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿ ನಾಯಕ ಉದ್ಘಾಟಿಸಿದರು. ಕಾರ್ಯಾಕ್ರಮದ ಅಧ್ಯಕ್ಷತೆಯನ್ನು ಜ್ಯೋತಿ ವಿದ್ಯಾ ಸಂಸ್ಥೆಯ ಸಂಚಾಲಕರಾದ ಹರೀಶ್ ಚಂದ್ರ...

ಬಾಳುಗೋಡು : ಸ್ವಚ್ಛತಾ ಕಾರ್ಯಕ್ರಮ

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಜ.09 ರಂದು ಬಾಳುಗೋಡು ಮಾನಡ್ಕ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಸುತ್ತ-ಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಬಾಳುಗೋಡು ಒಕ್ಕೂಟದ ಅಧ್ಯಕ್ಷರಾದ ಲೋಕೇಶ್, ಅಡಳಿತ ಮಂಡಳಿ ಅಧ್ಯಕ್ಷರಾದ ಶೀನಪ್ಪ, ಸೇವಾಪ್ರತಿನಿಧಿ ನಾಗವೇಣಿ ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ

ಬಳ್ಪ : ಕೊರಗಜ್ಜ ನೇಮೋತ್ಸವ – ಅವಮಾನ ಮಾಡುವವರಿಗೆ ಶಿಕ್ಷೆ ನೀಡುವಂತೆ ಸಾಮೂಹಿಕ ಪ್ರಾರ್ಥನೆ

https://youtu.be/wO3jrdDtgNM ಕಡಬ ತಾಲೂಕು ಬಳ್ಪ ಗ್ರಾಮದ ನೀರಜರಿ ಎಂಬಲ್ಲಿ ಕೊರಗಜ್ಜ ದೈವದ ನೇಮೋತ್ಸವ ಸಂದರ್ಭದಲ್ಲಿ ಮೊನ್ನೆ ವಿಟ್ಲದಲ್ಲಿ ನಡೆದ ಘಟನೆ ಬಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ದೈವದ ನುಡಿ ಪಡೆಯಲಾಯಿತು. ಈ ಸಂದರ್ಭದಲ್ಲಿ ಶ್ರೀ ವೆಂಕಟ್ ದಂಬೆಕೋಡಿ, ಬಜರಂಗದಳದ ತಾಲೂಕು ಸಂಯೋಜಕರಾದ ಸಂದೀಪ್ ವಳಲಂಬೆ, ಹಿಂದು ಜಾಗರಣ ವೇದಿಕೆ ಗುತ್ತಿಗಾರು ವಲಯ ಅಧ್ಯಕ್ಷ ವರ್ಷಿತ್ ಕಡ್ತಲ್...

ವಿಟ್ಲದಲ್ಲಿ ಕೊರಗಜ್ಜನಿಗೆ ಅವಮಾನ ಪ್ರಕರಣ- ಬೆಳ್ಳಾರೆ ವಿಹಿಂಪ ವತಿಯಿಂದ ಖಂಡನೆ, ಕುಂಡಡ್ಕ ಹಾಗೂ ಕೊಲ್ಯ ಕೊರಗಜ್ಜ ದೈವಸ್ಥಾನದಲ್ಲಿ ಪ್ರಾರ್ಥನೆ

ವಿಟ್ಲದ ಸಾಲೆತ್ತೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಕೊರಗಜ್ಜ ದೈವದ ಅವಮಾನವಾಗಿದ್ದು, ಈ ಹಿನ್ನೆಲೆಯಲ್ಲಿ ವಿಹಿಂಪ ಬಜರಂಗದಳ ವಾಲ್ಮೀಕಿ ಶಾಖೆ ಬೆಳ್ಳಾರೆಯ ವತಿಯಿಂದ ವ್ಯಾಪಕ ಖಂಡನೆ ವ್ಯಕ್ತಪಡಿಸಲಾಯಿತು. ಕೃತ್ಯವನ್ನು ಖಂಡಿಸಿ ಪೆರುವಾಜೆಯ ಕುಂಡಡ್ಕ ಹಾಗೂ ಕೊಲ್ಯ ಕೊರಗಜ್ಜ ದೈವಸ್ಥಾನಗಳಲ್ಲಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡುವಂತೆ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಮುಖ್ಯಸ್ಥರು ಹಾಗೂ ಬೆಳ್ಳಾರೆ ವಿಹಿಂಪ ಪ್ರಮುಖರು,...
Loading posts...

All posts loaded

No more posts

error: Content is protected !!