Ad Widget

ವಿಜೃಂಭಣೆಯ ಅಯ್ಯನಕಟ್ಟೆ ಜಾತ್ರೋತ್ಸವ ಸಂಪನ್ನ

ಅತ್ಯಂತ ಕಾರಣೀಕವಾದ, ಇತಿಹಾಸ ಪ್ರಸಿದ್ಧ, ನಂಬಿದವರಿಗೆ ಇಂಬು ಕೊಡುವ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಪ್ರತಿಷ್ಟಾ ವಾರ್ಷಿಕೋತ್ಸವ ಹಾಗೂ ನೇಮೋತ್ಸವ "ಅಯ್ಯನಕಟ್ಟೆ ಜಾತ್ರೆ"ಯು ಜ.29ರಂದು ಕಳಂಜ ಕಲ್ಲಮಾಡದಿಂದ ತಂಬಿನಮಕ್ಕಿವರೆಗೆ ಮಾರಿ ಹೊರಡುವ ಮೂಲಕ ಸಂಪನ್ನಗೊಂಡಿತು. ಜ.26 ಬುಧವಾರದಂದು ಪ್ರತಿಷ್ಟಾ ವಾರ್ಷಿಕೋತ್ಸವದೊಂದಿಗೆ ಆರಂಭಗೊಂಡ ಜಾತ್ರೆಯು ಕಳಂಜ ಗ್ರಾಮದ ತಂಟೆಪ್ಪಾಡಿ ಶ್ರೀ ಶಿರಾಡಿ ದೈವದ...

ಪಂಜಿಗಾರು ಮುಖ್ಯ ರಸ್ತೆಯ ಬಳಿ ಮೋರಿ ಕುಸಿತ

ಬೆಳ್ಳಾರೆ-ನಿಂತಿಕಲ್ಲು ಮುಖ್ಯ ರಸ್ತೆಯ ಪಂಜಿಗಾರು ಮಣಿಮಜಲು ತಿರುವಿನ ಬಳಿ ಮೋರಿ ಕುಸಿತಗೊಂಡಿದ್ದು ಅಪಾಯಕ್ಕೆ ಆಹ್ವಾನ ನೀಡುವಂತಿದೆ. ಈಗಾಗಲೇ ಕೆಲವು ವಾಹನಗಳು ಈ ಮೋರಿಗೆ ಬಿದ್ದು ಅಪಘಾತ ಸಂಭವಿಸಿದೆ. ಸುಬ್ರಹ್ಮಣ್ಯ, ಪುತ್ತೂರು ಸಂಪರ್ಕಕ್ಕೆ ಪ್ರಧಾನ ರಸ್ತೆಯಾಗಿರುವ ಈ ರಸ್ತೆಯಲ್ಲಿ ದಿನನಿತ್ಯ ಅನೇಕ ವಾಹನಗಳು ಸಂಚರಿಸುತ್ತಿದ್ದು, ಶೀಘ್ರವೇ ದುರಸ್ತಿಗೊಳಿಸಬೇಕಾದ ಅನಿವಾರ್ಯತೆ ಇದೆ. ಈಗಾಗಲೇ ಗ್ರಾಮ ಪಂಚಾಯತ್ ಹಾಗೂ ಪಿಡಬ್ಲ್ಯೂಡಿಗೆ...
Ad Widget

ಬಂಗ್ಲೆಗುಡ್ಡೆ : ಸ.ಹಿ.ಪ್ರಾ ಶಾಲೆಯಲ್ಲಿ ಮೆಟ್ರಿಕ್ ಮೇಳ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬಂಗ್ಲೆಗುಡ್ಡೆಯಲ್ಲಿ ಜ.28 ರಂದು ಮೆಟ್ರಿಕ್ ಮೇಳ ನಡೆಯಿತು. ಮುತ್ತಪ್ಪ ಗೌಡ ಹೊಸಗದ್ದೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತಂದ ತರಕಾರಿಗಳನ್ನು ಮುಂತಾದವುಗಳನ್ನು ಮಾರಾಟ ಮಾಡಿದರು.ಈ ಸಂದರ್ಭದಲ್ಲಿ ಶಾಲಾ ಎಸ್.ಡಿ.ಎಂ.ಸಿ ಅದ್ಯಕ್ಷರು ಹಾಗೂ ಸದಸ್ಯರು, ಗ್ರಾಮಪಂಚಾಯತ್ ಉಪಾಧ್ಯಕ್ಷರು ಹಾಗೂ ಸಿಬ್ಬಂದಿವರ್ಗ, ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು, ವಿದ್ಯಾರ್ಥಿಗಳು...

ಅಯ್ಯನಕಟ್ಟೆ ಜಾತ್ರೆ- ಕಲ್ಲಮಾಡದ ಬಳಿ ಶಿರಾಡಿ, ಧೂಮಾವತಿ ಹಾಗೂ ಕೊಡಮಣಿತ್ತಾಯ ದೈವದ ನೇಮೋತ್ಸವ

ಅತ್ಯಂತ ಕಾರಣೀಕವಾದ, ಇತಿಹಾಸ ಪ್ರಸಿದ್ಧ, ನಂಬಿದವರಿಗೆ ಇಂಬು ಕೊಡುವ ಅಯ್ಯನಕಟ್ಟೆ ಶ್ರೀ ಇಷ್ಟದೇವತಾ ಉಳ್ಳಾಕುಲು ಹಾಗೂ ಸಪರಿವಾರ ದೈವಗಳ ಪ್ರತಿಷ್ಟಾ ವಾರ್ಷಿಕೋತ್ಸವ ಹಾಗೂ ನೇಮೋತ್ಸವ "ಅಯ್ಯನಕಟ್ಟೆ ಜಾತ್ರೆ" ನಡೆಯುತ್ತಿದ್ದು ಇಂದು ಕಲ್ಲಮಾಡದ ಬಳಿ ಶಿರಾಡಿ, ಧೂಮಾವತಿ ಹಾಗೂ ಕೊಡಮಣಿತ್ತಾಯ ದೈವದ ನೇಮೋತ್ಸವ ನಡೆಯಿತು. ಪೂರ್ವಾಹ್ನ ತಂಟೆಪ್ಪಾಡಿಯಿಂದ ಶಿರಾಡಿ ದೈವದ ಭಂಡಾರ, ಕಳಂಜ ಗುತ್ತಿನಿಂದ ಧೂಮಾವತಿ ದೈವದ...

ಫೆ.08 – ಫೆ 10: ಐವರ್ನಾಡು ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ

ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಶ್ರೀ ವೇದಮೂರ್ತಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ಫೆ.08 ರಿಂದ ಫೆ.10 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.ಫೆ 02 ರಂದು ಗೊನೆ ಕಡೆಯುವ ಕಾರ್ಯಕ್ರಮ ನಡೆಯಲಿದೆ. ಫೆ 08 ರಂದು ಬೆಳಿಗ್ಗೆ 8.30 ರಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆದು 10...

ಮಾವಿನಕಟ್ಟೆ : ಆರೋಗ್ಯ ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿಯಾಗಿ ಕು. ಮೋನಿಷಾ

ದೇವಚಳ್ಳ ಗ್ರಾಮದ ಮಾವಿನಕಟ್ಟೆ ಆರೋಗ್ಯ ಉಪಕೇಂದ್ರದ ಸಮುದಾಯ ಆರೋಗ್ಯ ಅಧಿಕಾರಿಯಾಗಿ ಕು.ಮೋನಿಷಾ ಜಿ.ಎಸ್. ರವರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಶನಿವಾರ ಮಧ್ಯಾಹ್ನ ನಂತರ ಮತ್ತು ರಜಾದಿನ ಹೊರತುಪಡಿಸಿ ಲಭ್ಯವಿರುತ್ತಾರೆ.ಇವರು ನಾಲ್ಕೂರು ಗ್ರಾಮದ ಗುಡ್ಡೆಮನೆ ಗೋಪಾಲ ಗೌಡ ಮತ್ತು ತೇಜಸ್ವಿನಿ ದಂಪತಿಗಳ ಪುತ್ರಿ.

ಕವನ : ಕರ್ಮ ಹಿಂತಿರುಗಿದಾಗ…

ತಿಳಿದು ತಿಳಿದು ಮಾಡಿದ ತಪ್ಪು, ಅಳೆದು ತೂಗಿ ನೀಡಿದ ದಾನ ನಿನ್ನ ಬದುಕ ಹಾದಿಯಲ್ಲಿ ಎಂದೂ ಒಳಿತು ಮಾಡದು…ಸ್ವಾರ್ಥದಿಂದ ಮಾಡಿದ ಸೇವೆ, ಸುಳ್ಳಿನಿಂದ ಕಟ್ಟಿದ ಅರಮನೆ ಹೆಚ್ಚು ಕಾಲ ಉಳಿಯದು ಇಲ್ಲಿ ಓ ಗೆಳೆಯ…ಮನದ ಒಳಗೆ ವಿಷವ ತುಂಬಿ ಹೊರಗೆ ಸಿಹಿಯ ನೀಡುವಂತೆ ನಟಿಸಿದರೆ ಏನು ಫಲವೋ ಓ ಗೆಳೆಯ… ತಿಳಿದು ತಿಳಿದು ತಪ್ಪನೆಂದೂ ಮಾಡಲೆಬೇಡ...
error: Content is protected !!