- Thursday
- November 21st, 2024
ಮುಕ್ಕೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಿವೃತ್ತ ಬ್ಯಾಂಕ್ ಉದ್ಯೋಗಿ, ಮುಕ್ಕೂರು ಶಾಲಾ ಹಿತ ಚಿಂತನಾ ಸಮಿತಿ ಕೋಶಾಧಿಕಾರಿ ಹೊನ್ನಪ್ಪ ಗೌಡ ಚಾಮುಂಡಿಮೂಲೆ ಅವರು 18 ಸಾವಿರ ರೂ. ಮೌಲ್ಯದ ಕೊಳವೆ ಬಾವಿ ಪಂಪ್ ಅನ್ನು ಜ.21 ರಂದು ಕೊಡುಗೆಯಾಗಿ ನೀಡಿದರು. ಕಳೆದ ಕೆಲ ದಿನಗಳಿಂದ ಶಾಲೆಯ ಕೊಳವೆಬಾವಿ ಪಂಪ್ ಹಾಳಾಗಿ ಪರ್ಯಾಯ ವ್ಯವಸ್ಥೆ ಇಲ್ಲದೆ...
ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ 2022 ನೇ ಸಾಲಿನ ಯುವಸೇವೆ ಹಾಗೂ ಕ್ರೀಡಾಕ್ಷೇತ್ರದ ಪ್ರತಿಷ್ಠಿತ ಸ್ವಾಮಿ ವಿವೇಕಾನಂದ ಸದ್ಭಾವನಾ ಪ್ರಶಸ್ತಿ ಗೆ ಆಯ್ಕೆಯಾಗಿದೆ. ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದಿಂದ ಕೊಡಮಾಡುವ ರಾಜ್ಯ ಪ್ರಶಸ್ತಿಯಾಗಿದ್ದು, ಯುವಸೇವೆ ಮತ್ತು ಕ್ರೀಡೆ ಯನ್ನು ಪರಿಗಣಿಸಿ ಕರ್ನಾಟಕ ರಾಜ್ಯ ದಲ್ಲಿ ಸಾಂಘಿಕ ಪ್ರಶಸ್ತಿ ಗೆ ಎರಡೇ ಸಂಸ್ಥೆಗಳು ಆಯ್ಕೆ ಆಗಿವೆ....
ಸಾರ್ವಜನಿಕರ ಶ್ರೀಕೃಷ್ಣ ಸೇವಾ ಸಮಿತಿ ಶೇಣಿ ಇದರ ನೇತೃತ್ವದಲ್ಲಿ ಜ 23, ಆದಿತ್ಯವಾರದಂದು ಬೆಳಿಗ್ಗೆ 9 ರಿಂದ ಶೇಣಿ ಸ.ಹಿ.ಪ್ರಾ.ಶಾಲೆಯಲ್ಲಿ ಅಸಂಘಟಿತ ಕಾರ್ಮಿಕರ ಇ- ಶ್ರಮ್ ಕಾರ್ಡ್ ನೋಂದಣಿ ಹಾಗೂ ಪಾನ್ ಕಾರ್ಡ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರ ನಡೆಯಲಿದೆ. ಸಾರ್ವಜನಿಕರು ಈ ಶಿಬಿರದಲ್ಲಿ ಪಾಲ್ಗೊಂಡು ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಸಂಘಟಕರು ತಿಳಿಸಿದ್ದಾರೆ.
ಶ್ರೀ ಮಹಿಷಮರ್ದಿನಿ ಯಕ್ಷಗಾನ ಕಲಾ ಕೇಂದ್ರ ಕೇರ್ಪಡ ಇದರ ವತಿಯಿಂದ ಎರಡನೇ ವರ್ಷದ ಯಕ್ಷಗಾನ ನಾಟ್ಯ ತರಬೇತಿ ಶ್ರೀ ಯಕ್ಷಮಣಿ ಗಿರೀಶ್ ಗಡಿಕಲ್ಲು ಇವರಿಂದ 23.01.2022 ನೇ ಆದಿತ್ಯವಾರ ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡ ಇಲ್ಲಿ ಪ್ರಾರಂಭವಾಗಲಿದೆ. ಕಳೆದ ವರ್ಷ 23 ವಿದ್ಯಾರ್ಥಿಗಳು ರಂಗಪ್ರವೇಶ ಮಾಡಿರುತ್ತಾರೆ.