ಗುತ್ತಿಗಾರಿನ ಬಹುದಿನಗಳ ಬೇಡಿಕೆಯಾಗಿದ್ದ ಅಂಬ್ಯುಲೆನ್ಸ್ ಸೇವೆ ಜ.14 ಲೋಕಾರ್ಪಣೆಗೊಳ್ಳಲಿದೆ. ಈ ಮಹತ್ಕಾರ್ಯಕ್ಕೆ ನೂರಾರು ಜನ ದೇಣಿಗೆ ನೀಡಿ ಬೆಂಬಲಿಸಿದ್ದಾರೆ. ಇಲ್ಲಿ ಪ್ರಮುಖವಾಗಿ ಗುತ್ತಿಗಾರಿನಲ್ಲಿ ಅಟೋ ಚಾಲಕರಾಗಿ ದುಡಿಯುತ್ತಿರುವ ಚಂದ್ರಶೇಖರ ಕಡೋಡಿಯವರ ಸಾಧನೆ ಇದೆ. ಸಾರ್ವಜನಿಕ ಸಭೆ ಕರೆದು ಗುತ್ತಿಗಾರಿನಲ್ಲಿ ಅಮರ
ತಾಲೂಕು ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಹುಟ್ಟು ಹಾಕಿ ಆ ಮೂಲಕ ದೇಣಿಗೆ ಮುಖಾಂತರ ಬೃಹತ್ ಮೊತ್ತ ಸಂಗ್ರಹಿಸಿದ್ದಾರೆ. ಈ ತುರ್ತು ಸೇವೆಯ ಆಂಬ್ಯುಲೆನ್ಸ್ ಯೋಜನೆ ಜ.14
ರಂದು ಬೆಳಿಗ್ಗೆ 9 ಗಂಟೆಗೆ ಗುತ್ತಿಗಾರಿನ ಮುತ್ತಪ್ಪ ನಗರದಲ್ಲಿ
ಲೋಕಾರ್ಪಣೆಗೊಳ್ಳಲಿದೆ ಎಂದು ಸಂಘಟಕರು
ತಿಳಿಸಿದ್ದಾರೆ.
ಉದ್ಘಾಟನೆಗೆ ಕಾಯದೇ ಸೇವೆ ಆರಂಭಿಸಿದ ಅಂಬ್ಯುಲೆನ್ಸ್
ಲೋಕಾರ್ಪಣೆಗೂ ಒಂದು ದಿನ ಮೊದಲೇ ಗುತ್ತಿಗಾರಿನಲ್ಲಿ ನಡೆದ ಬೈಕ್ ಅಪಘಾತದ ಗಾಯಾಳುಗಳನ್ನು ಸುಳ್ಯದ ಆಸ್ಪತ್ರೆಗೆ ಸಾಗಿಸುವ ಮೂಲಕ ಸೇವೆ ಆರಂಭಿಸಿದೆ. ಹಾಗೂ ಗಾಯಾಳು
ಅಪಘಾತದಲ್ಲಿ ಗಾಯಗೊಂಡಿದ್ದ ಶಿವ ಪಾರೆಪ್ಪಾಡಿ ಮತ್ತು ಚಿನ್ನಪ್ಪ ಕುಚ್ಚಾಲ ಅವರನ್ನು ಸುಳ್ಯ ಆಸ್ಪತ್ರೆಗೆ ತಲುಪಿಸಲಾಯಿತು.
ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ದುರ್ಗೇಶ್ ಪಾರೆಪ್ಪಾಡಿ ಆಂಬುಲೆನ್ಸ್ ನ ಸೇವಾ ವೆಚ್ಚವನ್ನು ಟ್ರಸ್ಟ್ ಖಾತೆಗೆ ವರ್ಗಾವಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.