Ad Widget

ಪೆರುವಾಜೆ | CPL – 2K22 ಮುಕ್ತಾಯ : ಫಾಸ್ಟ್ ಆಂಡ್ ಫ್ಯೂರಿಯಸ್ ತಂಡ ಜಯಶಾಲಿ

. . . . . . . . .
   ಡಾ. ಕೆ. ಶಿವರಾಮ ಕಾರಂತ  ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಬೆಳ್ಳಾರೆ ಇಲ್ಲಿ ಪ್ರತಿ ವರ್ಷದಂತೆ ಈ ವರ್ಷವು "ಕಾಲೇಜು ಪ್ರೀಮಿಯರ್ ಲೀಗ್ ಸೀಸನ್ - 2" ಇದು ದಿನಾಂಕ 11 ಮತ್ತು 12 ರಂದು ಇಲ್ಲಿಯ  ಕ್ರೀಡಾಂಗಣದಲ್ಲಿ ನಡೆಯಿತು.  ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ರಾಘವ. ಎನ್ ಮತ್ತು ಇತರ ಉಪನ್ಯಾಸಕರು ಚೆಂಡು ಎಸೆಯುವುದರೊಂದಿಗೆ ಉದ್ಘಾಟಿಸಿದರು.
 ಲೀಗ್ ಮಾದರಿಯ ಈ ಪಂದ್ಯಾಕೂಟದಲ್ಲಿ ಒಟ್ಟು 6 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ರಂಜಿತ್ ಪೆರುವಾಜೆ ಇವರ ನಾಯಕತ್ವದ "ಫಾಸ್ಟ್ ಆಂಡ್ ಫ್ಯೂರಿಯಸ್ ಪೆರುವಾಜೆ" ತಂಡವು ವಿಜಯ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡಿತು. ಅದೇ ರೀತಿ ರನ್ನರ್ಸ್ ಆಗಿ ಧನುರಾಜ್ ಇವರ ನಾಯಕತ್ವದ "ಯಂಗ್ ಡೊಮಿನೇಟರ್ಸ್  ಪೆರುವಾಜೆ" ತಂಡವು ಹೊರಹೊಮ್ಮಿತು. ಉತ್ತಮ ದಾಳಿಗಾರನಾಗಿ ವಿಜೇತ ತಂಡವು ರಂಜಿತ್ ಪೆರುವಾಜೆ ಅದೇ ರೀತಿ ಉತ್ತಮ ದಾಂಡಿಗನಾಗಿ ಹರ್ಷಿತ್ ಇವರು ಗುರುತಿಸಲ್ಪಟ್ಟರು. ಹಾಗೆಯೇ  ಒಟ್ಟು ಪಂದ್ಯಾವಳಿಯ ಉತ್ತಮ ಆಟಗಾರ ಎನ್ನುವ ಪಟ್ಟವು ರನ್ನರ್ಸ್ ತಂಡದ ನಾಯಕನಾದ ಧನುರಾಜ್ ಇವರ ಕೈ ಸೇರಿತು.
  ವಿಜೇತರಿಗೆ ಹಾಗೂ ರನ್ನರ್ಸ್ ಗಳಿಗೆ ಪ್ರಾಂಶುಪಾಲರು, ಉಪನ್ಯಾಸಕರುಗಳು, ನಿರ್ಣಾಯಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಒಟ್ಟುಗೂಡಿ ಪ್ರಶಸ್ತಿಯನ್ನು ನೀಡಿದರು.

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading