- Wednesday
- April 2nd, 2025

ನಾಲ್ಕೂರು ಗ್ರಾಮದ ಕಲ್ಲಾಜೆ ಹಲ್ಗುಜಿ ಶ್ರೀ ಶಿರಾಡಿ ದೈವ, ಅಗ್ನಿ ಗುಳಿಗ ಮತ್ತು ಪರಿವಾರ ದೈವಗಳ ದೈವಸ್ಥಾನ ಜೀರ್ಣೋದ್ಧಾರಗೊಂಡು ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಜ್ಜಾಗಿ ನಿಂತಿದ್ದು, ಜ.13 ರಂದು ಅದ್ದೂರಿ ಹಸಿರುವಾಣಿ ಮೆರವಣಿಗೆ ನಡೆಯಿತು.ಹಲ್ಗುಜಿ, ಅಂಜೇರಿ, ರಾಗಿಯಡ್ಕ, ಬನಕೋಡಿ, ಕಲ್ಲಾಜೆ, ಅಂಬೆಕಲ್ಲು, ಎರ್ದಡ್ಕ, ಕೊರಂಬಟ, ಕಾರ್ಜ, ಕಾಯರಮೊಗೆರು, ವಲ್ಪಾರೆ, ಕೊಂಬೊಟ್ಟು, ಮರಕತ, ಉಜಿರಡ್ಕ, ಉದೇರಿ, ಇಜಿನಡ್ಕ,...

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವವು ಜ.16 ಆದಿತ್ಯವಾರದಿಂದ ಜ.21 ಶುಕ್ರವಾರದ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಜಾತ್ರಾ ಮಹೋತ್ಸವದ ಅಂಗವಾಗಿ ದಿನಾಂಕ 16-01-2022ನೇ ಆದಿತ್ಯವಾರ ಬೆಳಿಗ್ಗೆ ಗಂಟೆ 10.00ಕ್ಕೆ ಉಗ್ರಾಣ ಮುಹೂರ್ತ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ ಗಂಟೆ 7.00ಕ್ಕೆ ದೇವತಾ ಪ್ರಾರ್ಥನೆ, ಧ್ವಜಾರೋಹಣ, 7.30ಕ್ಕೆ ಶ್ರೀ ದೇವರ...

ಕೆ.ವಿ.ಜಿ ಕಾನೂನು ಮಹಾವಿದ್ಯಾಲಯದಲ್ಲಿ ಸ್ವಾಮಿ ವಿವೇಕಾನಂದರ ೧೫೯ನೇ ಜಯಂತಿ ಉತ್ಸವವನ್ನು ಜ. ೧೩ರಂದು ಆಚರಿಸಲಾಯಿತು.ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನೆಹರು ಮೆಮೋರಿಯಲ್ ಪದವಿಪೂರ್ವ ಕಾಲೇಜು ಅರಂತೋಡು, ಇಲ್ಲಿನ ಉಪನ್ಯಾಸಕ ಪದ್ಮಕುಮಾರ್ ರವರು ಸ್ವಾಮಿ ವಿವೇಕಾನಂದರ ಜೀವನ ಸಂದೇಶವನ್ನು ಸಾರಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಉದಯಕೃಷ್ಣ. ಬಿ ಅಧ್ಯಕ್ಷತೆಯನ್ನು ವಹಿಸಿದ್ದರು.ವೇದಿಕೆಯಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರಾದ ಜಯರಾಮ್.ವೈ...

ದೇಶದ ಪ್ರಸಿದ್ಧ ಕಂಪೆನಿಯಾದ ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್‌ನ ‘ಗ್ಲೋಬಲ್ ಮೋಟಾರ್ಸ್’ ಶಾಖೆ ಜ.10 ರಂದು ಸುಳ್ಯದ ಶ್ರೀ ರಾಮ್ ಪೇಟೆಯ ಜೆ.ಪಿ.ರೋಡ್ ನಲ್ಲಿರುವ ಕುರುಂಜಿಕಾರ್ಸ್ ವಿಶ್ವ ಕಾಂಪ್ಲೆಕ್ಸ್‌ನ ದೀಕ್ಷಾ ಟೆಕ್ಸ್‌ಟೈಲ್ಸ್ ಹತ್ತಿರ ಶುಭಾರಂಭಗೊಂಡಿತು. *ಅತ್ಯುತ್ತಮ ಮೈಲೇಜ್- ಕಡಿಮೆ ಬೆಲೆ* ಒಕಿನಾವಾ ಎಲೆಕ್ಟ್ರಿಕ್ ಸ್ಕೂಟರ್ ದೇಶದ ಪ್ರಸಿದ್ಧ ಕಂಪೆನಿಯಾಗಿದ್ದು, 68000 ದಿಂದ 1 ಲಕ್ಷದ 23 ಸಾವಿರದ...

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ "ವಿವೇಕ ಚಿಂತನೆ- ಬದುಕಿಗೆ ದಾರಿ" ಎಂಬ ಶೀರ್ಷಿಕೆಯಡಿಯಲ್ಲಿ ವಿವೇಕಾನಂದ ಜಯಂತಿ ಆಚರಣೆ ಕಾರ್ಯಕ್ರಮ ಜನವರಿ 12 ರಂದು ಕಾಲೇಜು ಸಭಾಂಗಣದಲ್ಲಿ ನಡೆಯಿತು. ನೆಹರೂ ಮೆಮೋರಿಯಲ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಹರಿಣಿ ಪುತ್ತೂರಾಯ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಾ, " ವಿವೇಕಾನಂದರು...

ಆಜಾದಿ ಕಾ ಅಮೃತ ಮಹೋತ್ಸವ ಹಾಗೂ ಸ್ವಾಮಿ ವಿವೇಕಾನಂದರ 150 ನೇ ಜನ್ಮ ದಿನಾಚರಣೆಯ ಅಂಗವಾಗಿ ಜ.12 ರಂದು ಸುಬ್ರಹ್ಮಣ್ಯ ಗ್ರಾಮಪಂಚಾಯತ್ ನಲ್ಲಿ ಯುವ ಸಪ್ತಾಹ ವಿಶೇಷ ಯುವ ಗ್ರಾಮಸಭೆಯು ನಡೆಯಿತು.ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅದ್ಯಕ್ಷರಾದ ಶ್ರೀಮತಿ ಲಲಿತಾ ಗುಂಡಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿ ಯು.ಡಿ ಶೇಖರ್ ಪ್ರಾಸ್ತಾವಿಕ...

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ನ ಡಿಜಿಟಲ್ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದ ಹಾಗೂ ಪುಸ್ತಕ ಗೂಡು ಉದ್ಘಾಟನಾ ಸಮಾರಂಭ ಜ. 13ರಂದು ನಡೆಯಿತು. ಡಿಜಿಟಲ್ ಮತ್ತು ಮಾಹಿತಿ ಕೇಂದ್ರದ ಮತ್ತು ಪುಸ್ತಕ ಗೂಡು ಉದ್ಘಾಟನೆಯನ್ನು ಗ್ರಾ.ಪಂ.ಅಧ್ಯಕ್ಷೆ ಚಿತ್ರಾಕುಮಾರಿ ನೆರವೇರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾ ಅಧಿಕಾರಿ...

ಅಮರಮುಡ್ನೂರು ಗ್ರಾಮ ಪಂಚಾಯತ್ ಸದಸ್ಯ ವೆಂಕಟ್ರಮಣ ಗೌಡ ಇಟ್ಟಿಗುಂಡಿಯವರ ಪುತ್ರಿ ಕು.ಲಿಖಿತ (23) ಜ.12 ರಂದು ಸ್ವಗೃಹದಲ್ಲಿ ಕೊನೆಯುಸಿರೆಳೆದರು. ಮೃತ ಯುವತಿ ಕಳೆದ ಕೆಲವು ಸಮಯಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಅಸ್ವಸ್ಥಗೊಂಡಿದ್ದ ಅವಳಿಗೆ ವೈದ್ಯರ ಸಲಹೆಯಂತೆ ಚಿಕಿತ್ಸೆ ಕೊಡಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.ಮೃತರು ಅಜ್ಜ ಶೇಷಪ್ಪ, ಅಜ್ಜಿ ವೀರಮ್ಮ, ತಂದೆ ವೆಂಕಟ್ರಮಣ...

ಶತಮಾನ ಕಂಡ ಶಾಲೆಗಳ ಮೂಲಭೂತ ಸೌಕರ್ಯಗಳಿಗಾಗಿ ಸರಕಾರದಿಂದ ವಿಶೇಷ ಅನುದಾನ ಘೋಷಣೆಯಾಗಿದ್ದು ಗುತ್ತಿಗಾರಿನ ಸ.ಮಾ.ಹಿ. ಪ್ರಾಥಮಿಕ ಶಾಲೆ ಆಯ್ಕೆಯಾಗಿದೆ. ಶತಮಾನ ಕಂಡ ತಾಲೂಕಿನ ಆಯ್ದ ಒಂದು ಶಾಲೆಗೆ ಈ ಅನುದಾನ ಮಂಜೂರಾಗಿದ್ದು ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ರೂ 16.50 ಲಕ್ಷ ಅನುದಾನ ಸಿಗಲಿದೆ.

ಹರಿಹರ ಪಲ್ಲತ್ತಡ್ಕ ಗ್ರಾಮದ ಶ್ರೀ ಹರಿಹರೇಶ್ವರ ದೇವಸ್ಥಾನದ ವಠಾರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹರಿಹರ ಪಲ್ಲತ್ತಡ್ಕ ಒಕ್ಕೂಟ ಹಾಗೂ ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕ ಇವುಗಳ ಸಂಯುಕ್ತಾಶ್ರಯದಲ್ಲಿ ಜ.12 ರಂದು ಸ್ವಚ್ಛತಾ ಕಾರ್ಯಕ್ರಮವನ್ನು ನಡೆಸಲಾಯಿತು.ದೇವಸ್ಥಾನದ ಸುತ್ತಲಿನ ಹುಲ್ಲು ಗಿಡಗಳನ್ನು ತೆರವುಗೊಳಿಸಲಾಯಿತು.ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕ ಒಕ್ಕೂಟದ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ, ಸೇವಾಪ್ರತಿನಿಧಿ ರೇಖಾ,...

All posts loaded
No more posts