Ad Widget

ಎಣ್ಮೂರು : ಗೋಡೆ ಕುಸಿದು ಮೃತಪಟ್ಟ ಕುಟುಂಬಕ್ಕೆ ಅಲ್ಪಸಂಖ್ಯಾತರ ಸೊಸೈಟಿ ವತಿಯಿಂದ ಧನಸಹಾಯ

ಎಣ್ಮೂರು ಗ್ರಾಮದ ನರ್ಲಡ್ಕ ಎಂಬಲ್ಲಿ ಡಿ. 19ರಂದು ಶೌಚಾಲಯದ ಗೋಡೆ ಕುಸಿದು ಮೃತಪಟ್ಟ ಅಮೀನ ಹಾಗೂ ನಬೀಸ ರವರ ಮನೆಗೆ ಇಂದು ಸುಳ್ಯ ಅಲ್ಪಸಂಖ್ಯಾತರ ದೊಡ್ಡ ಪ್ರಮಾಣದ ವಿವಿದೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರ ತಂಡ ಇಂದು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಂಘದ ಸಹಾಯನಿಧಿ ವತಿಯಿಂದ ಮೃತರಾದ ಎರಡು...

ಪೆರುವಾಜೆ : ಗೊನೆ ಮುಹೂರ್ತ – ಜ.16ರಿಂದ ಜ.21ರವರೆಗೆ ಜಾತ್ರೆ

ಪೆರುವಾಜೆ ಶ್ರೀ ಜಲದುರ್ಗಾ ದೇವಿ ದೇವಸ್ಥಾನದಲ್ಲಿ ಜ. 16ರಿಂದ ಜ.21ರವರೆಗೆ ಜಾತ್ರೆ ಮಹೋತ್ಸವ ನಡೆಯಲಿದೆ. ಆ ಪ್ರಯುಕ್ತ ಗೊನೆ ಮುಹೂರ್ತ ಜ.10 ರಂದು ನೆರವೇರಿತು. ಪೂಜಾ ಕಾರ್ಯಕ್ರಮವನ್ನು ದೇವಾಲಯದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ನೆರೆವೆರಿಸಿದರು. ಈ ಸಂದರ್ಭ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಿ ಪದ್ಮನಾಭ ಶೆಟ್ಟಿ, ಸಮಿತಿ ಸದಸ್ಯರಾದ ಪಿ ವೆಂಕಟಕೃಷ್ಣ ರಾವ್, ಜಯಪ್ರಕಾಶ್...
Ad Widget

ಮೆಟ್ಟಿನಡ್ಕ : ಶ್ರೀ.ಕ್ಷೇ.ಧ.ಗ್ರಾ.ಯೋಜನೆಯ ಒಕ್ಕೂಟದಿಂದ ಶಾಲಾ ಆವರಣ ಸ್ವಚ್ಛತೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೆಟ್ಟಿನಡ್ಕ ಒಕ್ಕೂಟ ,ಇದರ ಮಾಸಿಕ ಸಭೆ ಮತ್ತು ಕ್ಷೇತ್ರದ ವತಿಯಿಂದ ನಡೆಯುವ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಜ.9 ರಂದು ಕಿರಿಯ ಪ್ರಾಥಮಿಕ ಶಾಲೆ ಮೆಟ್ಟಿನಡ್ಕ ,ಇದರ ಆವರಣದ ಸ್ವಚ್ಛತೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮಾಹಿತಿ ಇರುವ ಕರಪತ್ರವನ್ನು ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಅನಿತಾ...

ಕರ್ನಾಟಕ ಚೇತನ ಪ್ರಶಸ್ತಿ ಪಡೆದ ಕನ್ನಿಕಾ ಅಂಬೆಕಲ್ಲು

ಜ್ಞಾನಮಂದಾರ ಅಕಾಡೆಮಿ ಬೆಂಗಳೂರು, ಇಂಚರ ಸಾಂಸ್ಕೃತಿಕ ಸಂಸ್ಥೆ ಮಂಜೇಶ್ವರ ಆಶ್ರಯದಲ್ಲಿ ಸಂಸ್ಥಾಪಕ ದಿನಾಚರಣೆ 2022ರ ಅಂಗವಾಗಿ ಕರ್ನಾಟಕ ಚೇತನ ಪುರಸ್ಕಾರಕ್ಕೆ ಶಿಕ್ಷಣ ಮತ್ತು ಸಾಂಸ್ಕೃತಿಕ ಕೇಂದ್ರ ಸುಳ್ಯದ ಕನ್ನಿಕಾ ಡಿ ಅಂಬೆಕಲ್ಲು ಇವರು ಆಯ್ಕೆಯಾಗಿದ್ದಾರೆ. ಈಕೆ ಸುಳ್ಯದ ಯುವ ನ್ಯಾಯವಾದಿ‌ ಹಾಗೂ ನೋಟರಿ ದಿನೇಶ್ ಅಂಬೆಕಲ್ಲು ಮತ್ತು ಶಿಕ್ಷಕಿ ಪೂರ್ಣಿಮಾ ಮಡಪ್ಪಾಡಿ ಇವರ ಪುತ್ರಿ. ಜೂನ್...

ಉಬರಡ್ಕ : ಧರ್ಮಜಾಗೃತಿ ಸಮಿತಿಯಿಂದ ದೇವಸ್ಥಾನದ ಪರಿಸರ ಸ್ವಚ್ಛತೆ

ಉಬರಡ್ಕದ ಶ್ರೀ ನರಸಿಂಹ ಶಾಸ್ತಾವು ದೇವಸ್ಥಾನದಲ್ಲಿ ದೇವಸ್ಥಾನದ ಒಳಾಂಗಣ ಹಾಗೂ ಪರಿಸರವನ್ನು ಸುಳ್ಯ ಧರ್ಮಜಾಗೃತಿ ಸಮಿತಿ ಕಾರ್ಯಕರ್ತರು ಸ್ವಚ್ಛತೆಯನ್ನು ಮಾಡಿದರು. ಸಮಿತಿಯ 6 ಮಂದಿ ಕಾರ್ಯಕರ್ತರು, ಮತ್ತು ಭಕ್ತಾದಿಗಳು ಸೇವೆಯಲ್ಲಿ ಪಾಲ್ಗೊಂಡರು.

ಜ.14 ರಂದು ಮಡಪ್ಪಾಡಿಯಲ್ಲಿ ವಾಲಿಬಾಲ್ ಪಂದ್ಯಾಟ

ಜನರಲ್ ಬಿಪಿನ್ ರಾವತ್ ಹಾಗೂ ಪುನೀತ್ ರಾಜಕುಮಾರ್ ಇವರ ಸ್ಮರಣಾರ್ಥ, ಪುನೀತ್ ರಾಜಕುಮಾರ್ ಅಭಿಮಾನಿಗಳ ಬಳಗ ಮಡಪ್ಪಾಡಿ ಹಾಗೂ ಯುವಕ ಮಂಡಲ (ರಿ) ಮಡಪ್ಪಾಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಹ್ವಾನಿತ ತಂಡಗಳ ಲೀಗ್ ಮಾದರಿಯ ವಾಲಿಬಾಲ್ ಪಂದ್ಯಾಟ ಜ.14 ರಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಪ್ಪಾಡಿ ಇದರ ಆಟದ ಮೈದಾನದಲ್ಲಿ ನಡೆಯಲಿದೆ ಎಂದು ಸಂಘಟಕರು...

ವಳಲಂಬೆ : 25 ಲಕ್ಷದಲ್ಲಿ ನಿರ್ಮಾಣಗೊಳ್ಳುತ್ತಿರುವ ತಡೆಗೋಡೆ ಕಾಮಗಾರಿ ವೀಕ್ಷಿಸಿದ ಸಚಿವ ಎಸ್ ಅಂಗಾರ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪ ಹರಿಯುತ್ತಿರುವ ಹೊಳೆಗೆ ಪ್ರವಾಹ ನಿಯಂತ್ರಣಕ್ಕಾಗಿ ಸುಮಾರು 25 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ತಡೆಗೋಡೆ ಕಾಮಗಾರಿಯನ್ನು ಸಚಿವರಾದ ಎಸ್.ಅಂಗಾರ ವೀಕ್ಷಿಸಿದರು. ಈ ತಡೆಗೋಡೆ ನಿರ್ಮಾಣದಿಂದ ವಳಲಂಬೆ ಅಡ್ಡನಪಾರೆ ದೇವ ಸಂಪರ್ಕ ರಸ್ತೆಯು ಅಭಿವೃದ್ಧಿಯಾಗಲಿದೆ. ಈ ಸಂದರ್ಭ ದ.ಕ.ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ವೆಂಕಟ್ ವಳಲಂಬೆ ಉಪಸ್ಥಿತರಿದ್ದರು.

ಗುತ್ತಿಗಾರು : ಅಕ್ರಮ ಸಕ್ರಮ ಸಮಿತಿ ಸಭೆ- ಮಾಸಾಶನ ಪಲಾನುಭವಿಗಳಿಗೆ ಸಚಿವರಿಂದ ಆದೇಶ ಪತ್ರ ವಿತರಣೆ

ಸುಳ್ಯ ತಾಲೂಕು ಅಕ್ರಮ-ಸಕ್ರಮ ಸಮಿತಿ ಸಭೆ ಗುತ್ತಿಗಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಸಚಿವ ಎಸ್.ಅಂಗಾರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಸಾಮಾಜಿಕ ಭದ್ರತೆ ಯೋಜನೆಯಡಿ ಮಾಸಾಶನ ಮಂಜೂರಾತಿಗೊಂಡ ಫಲಾನುಭವಿಗಳಿಗೆ ಆದೇಶ ಪತ್ರವನ್ನು ಸಚಿವರು ವಿತರಿಸಿದರು. ಈ ಸಂದರ್ಭದಲ್ಲಿ ತಹಶೀಲ್ದಾರ್ ಕು.ಅನಿತಾಲಕ್ಷ್ಮೀ, ಅಕ್ರಮ- ಸಕ್ರಮ ಅಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಸದಸ್ಯರಾದ ಬಾಳಪ್ಪ ಕಳಂಜ, ಗುಣವತಿ ಕೊಲ್ಲಂತಡ್ಕ ಉಪಸ್ಥಿತರಿದ್ದರು.

ಸಂಪಾಜೆ : ಗಡಿಕಲ್ಲು- ಅಲಡ್ಕ ರಸ್ತೆ ಕಾಂಕ್ರೀಟೀಕರಣ ಉದ್ಘಾಟನೆ

ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಪಾಜೆ ಅಲಡ್ಕ ರಸ್ತೆ ಕಾಂಕ್ರೀಟೀಕರಣ ಉದ್ಘಾಟನಾ ಕಾರ್ಯಕ್ರಮ ಜ.11 ರಂದು ನಡೆಯಿತು. ಉದ್ಘಾಟನೆಯನ್ನು ಸಂಪಾಜೆ ಸೊಸೈಟಿ ಅಧ್ಯಕ್ಷ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಸೋಮಶೇಖರ್ ಕೊಯಿಂಗಾಜೆ ನೆರವೇರಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷರಾದ ಮಹಮದ್ ಕುಂಚಿ ಗೂನಡ್ಕ, ಜಗದೀಶ್ ರೈ, ಉಮ್ಮರ್...

ಕೇನ್ಯ : ನೂತನ ಮಹಿಳಾ ಮಂಡಲ ರಚನೆ – ಅಧ್ಯಕ್ಷೆ ತಾರಾ ಬಿ.- ಕಾರ್ಯದರ್ಶಿ ಸಾತ್ವಿಕ ಪಿ.

ಕಡಬ ತಾಲೂಕು ಕೇನ್ಯ ಗ್ರಾಮದಲ್ಲಿ ನೂತನ ಮಹಿಳಾ ಮಂಡಲ ಅಸ್ತಿತ್ವಕ್ಕೆ ಬಂದಿದ್ದು ಜ.10 ರಂದು ಕೇನ್ಯದಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ಆಯ್ಕೆ ನಡೆಯಿತು. ಗೌರವ ಅಧ್ಯಕ್ಷರಾಗಿ ಶ್ರೀಮತಿ ಮಮತಾ. ಎಸ್. ಶೆಟ್ಟಿ , ಸ್ಥಾಪಕಾಧ್ಯಕ್ಷರಾಗಿ ಶ್ರೀಮತಿ ತಾರಾ. ಬಿ. ರೈ ಬಿರ್ಕಿ ಮತ್ತು ಕಾರ್ಯದರ್ಶಿಯಾಗಿ ಶ್ರೀಮತಿ ಸಾತ್ವಿಕ. ಪಿ. ನರಿಯಂಗ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಶ್ರೀಮತಿ...
Loading posts...

All posts loaded

No more posts

error: Content is protected !!