- Thursday
- November 21st, 2024
ಮಹತೋಭಾರ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಳದಲ್ಲಿ ಪುಷ್ಯ ಶುದ್ದ ಕಿರುಷಷ್ಠಿಯ ದಿನವಾದ ಜ.8 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಕಿರುಷಷ್ಠಿ ರಥೋತ್ಸವವು ಸರಕಾರದ ಮತ್ತು ಜಿಲ್ಲಾಧಿಕಾರಿಗಳ ಕೋವಿಡ್ 19 ಮಾರ್ಗಸೂಚಿಗೆ ಅನುಗುಣವಾಗಿ ನೆರವೇರಿತು.ತಳಿರು, ತೋರಣ, ಸೀಯಾಳ, ಅಡಿಕೆ,ಬಾಳೆ, ಬಾಳೆಗೊನೆ ಅಲಂಕಾರದ ರಥದಲ್ಲಿ ಶ್ರೀ ದೇವರ ಉತ್ಸವ ನೆರವೇರಿತು. ಶ್ರೀ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಸೀತರಾಮ...
ಕ್ಷೇಮ ಮತ್ತು ಆರೋಗ್ಯ ಕೇಂದ್ರ ಸಂಪಾಜೆ,ವಿದ್ವಾಲ ಶೈಕ್ಷಣಿಕ ಗ್ರಾಮೀಣ ಅಭಿವೃದ್ಧಿ ಕೇಂದ್ರ ಬೆಂಗಳೂರು, ಉಪಕೇಂದ್ರ ಪೆರಾಜೆ ಇದರ ವತಿಯಿಂದ 15-18ವರ್ಷ ವಯಸ್ಸಿನ ಮಕ್ಕಳಿಗೆ ಕೋ- ವ್ಯಾಕ್ಸಿನ್ ಲಸಿಕಾ ಅಭಿಯಾನ ಪೆರಾಜೆ ಜ್ಯೋತಿ ಪ್ರೌಢ ಶಾಲೆಯಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಶಾಲಾ ವಿದ್ಯಾರ್ಥಿ ನಾಯಕ ಉದ್ಘಾಟಿಸಿದರು. ಕಾರ್ಯಾಕ್ರಮದ ಅಧ್ಯಕ್ಷತೆಯನ್ನು ಜ್ಯೋತಿ ವಿದ್ಯಾ ಸಂಸ್ಥೆಯ ಸಂಚಾಲಕರಾದ ಹರೀಶ್ ಚಂದ್ರ...
ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಜ.09 ರಂದು ಬಾಳುಗೋಡು ಮಾನಡ್ಕ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಸುತ್ತ-ಮುತ್ತ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಬಾಳುಗೋಡು ಒಕ್ಕೂಟದ ಅಧ್ಯಕ್ಷರಾದ ಲೋಕೇಶ್, ಅಡಳಿತ ಮಂಡಳಿ ಅಧ್ಯಕ್ಷರಾದ ಶೀನಪ್ಪ, ಸೇವಾಪ್ರತಿನಿಧಿ ನಾಗವೇಣಿ ಹಾಗೂ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ
https://youtu.be/wO3jrdDtgNM ಕಡಬ ತಾಲೂಕು ಬಳ್ಪ ಗ್ರಾಮದ ನೀರಜರಿ ಎಂಬಲ್ಲಿ ಕೊರಗಜ್ಜ ದೈವದ ನೇಮೋತ್ಸವ ಸಂದರ್ಭದಲ್ಲಿ ಮೊನ್ನೆ ವಿಟ್ಲದಲ್ಲಿ ನಡೆದ ಘಟನೆ ಬಗ್ಗೆ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ ದೈವದ ನುಡಿ ಪಡೆಯಲಾಯಿತು. ಈ ಸಂದರ್ಭದಲ್ಲಿ ಶ್ರೀ ವೆಂಕಟ್ ದಂಬೆಕೋಡಿ, ಬಜರಂಗದಳದ ತಾಲೂಕು ಸಂಯೋಜಕರಾದ ಸಂದೀಪ್ ವಳಲಂಬೆ, ಹಿಂದು ಜಾಗರಣ ವೇದಿಕೆ ಗುತ್ತಿಗಾರು ವಲಯ ಅಧ್ಯಕ್ಷ ವರ್ಷಿತ್ ಕಡ್ತಲ್...
ವಿಟ್ಲದ ಸಾಲೆತ್ತೂರಿನಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಕೊರಗಜ್ಜ ದೈವದ ಅವಮಾನವಾಗಿದ್ದು, ಈ ಹಿನ್ನೆಲೆಯಲ್ಲಿ ವಿಹಿಂಪ ಬಜರಂಗದಳ ವಾಲ್ಮೀಕಿ ಶಾಖೆ ಬೆಳ್ಳಾರೆಯ ವತಿಯಿಂದ ವ್ಯಾಪಕ ಖಂಡನೆ ವ್ಯಕ್ತಪಡಿಸಲಾಯಿತು. ಕೃತ್ಯವನ್ನು ಖಂಡಿಸಿ ಪೆರುವಾಜೆಯ ಕುಂಡಡ್ಕ ಹಾಗೂ ಕೊಲ್ಯ ಕೊರಗಜ್ಜ ದೈವಸ್ಥಾನಗಳಲ್ಲಿ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ನೀಡುವಂತೆ ಪ್ರಾರ್ಥಿಸಲಾಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಮುಖ್ಯಸ್ಥರು ಹಾಗೂ ಬೆಳ್ಳಾರೆ ವಿಹಿಂಪ ಪ್ರಮುಖರು,...
ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಆಯೋಜಿಸಲ್ಪಡುತ್ತಿರುವ ಇನ್ ಸ್ಪೈರ್ ಅವಾರ್ಡಿಗೆ ಸರ್ಕಾರಿ ಪ್ರೌಢಶಾಲೆ ಎಣ್ಮೂರು ಇಲ್ಲಿನ ಐದು ವಿದ್ಯಾರ್ಥಿಗಳು ಆಯ್ಕೆಯಾಗಿರುತ್ತಾರೆ.ಮುರುಳ್ಯ ಗ್ರಾಮದ ನೂಜಾಡಿ ನಿವಾಸಿಗಳಾದ ವೆಂಕಪ್ಪ ಗೌಡ ಮತ್ತು ಶ್ರೀಮತಿ ಕಮಲ ದಂಪತಿಗಳ ಪುತ್ರ ಪವನ್ ಕುಮಾರ್ (10ನೇತರಗತಿ), ಅಲೆಕ್ಕಾಡಿ ಪೂದೆಯ ಶಿವರಾಮ ಮತ್ತು ಶ್ರೀಮತಿ ಜಯಲಕ್ಷ್ಮೀ ದಂಪತಿಗಳ ಪುತ್ರ ಗಗನ್.ಪಿ.(8ನೇ...