Ad Widget

ಅತಿಥಿ ಉಪನ್ಯಾಸಕರ ಮುಷ್ಕರದಿಂದ ವಿದ್ಯಾರ್ಥಿಗಳಿಗಾಗಿರುವ ಸಮಸ್ಯೆ ಸರಿಪಡಿಸಲು ಸಚಿವರಿಗೆ ಮನವಿ

ಅತಿಥಿ ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅನಿರ್ಧಿಷ್ಟಾವಧಿ ಮುಷ್ಕರ ಕೈಗೊಂಡಿದ್ದರಿಂದ ವಿದ್ಯಾರ್ಥಿಗಳಿಗೆ ತರಗತಿ ನಡೆಯದ ಕಾರಣ ತೊಂದರೆಯಾಗುತ್ತಿದೆ ಹಾಗೂ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿ, ತರಗತಿಗಳು ಯಥಾವತ್ತಾಗಿ ನಡೆಯಬೇಕೆಂದು ಒತ್ತಾಯಿಸಿ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತಹಶೀಲ್ದಾರ್ ಅನಿತಾಲಕ್ಷ್ಮೀ ಹಾಗೂ ಸಚಿವರುಗಳಾದ ಎಸ್.ಅಂಗಾರ ಮತ್ತು ಸುನಿಲ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.

ಅರಂಬೂರು: ವಾತ್ಸಲ್ಯ ಕಿಟ್ ವಿತರಣೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಅಂಜಿಕಾರು ತಿಮ್ಮಪ್ಪ ಎಂಬವರ ಮಗ ನಿಕ್ಷಿತ್ ರಿಗೆ ಮಂಜೂರಾದ ಮೂಲಭೂತ ಸೌಲಭ್ಯ ವಾತ್ಸಲ್ಯ ಕಿಟ್ ಅನ್ನು ಅರಂಬೂರು ಒಕ್ಕೂಟ ಉಪಾಧ್ಯಕ್ಷರಾದ ವಿಶ್ವನಾಥ್ ವಿತರಿಸಿದರು. ತೀರಾ ಬಡತನದಲ್ಲಿರುವ ಈ ಕುಟುಂಬಕ್ಕೆ ಪ್ರತಿ ತಿಂಗಳು ಧರ್ಮಸ್ಥಳದಿಂದ 1000/- ಸಹಾಯಧನವನ್ನು ನೀಡಲಾಗುತ್ತಿದೆ. ಈ ಸಂದರ್ಭ ಸಂಪಾಜೆ ವಲಯ ಮೇಲ್ವಿಚಾರಕರು ಸುಧೀರ್ ನೆಕ್ರಾಜೆ,...
Ad Widget

ಪಂಬೆತ್ತಾಡಿ ಪಂಚಶ್ರೀ ಯುವಕ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷ ನಾಗಪ್ಪ ಗೌಡ ಪಿ., ಕಾರ್ಯದರ್ಶಿ ನೇಮಿರಾಜ್ ಪಿ.

ಪಂಬೆತ್ತಾಡಿ ಪಂಚಶ್ರೀ ಯುವಕ ಮಂಡಲದ 2022-23ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ನಡೆಯಿತು. ಗೌರವಾಧ್ಯಕ್ಷರಾಗಿ ಜನಾರ್ದನ ಬೆಳಗಜೆ, ಅಧ್ಯಕ್ಷರಾಗಿ ನಾಗಪ್ಪ ಗೌಡ ಪಿ., ಉಪಾಧ್ಯಕ್ಷರಾಗಿ ಧನಂಜಯ ಎಂ., ಕಾರ್ಯದರ್ಶಿಯಾಗಿ ನೇಮಿರಾಜ್ ಪಿ., ಜತೆ ಕಾರ್ಯದರ್ಶಿ ಜೀವನ್ ಎಸ್, ಖಜಾಂಜಿಯಾಗಿ ಬಾಲಕೃಷ್ಣ ಕೆ, ಕ್ರೀಡಾ ಕಾರ್ಯದರ್ಶಿಯಾಗಿ ವಿನಯಕುಮಾರ್ ಕೆ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸುರೇಶ ಎ, ಆಂತರಿಕ...

ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರಿಗೆ ಪಿಎಚ್.ಡಿ ಪದವಿ

ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾಮಠದ ಕಾರ್ಯದರ್ಶಿಗಳಾದ ಪೂಜ್ಯ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಮಂಡಿಸಿದ ಸಂಸ್ಕೃತ-ಸಂಸ್ಕೃತಿಗೆ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮೀಜಿ ಅವರ ಕೊಡುಗೆ ಒಂದು ಅಧ್ಯಯನ ಎಂಬ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ನೀಡಿದೆ.ಡಾ. ಕುಮಾರ ಸುಬ್ರಹ್ಮಣ್ಯ ಭಟ್. ಎ ಸಹಾಯಕ ಪ್ರಾಧ್ಯಾಪಕರು ಸಂಸ್ಕೃತ ವಿಭಾಗ ವಿಶ್ವವಿದ್ಯಾಲಯ ಕಾಲೇಜು ಇವರು ಮಾರ್ಗದರ್ಶಕರಾಗಿದ್ದಾರೆ.ಈ ಮಹಾಪ್ರಬಂಧವು ಶ್ರೀ...

ಪಂಬೆತ್ತಾಡಿ : ಯುವಕ, ಯುವತಿ ಹಾಗೂ ಮಹಿಳಾ ಮಂಡಲದ ಜಂಟಿ ಪದಗ್ರಹಣ

ಪಂಚಶ್ರೀ ಯುವಕ ಮಂಡಲ, ಅಕ್ಷತಾ ಯುವತಿ ಮಂಡಲ, ಅಮೃತಾ ಮಹಿಳಾ ಮಂಡಲದ ಜಂಟಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜ.2 ರಂದು ಜನಾರ್ಧನ ಬೆಳಗಜೆ ಇವರ ಅಧ್ಯಕ್ಷತೆಯಲ್ಲಿ ಯುವಕ ಮಂಡಲ ವಠಾರದಲ್ಲಿ ನಡೆಯಿತು. ಯುವಜನ ಸಂಯುಕ್ತ ಮಂಡಳಿಯ ಅಧ್ಯಕ್ಷ ದಯಾನಂದ ಕೇರ್ಪಳರವರು ಯುವಕ ಮಂಡಲದ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು....

ಸಚಿವ ಸುನಿಲ್ ಕುಮಾರ್ ರಿಂದ ಕಡ್ಲಾರು ಜಲಶ್ರೀ ಪ್ರತಿಷ್ಠಾನದ ಮನವಿ ಪತ್ರ ಬಿಡುಗಡೆ

ಇತ್ತೀಚೆಗೆ ನೂತನವಾಗಿ ರಚಿಸಲಾದ ಸಾಹಿತ್ಯ, ಸಾಂಸ್ಕೃತಿಕ ಮತ್ತು ಜನಪದಕ್ಕೆ ಸಂಬಂಧಿಸಿದ ಜಲಶ್ರೀ ಪ್ರತಿಷ್ಠಾನ ಕಡ್ಲಾರು ಇದರ ಮನವಿ ಪತ್ರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವರಾಗಿರುವ ಶ್ರೀ ಸುನೀಲ್ ಕುಮಾರ್ ಜ.೩ರಂದು ಶ್ರೀ ಮುತ್ತಪ್ಪ ತಿರುವಪ್ಪ ದೈವಸ್ಥಾನ ಗುತ್ತಿಗಾರುವಿನಲ್ಲಿ ಬಿಡುಗಡೆಗೊಳಿಸಿ ಶುಭಹಾರೈಸಿದರು.ಈ ಸುಸಂದರ್ಭದಲ್ಲಿ ದ.ಕ ಜಿಲ್ಲೆಯ ಉಸ್ತುವಾರಿ ಸಚಿವರು ಹಾಗೂ ಬಂದರು, ಮೀನುಗಾರಿಕಾ...

ಕೆವಿಜಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಂದ ಮೆಸ್ಕಾಂ ಸಬ್ ಸ್ಟೇಷನ್ ಭೇಟಿ

ಸುಳ್ಯ ಕೆವಿಜಿ ಪಾಲಿಟೆಕ್ನಿಕ್ ಇಲೆಕ್ಟ್ರಿಕಲ್ ವಿಭಾಗದ ವಿದ್ಯಾರ್ಥಿಗಳು ಮೆಸ್ಕಾಂ ಸಬ್ ಸ್ಟೇಷನ್ ಗೆ ಜ. 4 ರಂದು ಭೇಟಿ ನೀಡಿದರು. ವಿದ್ಯುತ್ ವಿತರಣಾ ವ್ಯವಸ್ಥೆ, ತಾಂತ್ರಿಕತೆಯ ಬಗ್ಗೆ ವಿದ್ಯಾರ್ಥಿಗಳು ಮಾಹಿತಿ ಪಡೆದುಕೊಂಡರು. ಮೆಸ್ಕಾ ಜೂನಿಯರ್ ಇಂಜಿನಿಯರ್ ಜಯಪ್ರಕಾಶ್ ಕೆ. ಮಾಹಿತಿ ನೀಡಿದರು. ಕೆವಿಜಿ ಪಾಲಿಟೆಕ್ನಿಕ್ ನ ಉಪನ್ಯಾಸಕರಿಗಳಾದ ಆನಂದ ಎ., ಅಣ್ಣಪ್ಪ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕೊಲ್ಲಮೊಗ್ರು : ಪ್ರಥಮ ಹಂತದ ಗ್ರಾಮಸಭೆ

ಕೊಲ್ಲಮೊಗ್ರು ಗ್ರಾಮಪಂಚಾಯತ್ ನ ಪ್ರಥಮ ಹಂತದ ಗ್ರಾಮಸಭೆಯು ಜ.03 ರಂದು ಗ್ರಾಮಪಂಚಾಯತ್ ಅದ್ಯಕ್ಷ ಉದಯ ಕೊಪ್ಪಡ್ಕ ರವರ ಅಧ್ಯಕ್ಷತೆಯಲ್ಲಿ ಕೊಲ್ಲಮೊಗ್ರದ ಶ್ರೀ ಮಯೂರ ಕಲಾಮಂದಿರದಲ್ಲಿ ನಡೆಯಿತು.ಈ ಸಂದರ್ಭದಲ್ಲಿ ನೋಡೆಲ್ ಅಧಿಕಾರಿಯಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ ಮಹಾದೇವ ಅವರು ಆಗಮಿಸಿದ್ದರು.ಬೆಂಡೋಡಿಯಲ್ಲಿ ಅಂಗನವಾಡಿ ಇಲ್ಲದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಹಾಗಾಗಿ ಬೆಂಡೋಡಿಯಲ್ಲಿ ಒಂದು ಅಂಗನವಾಡಿಯನ್ನು ನಿರ್ಮಿಸಬೇಕು ಹಾಗೂ ಬೆಂಡೋಡಿ...
error: Content is protected !!