- Thursday
- November 21st, 2024
ಸುಳ್ಯ ಜೂನಿಯರ್ ಕಾಲೇಜು ಬಳಿಯ ಮನೆಯೊಂದರ ಸಮೀಪ ಜೀಪಿನಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 53,700 ರೂ. ಮೌಲ್ಯದ ಮದ್ಯವನ್ನು ಸುಳ್ಯ ಪೊಲೀಸರು ದ.28 ರಂದು ವಶಪಡಿಸಿಕೊಂಡಿದ್ದಾರೆ.ಆರೋಪಿ ಡಿನೋಹಿ ಎಂಬುವರನ್ನು ಪೊಲೀಸರು ಸೆರೆಹಿಡಿದಿದ್ದು, ಉಳಿದ ಇಬ್ಬರು ಆರೋಪಿಗಳಾದ ಜ್ಞಾನಪ್ರಕಾಶ್ ಅಲಿಯಾಸ್ ಸಲಾಂ ಹಾಗೂ ಡಯಾನ ಎಂಬುವವರು ತಪ್ಪಿಸಿಕೊಂಡಿರುವುದಾಗಿ ಪೋಲೀಸರು ತಿಳಿಸಿದ್ದಾರೆ.ಆರೋಪಿ ಡಿನೋಹಿ ಎಂಬವರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು...
ಸುಳ್ಯ ಮತ್ತು ಪುತ್ತೂರು ಅಬಕಾರಿ ಇಲಾಖೆಯವರು ಖಚಿತ ಮಾಹಿತಿ ಮೇರೆಗೆ ಜಂಟಿ ಕಾರ್ಯಾಚರಣೆ ನಡೆಸಿ ಸುಳ್ಯದ ಬೆನಕ ಹಾಸ್ಟೆಲ್ ನಲ್ಲಿ ಬಾಡಿಗೆದಾರರಾಗಿದ್ದ ಪಲ್ಲತ್ತೂರಿನ ಮೊಯಿದ್ದೀನ್ ಕುಂಞಿ ಕೊಠಡಿಯಲ್ಲಿ ಸಂಗ್ರಹಿಸಿಟ್ಟ 11 ಕೆ.ಜಿ. ಗಾಂಜಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.ಸುಳ್ಯದ ಬೆನಕ ಹಾಸ್ಟೆಲ್ ನಲ್ಲಿ ಮೊಯಿದ್ದೀನ್ ಕುಂಞಿ ಎಂಬವರು ಕೊಠಡಿ ಬಾಡಿಗೆ ಪಡೆದು ಕುಟುಂಬದೊಂದಿಗೆ ವಾಸವಿದ್ದರು. ಇಲ್ಲಿ ಗಾಂಜಾ ಸಂಗ್ರಹಿಸಿ...
ಕೊಡಗು ಸಂಪಾಜೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಜ.2 ರಂದು ಪಯಶ್ವಿನಿ ಫ್ರೆಂಡ್ಸ್ ವತಿಯಿಂದ ಕ್ರಿಕೆಟ್ ಪಂದ್ಯಾಟ ನೆರವೇರಿತು. ಈ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನವನ್ನು ಪಯಶ್ವಿನಿ ಯುವಕ ಮಂಡಲ ಸಂಪಾಜೆ ಹಾಗೂ ದ್ವಿತೀಯ ಸ್ಥಾನವನ್ನು ಆದರ್ಶ ಪ್ರೆಂಡ್ಸ್ ಚೆಡಾವು ಪಡೆದುಕೊಂಡಿದೆ.
ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ (ರಿ) ಸುಳ್ಯ ಇದರ ವಾರ್ಷಿಕ ಮಹಾ ಸಭೆ ಮತ್ತು ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು ಸುಳ್ಯದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ಜರಗಿತು.ಸಂಘದ ಮಹಾ ಸಭೆಯ ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ ಉದ್ದಂತಡ್ಕ ಅವರು ಅಧ್ಯಕ್ಷತೆಯನ್ನು ವಹಿಸಿದ್ದರು ಹಾಗೂ ಗೋಪಾಲಕೃಷ್ಣ ಬೋರ್ಕರ್ , ಬಾಲಚಂದ್ರ ಅಡ್ಕಾರ್, ಶಂಕರ...
ನಾಲ್ಕೂರು ಗ್ರಾಮದ ಹಲ್ಗುಜಿ ಶ್ರೀ ಶಿರಾಡಿ ದೈವಸ್ಥಾನದಲ್ಲಿ ಜ.13 ರಿಂದ ಜ.16 ರವರೆಗೆ ಶ್ರೀ ದೈವಗಳ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಅದರ ಪ್ರಯುಕ್ತ ಜ.01 ರ ಶನಿವಾರದಂದು ಚಪ್ಪರ ಮಹೂರ್ತ ಮಾಡಲಾಯಿತು.ಈ ಸಂದರ್ಭದಲ್ಲಿ ಊರಿನ ಭಕ್ತಾದಿಗಳು ಉಪಸ್ಥಿತರಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ
ನಿಸರ್ಗ ಯುವಕ ಮಂಡಲ ಐನೆಕಿದು ಇದರ 2022-23 ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹಾಗೂ ಸಾಮಾನ್ಯ ಸಭೆಯು ಜ.02 ರಂದು ಐನೆಕಿದು ಶಾಲೆಯಲ್ಲಿ ನಡೆಯಿತು.2022ನೇ ಸಾಲಿನ ನಿಸರ್ಗ ಯುವಕ ಮಂಡಲದ ಅಧ್ಯಕ್ಷರಾಗಿ ಅಜಿತ್ ಕಲ್ಲೇರಿ, ಉಪಾಧ್ಯಕ್ಷರಾಗಿ ಅಶೋಕ್ ಐಪಿನಡ್ಕ, ಕಾರ್ಯದರ್ಶಿಯಾಗಿ ಭರತ್ ವಾಡ್ಯಪ್ಪನ ಮನೆ, ಜೊತೆ ಕಾರ್ಯದರ್ಶಿಯಾಗಿ ಕುಶನ್ ನೆಕ್ರಾಜೆ, ಕೋಶಾಧಿಕಾರಿಯಾಗಿ ಸುಹಾಸ್ ಕೋಟೆಬೈಲು,...
ಕಳಂಜ ಅಲ್ ಫಲಾಹ್ ಯೂತ್ ಕ್ಲಬ್ ಸದಸ್ಯರಿಂದ ಗ್ರಾಮದ ಮಣಿಮಜಲು ರಸ್ತೆಯನ್ನು ಶ್ರಮದಾನದ ಮೂಲಕ ದುರಸ್ತಿ ಮಾಡಲಾಯಿತು. ಈ ಶ್ರಮದಾನದಲ್ಲಿ ಅಲ್ ಫಲಾಹ್ ಯೂತ್ ಕ್ಲಬ್ ಪದಾಧಿಕಾರಿಗಳು, ಸದಸ್ಯರು ಭಾಗಿಗಳಾಗಿದ್ದರು.
ಕಳಂಜ ಗ್ರಾಮದ ತಂಟೆಪ್ಪಾಡಿಯ ನಿನಾದ ಸಾಂಸ್ಕೃತಿಕ ಕೇಂದ್ರದಲ್ಲಿ ಜ.01ರಂದು ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ ಇವರ ಸಾರಥ್ಯದಲ್ಲಿ ಕಾಲಮಿತಿ ಯಕ್ಷಗಾನ ಬಯಲಾಟ 'ಶ್ರೀದೇವಿ ಮಹಾತ್ಮೆ' ವಿಜೃಂಭಣೆಯಿಂದ ನಡೆಯಿತು. ಅನೇಕ ಪ್ರೇಕ್ಷಕರು, ಕಲಾಭಿಮಾನಿಗಳು ಉಪಸ್ಥಿತರಿದ್ದು ಯಕ್ಷಗಾನದ ಸವಿಯುಂಡರು. ಇದಕ್ಕೂ ಮುಂಚಿತವಾಗಿ ಸಂಜೆ 'ತಂಟೆಪ್ಪಾಡಿ...
ಐವರ್ನಾಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಾಸಿಕ ಸ್ವಚ್ಛತಾ ಕಾರ್ಯಕ್ರಮ ಇಂದು ನಡೆಯಿತು. ಒಡಿಯೂರು ಸಂಘದ ಸದಸ್ಯರು ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗಿಯಾದರು. ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸರ್ವಸದಸ್ಯರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
Loading posts...
All posts loaded
No more posts