- Friday
- November 22nd, 2024
ಲಿಯೋ ಕ್ಲಬ್ ಆಫ್ ಮೈಸೂರ್ ಎರಿಶ್ ನಡೆಸಿದ ಮೈಸೂರ್ ರಾಜ್ಯ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಉಜಿರೆಯ ಎಸ್.ಡಿ.ಎಮ್ ಪಿ.ಯು. ಕಾಲೇಜಿನ ವಿದ್ಯಾರ್ಥಿಗಳಾದ ಪ್ರಾರ್ಥನ್ ಮತ್ತು ಕಾರ್ತಿಕ್ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಪ್ರಾರ್ಥನ್ ಗಿರಿಧರ್ ಸ್ಕಂದ ಮತ್ತು ಶೋಭ ದಂಪತಿಯ ಪುತ್ರನಾದರೆ ಕಾರ್ತಿಕ್ ಸುಬ್ರಹ್ಮಣ್ಯದ ಉದ್ಯಮಿ ರವಿ ಕಕ್ಕೆಪದವು ಮತ್ತು ಶ್ರೀಮತಿ ಗೀತಾ ರವಿ ದಂಪತಿಯ ಪುತ್ರ
ಸುಬ್ರಹ್ಮಣ್ಯ: ನಾಗಾರಾಧನ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಅವರು ಮನೆಯವರೊಂದಿಗೆ ರವಿವಾರ ಬೇಟಿ ನೀಡಿದರು.ಕ್ಷೇತ್ರಕ್ಕೆ ಬೇಟಿ ನೀಡಿದ ಅವರು ಕ್ಷೇತ್ರದಲ್ಲಿ ಆಶ್ಲೇಷ ಬಲಿ, ಅಭಿಷೇಕ ಸೇವೆ ನೆರವೇರಿಸಿ ಮಹಾಪೂಜೆಯಲ್ಲಿ ಪಾಲ್ಗೊಂಡರು. ನಾಗಪ್ರತಿಷ್ಠೆ ಸೇವೆ ನೆರವೇರಿಸಿದರು. ಶ್ರೀ ದೇವರ ದರುಶನ ಪಡೆದು, ಶ್ರೀ ಹೊಸಳಿಗಮ್ಮನ ದರುಶನ ಪಡೆದು ಪ್ರಾರ್ಥನೆ...
ಬಾಳುಗೋಡು ಗ್ರಾಮದ ಕುಡುಮುಂಡೂರು ನವೀನ್ ಕೆದಿಲ ಎಂಬುವವರ ತೋಟಕ್ಕೆ ಅ.17 ರ ಬೆಳಗ್ಗಿನ ವೇಳೆ ಆನೆ ದಾಳಿ ಮಾಡಿದ್ದು ಸುಮಾರು 60 ಬಾಳೆ ಗಿಡ, 1 ತೆಂಗಿನ ಮರ ಹಾಗೂ 8 ಅಡಿಕೆ ಮರಗಳನ್ನು ಹಾಳುಗೆಡಹಿದೆ. ನಂತರ ಆನೆ ನವೀನ್ ಕೆದಿಲ ಅವರ ಪಕ್ಕದ ಮನೆಯ ಜಗದೀಶ್ ಎಂಬುವವರ ತೋಟಕ್ಕೂ ಹೋಗಿದ್ದು ಅಲ್ಲಿಯೂ ಕೂಡ ಹಾನಿ...
ಎಡಮಂಗಲ ಗ್ರಾಮದ ಮುಳಿಯ ದಿ. ಕರಿಯಪ್ಪ ನಾಯ್ಕರ ಪತ್ನಿ ಶಾಂತಮ್ಮ ರವರು ಅಲ್ಪ ಕಾಲದ ಅನಾರೋಗ್ಯದಿಂದ ಅ.16ರಂದು ನಿಧನರಾದರು. ಇವರಿಗೆ 95 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಪದ್ಮಯ್ಯ ನಾಯ್ಕ, ಶೀನಪ್ಪ ನಾಯ್ಕ, ವಿಠಲ ನಾಯ್ಕ ಪುತ್ರಿಯರಾದ ಶ್ರೀಮತಿ ಪುಷ್ಪಾವತಿ ಬಳ್ಪ, ಶ್ರೀಮತಿ ಹೊನ್ನಮ್ಮ ಕಣಿಯೂರು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.
ಹರಿಹರ ಪಲ್ಲತ್ತಡ್ಕದ ಶ್ರೀ ಹರಿಹರೇಶ್ವರ ಸಂಗಮ ಕ್ಷೇತ್ರದಲ್ಲಿ ಅ.17 ರಂದು ತೀರ್ಥೋದ್ಬವ ಹಾಗೂ ತೀರ್ಥ ಸ್ನಾನ ನಡೆಯಿತು.ತುಲಾ ಸಂಕ್ರಮಣದಂದು ಮದ್ಯಾಹ್ನ 1:11 ಕ್ಕೆ ತೀರ್ಥೋದ್ಬವ ಆಗಿದ್ದು, ಹರಿಹರೇಶ್ವರ ದೇವಸ್ಥಾನದ ಅರ್ಚಕರಾದ ಶ್ರೀ ಸುಬ್ರಹ್ಮಣ್ಯ ನರಸಿಂಹ ಭಟ್ ನದಿಗೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಹರಿಹರೇಶ್ವರ ದೇವರ ಭಕ್ತರು ನದಿಗೆ ಬಾಗಿನ ಅರ್ಪಣೆ ಮಾಡಿ ತೀರ್ಥ ಸ್ನಾನ...
ನಿಂತಿಕಲ್ಲಿನ ಭದ್ರ ಟೆಕ್ ಸಂಸ್ಥೆಯಲ್ಲಿ ಪುರೋಹಿತ್ ಪ್ರಶಾಂತ್ ಪರ್ಲತ್ತಾಯರ ವೈದಿಕ ಕಾರ್ಯಕ್ರಮದೊಂದಿಗೆ ಅ.14ರಂದು ಆಯಧಪೂಜೆ, ಗಣಪತಿ ಹವನ ನಡೆಯಿತು. ಈ ಕಾರ್ಯಕ್ರಮದಲ್ಲಿ ಭದ್ರ ಟೆಕ್ ಸಂಸ್ಥೆಯ ಮಾಲಕ ದಯಾನಂದ ಮೇಲ್ಮನೆ, ಮಾಲಕರ ತಂದೆ ದಾಸಪ್ಪ ಗೌಡ, ತಾಯಿ ಶ್ರೀಮತಿ ಬಾಲಕಿ ದಾಸಪ್ಪ ಗೌಡ, ಕುಟುಂಬ ಸದಸ್ಯರು, ಸಂಸ್ಥೆಯ ಸಿಬ್ಬಂದಿ ವರ್ಗ, ಸ್ಥಳೀಯರು ಉಪಸ್ಥಿತರಿದ್ದರು.
ಮಡಿಕೇರಿ:-ನಾಡಿನ ಜೀವನದಿ ‘ಕಾವೇರಿ’ಯ ಉಗಮ ಸ್ಥಾನ ತಲಕಾವೇರಿಯಲ್ಲಿ ಅ.17 ರಂದು ಮಧ್ಯಾಹ್ನ 1.11 ಕ್ಕೆ ಪವಿತ್ರ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಭಕ್ತರಲ್ಲಿ ಸಂಭ್ರಮ ಮನೆಮಾಡಿದೆ.ಪವಿತ್ರ ತೀರ್ಥೋದ್ಭವಕ್ಕಾಗಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ವತಿಯಿಂದ ಶ್ರೀ ಭಗಂಡೇಶ್ವರ-ತಲಕಾವೇರಿ ದೇವಾಲಯದಲ್ಲಿ ಕಾವೇರಿ ತುಲಾಸಂಕ್ರಮಣಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.ಕೊರೋನಾ ಸಾಂಕ್ರಮಿಕದ ಹಿನ್ನೆಲೆಯಲ್ಲಿ ಪವಿತ್ರ ತೀರ್ಥೋದ್ಭವದ ವೀಕ್ಷಣೆಗೆ...
ಹರಿಹರ ಪಲ್ಲತ್ತಡ್ಕದಲ್ಲಿ ಸುಮಾರು 18 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ದಿವಾಕರ ಮುಂಡಾಜೆ ಅವರ ಮಾಲಕತ್ವದ ಶಿವ ಡಿಜಿಟಲ್ಸ್ ಅ.15 ರಂದು ಸ್ಥಳಾಂತರಗೊಂಡು ಶ್ರೀ ದುರ್ಗಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು. ಹಾಗೂ ಸ್ಥಳಾಂತರದ ಪ್ರಯುಕ್ತ ಗಣಹೋಮ ನಡೆಸಲಾಯಿತು. ವರದಿ :- ಉಲ್ಲಾಸ್ ಕಜ್ಜೋಡಿ
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿ ಉದ್ಯೋಗದಲ್ಲಿರುವ ಯತೀಶ್ ಕಾನಾವುಜಾಲು ಅವರು ಶ್ರೀ ಕ್ಷೇತ್ರಕ್ಕೆ ಪ್ರಿಂಟರ್ ಕೊಡುಗೆಯಾಗಿ ನೀಡಿದರು. ಹಸ್ತಾಂತರ ಸಂದರ್ಭದಲ್ಲಿ ಪೆರುವಾಜೆ ಶ್ರೀ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪದ್ಮನಾಭ ಶೆಟ್ಟಿ ಪೆರುವಾಜೆ, ಸದಸ್ಯರಾದ ನಾರಾಯಣ ಕೊಂಡೆಪ್ಪಾಡಿ, ಜಗನ್ನಾಥ ರೈ ಪೆರುವಾಜೆ, ಕಾರ್ಯದರ್ಶಿ ವಸಂತ ಪೆರುವಾಜೆ, ಯಶವಂತ...
Loading posts...
All posts loaded
No more posts