- Sunday
- November 24th, 2024
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಪ್ಪಾಡಿಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 152ನೇ ಜನ್ಮದಿನೋತ್ಸವವನ್ನು ಅ.2ರಂದು ಸಂಭ್ರಮ ಸಡಗರದೊಂದಿಗೆ ಆಚರಿಸಲಾಯಿತು. ಇದರ ಅಂಗವಾಗಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಯಿತು. ನಂತರ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ "ರಘುಪತಿ ರಾಘವ ರಾಜಾರಾಮ್ ಪತಿತ ಪಾವನ ಸೀತಾರಾಮ್ " ಹಾಡು ಸರ್ವರಿಂದ ಮೊಳಗಿತು. ಪ್ರಭಾರ ಮುಖ್ಯ ಶಿಕ್ಷಕ ಚಂದ್ರಶೇಖರ ಪಾರೆಪ್ಪಾಡಿ...
ಕೊಲ್ಲಮೊಗ್ರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಹಾಗೂ ಸಂಜೀವಿನಿ ಸ್ವ-ಸಹಾಯ ಸಂಘಗಳ ಸಹಯೋಗದೊಂದಿಗೆ ಮಹಾತ್ಮ ಗಾಂಧೀಜಿಯವರ ಜನ್ಮದಿನಾಚರಣೆಯ ಅಂಗವಾಗಿ ಅ.02 ರಂದು ಕಾರ್ಯಕ್ರಮ ನಡೆಸಲಾಯಿತು. ಕೊಲ್ಲಮೊಗ್ರು ಗ್ರಾಮಪಂಚಾಯತ್ ಅದ್ಯಕ್ಷರಾದ ಉದಯ ಕೊಪ್ಪಡ್ಕ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು.ಆಜಾದಿ ಕಾ ಅಮೃತ ಮಹೋತ್ಸವ ಮತ್ತು ಮಹಾತ್ಮಗಾಂಧಿ ಜಯಂತಿ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ದೂರದೃಷ್ಟಿ ಯೋಜನೆ...
ಇತ್ತೀಚೆಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಡಪ್ಪಾಡಿ ಇಲ್ಲಿಯ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯನ್ನು ಮುಂದಿನ ಮೂರು ವರ್ಷಗಳ ಅವಧಿಗೆ ರಚಿಸಲಾಯಿತು. ರಚನಾ ಸಭೆಯ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಿತ್ರದೇವ ಮಡಪ್ಪಾಡಿ ವಹಿಸಿದ್ದರು. ಎಸ್.ಡಿ.ಎಂ.ಸಿ ಯ ನೂತನ ಅಧ್ಯಕ್ಷರಾಗಿ ಮಾಧವ ಎಸ್, ಉಪಾಧ್ಯಕ್ಷರಾಗಿ ಕುಸುಮಾವತಿ ನಡುಬೆಟ್ಟು ಆಯ್ಕೆಯಾದರು. ಈ ಒಂದು ರಚನಾ ಸಭೆಯಲ್ಲಿ...
ಸಂಗಮ ನವೋದಯ ಸ್ವ-ಸಹಾಯ ಸಂಘ ಮುಳ್ಳುಬಾಗಿಲು ಇದರ 18ನೇ ವರ್ಷದ ವಾರ್ಷಿಕ ಸಭೆಯನ್ನು ಸೆ.30 ರಂದು ಉಮೇಶ್ ಬಟ್ಟೋಡಿ ಅವರ ಮನೆಯಲ್ಲಿ ನಡೆಸಲಾಯಿತು.ಸಭೆಯಲ್ಲಿ ಸಂಘದ ಅಧ್ಯಕ್ಷರಾದ ಜಗದೀಶ್ ಕಿಲರ್ ಕಜೆ, ಕಾರ್ಯದರ್ಶಿಯಾದ ನಾರಾಯಣ.ಪಿ ಮುಳ್ಳುಬಾಗಿಲು ಹಾಗೂ ಸಂಘದ ಸದಸ್ಯರಾದ ವೆಂಕಪ್ಪ ಗೌಡ, ವೆಂಕಟ್ರಮಣ ಗೌಡ, ಪುರುಷೋತ್ತಮ ಗೌಡ, ಗಿರಿಯಪ್ಪ ಗೌಡ, ಉಮೇಶ್ ಬಟ್ಟೋಡಿ, ಮೋಹನ್ ದಾಸ್...
ಹರಿಹರ ಪಲ್ಲತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಎಸ್.ಡಿ.ಎಂ.ಸಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಅ.02 ರಂದು ಗಾಂಧಿ ಜಯಂತಿಯ ಅಂಗವಾಗಿ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ, ನಾಟಕ ಹಾಗೂ ಗಾಂಧಿ ನಡಿಗೆ ಕಾರ್ಯಕ್ರಮ ನಡೆಯಿತು.ಹರಿಹರ ಪಲ್ಲತ್ತಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಹರಿಹರ ಪಲ್ಲತ್ತಡ್ಕದ ಮುಖ್ಯ ಪೇಟೆಯವರೆಗೆ ಗಾಂಧಿ ನಡಿಗೆ,...
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ B.C ಟ್ರಸ್ಟ್.(ರಿ.) ಸುಬ್ರಹ್ಮಣ್ಯ ವಲಯದ ಕೊಲ್ಲಮೊಗ್ರು ಗ್ರಾಮದಲ್ಲಿ ಅ.02 ರಂದು ಗಾಂಧಿ ಜಯಂತಿ ಕಾರ್ಯಕ್ರಮವನ್ನು ಗಣೇಶೋತ್ಸವ ಸಮಿತಿ, ಕೆ.ವಿ.ಜಿ ಅನುದಾನಿತ ಪ್ರೌಢಶಾಲೆ ಕೊಲ್ಲಮೊಗ್ರು, ಸುಬ್ರಹ್ಮಣ್ಯ ವಲಯ ವಿಪತ್ತು ನಿರ್ವಹಣಾ ಘಟಕ, ಕಿರಿಯ ಪ್ರಾಥಮಿಕ ಶಾಲೆ ಗಡಿಕಲ್ಲು ಇವುಗಳ ಸಂಯುಕ್ತಾಶ್ರಯದಲ್ಲಿ ಗಾಂಧಿ ನಡಿಗೆ ಜಾಥಾ ಕಾರ್ಯಕ್ರಮ ನಡೆಯಿತು. ಕೊಲ್ಲಮೊಗ್ರು ಮುಖ್ಯ...
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೌರ್ಯಶ್ರೀ ವಿಪತ್ತು ನಿರ್ವಹಣಾ ಘಟಕ ನಾಲ್ಕೂರು ವತಿಯಿಂದ ಅ.02 ರ ಗಾಂಧಿ ಜಯಂತಿಯ ಅಂಗವಾಗಿ ಹಾಲೆಮಜಲು ಸಾರ್ವಜನಿಕ ಬಸ್ ತಂಗುದಾಣವನ್ನು ಸ್ವಚ್ಛತೆ ಮಾಡಲಾಯಿತು.ಈ ಸಂದರ್ಭದಲ್ಲಿ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಸತೀಶ್ ಹಾಲೆಮಜಲು ಹಾಗೂ ಸ್ವಯಂಸೇವಕರಾದ ಲೋಹಿತ್, ಪ್ರಜ್ವಲ್, ಕಾರ್ತಿಕ್, ಕರುಣಾಕರ, ಹರಿಶ್ಚಂದ್ರ ಕುಳ್ಳಂಪಾಡಿ ಈ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದರು. (ವರದಿ...
ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ನಲ್ಲಿ ಅ.02 ರಂದು ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ವಿಶೇಷ ಗ್ರಾಮಸಭೆ ಗ್ರಾಮಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಗ್ರಾಮಪಂಚಾಯತ್ ಅದ್ಯಕ್ಷರಾದ ಜಯಂತ್ ಬಾಳುಗೋಡು ದೀಪ ಬೆಳಗಿಸಿ ಉದ್ಘಾಟಿಸಿದರು. ಗ್ರಾಮಪಂಚಾಯತ್ ಪಿ.ಡಿ.ಓ ಪುರುಷೋತ್ತಮ ಮಣಿಯಾನ ಹಾಗೂ ಗ್ರಾಮಪಂಚಾಯತ್ ಉಪಾಧ್ಯಕ್ಷ ವಿಜಯ ಅಂಙಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಭೆಯಲ್ಲಿ ಗ್ರಾಮಪಂಚಾಯತ್ ಸದಸ್ಯರಾದ ದಿವಾಕರ ಮುಂಡಾಜೆ, ಪದ್ಮಾವತಿ ಕಲ್ಲೇಮಠ,...
ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹಾದ್ದೂರು ಶಾಸ್ತ್ರಿಯವರ ಜಯಂತಿ ಆಚರಣೆಯು ಅ.2 ರಂದು ನಡೆಯಿತು.ಕಾಲೇಜಿನ ಪ್ರಾಂಶುಪಾಲರಾದ ಹಸೀನಾಭಾನು ಪುಷ್ಪಾರ್ಚನೆ ಮಾಡಿದರು.ಶಿಕ್ಷಕ ರಾಮಚಂದ್ರ ಭಟ್ ರವರು ಗಾಂಧೀಜಿ ಮತ್ತು ಲಾಲ್ ಬಹಾದ್ದೂರು ಶಾಸ್ತ್ರಿಯವರ ಬಗ್ಗೆ ಮಾತನಾಡಿದರು.ಶಿಕ್ಷಕರು ಸರ್ವಧರ್ಮ ಪ್ರಾರ್ಥನೆ ಮಾಡಿದರು.ದೈಹಿಕ ಶಿಕ್ಷಣ ಶಿಕ್ಷಕಿ ಶ್ರೀಮತಿ ಪುಷ್ಪಾವತಿ ಗಾಂಧಿ ಕುರಿತ ಹಾಡು...
ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರು ವಾಸಿಸುತ್ತಿರುವ ಹಾಗೂ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವ ಕೃಷಿ ಭೂಮಿಗಳನ್ನು ಅರಣ್ಯವನ್ನಾಗಿ ಪರಿವರ್ತನೆ ಮಾಡಿ ಭಾರತವನ್ನು ಬಡರಾಷ್ಟ್ರವನ್ನಾಗಿ ಮಾಡಲಾಗುತ್ತಿದೆ ಎಂದು ಅ.01ರಂದು ಸುಬ್ರಹ್ಮಣ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಆರೋಪಿಸಿದರು.ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರ ಬದೂಕನ್ನು ಕಸಿದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಹಾಗೂ ಕಾಡು...
Loading posts...
All posts loaded
No more posts