- Monday
- November 25th, 2024
ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನಲ್ಲಿ ಆಯುಧಪೂಜಾ ಕಾರ್ಯಕ್ರಮವು ಅಕ್ಟೋಬರ್ 14ರಂದು ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ರುದ್ರಕುಮಾರ್ ಎಂ ಎಂ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಹರಿಣಿ ಪುತ್ತೂರಾಯ, ಕಾಲೇಜಿನ ಐಕ್ಯೂಎಸಿ ಸಂಚಾಲಕಿ ರತ್ನಾವತಿ ಡಿ ಹಾಗೂ ಕಾಲೇಜಿನ ಉಪನ್ಯಾಸಕ ವೃಂದದವರು, ಬೋಧಕೇತರ ವೃಂದದವರು,ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸುಳ್ಯ ಮೆಸ್ಕಾಂನಲ್ಲಿ ನವರಾತ್ರಿ ಉತ್ಸವದ ಅಂಗವಾಗಿ ಆಯುಧ ಪೂಜೆ, ವಾಹನ ಪೂಜೆ ಇಂದು ನಡೆಯಿತು. ಈ ಸಂದರ್ಭದಲ್ಲಿ ಮೆಸ್ಕಾಂ ಎಇಇ ಹರೀಶ್ ನಾಯ್ಕ್, ಜೂನಿಯರ್ ಇಂಜಿನಿಯರ್ ಗಳಾದ ಬೋರಯ್ಯ, ಸುರೇಶ್ ಭಟ್, ಜಯಪ್ರಕಾಶ್ ಕೆ., ಹಾಗೂ ಗುತ್ತಿಗೆದಾರರು, ಮೆಸ್ಕಾಂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ನಿಂತಿಕಲ್ಲು ಸಮೀಪದ ಮುಪ್ಪೇರಿಯ ವನದುರ್ಗಾ ಕಾಂಪ್ಲೆಕ್ಸ್ ನಲ್ಲಿ ಶ್ರೀ ವಸಂತ ಹಾಗೂ ಶ್ರೀಮತಿ ವಿಜಯವಸಂತ ಮಾಲಕತ್ವದ ಶ್ರೀ ವಿಷ್ಣು ಎಂಟರ್‌ಪ್ರೈಸಸ್ ಅ.11ರಂದು ಶುಭಾರಂಭಗೊಂಡಿತು. ಮಳಿಗೆಯನ್ನು ಉಜಿರೆ ಸಮೀಪದ ಬೆಳಾಲು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಹರೀಶ್ ಆರಿಕೋಡಿಯವರು ಉದ್ಘಾಟಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಸ್ಕರ ಬಲ್ಯಾಯ ನಿಂತಿಕಲ್ಲು, ರಾಮಯ್ಯ ಗೌಡ ಮಾಸ್ತಿಮನೆ,...
"ವನ್ಯ ಜೀವಿಗಳನ್ನು ಸಂರಕ್ಷಿಸೋಣ" ಎಂಬ ಏಕ ವ್ಯಕ್ತಿ ಆಂದೋಲನದ ರೂವಾರಿ ಮೂರ್ನಡಿನಿಂದ ಧರ್ಮಸ್ಥಳಕ್ಕೆ ಕಾಲ್ನಡಿಗೆ ಯಾತ್ರೆ ಕೈಗೊಂಡ ನರೇಶ್ ಬೈಲೆರವರನ್ನು ರಾಯಲ್ ಫ್ರೆಂಡ್ಸ್ ಗೂನಡ್ಕ ಸ್ಪೋರ್ಟ್ಸ್ & ಕಲ್ಚರಲ್ ಸೆಂಟರ್ ವತಿಯಿಂದ ಸ್ವಾಗತಿಸಿ, ಕನ್ನಡದ ಶಾಲು ಹಾಕಿ, ಉಡುಗೊರೆ ನೀಡಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ರಾಯಲ್ ಫ್ರೆಂಡ್ಸ್ ಗೂನಡ್ಕ ಅಧ್ಯಕ್ಷರಾದ ಸಾಜೀದ್ ಐ ಜಿ, ಗೌರವಾಧ್ಯಕ್ಷರಾದ ಅಶ್ರಫ್...
ಐವರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕಿ ಶ್ರೀಮತಿ ಪ್ರೇಮಾ ಉದಯ್ ಕುಮಾರ್ ರವರು ವಿಜಯಪುರ ಜಿಲ್ಲೆಯ ಹೂವಿನ ಹಿಪ್ಪರಗಿ ಯಲ್ಲಿ ಅ.10 ರಂದು ನಡೆದ ಅಖಿಲ ಭಾರತ ಕೇಂದ್ರೀಯ ಕನ್ನಡ ಸಾಹಿತ್ಯ ವೇದಿಕೆಯ ತೃತೀಯ ಕವಿ ಕಾವ್ಯ ಸಮ್ಮೇಳನದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿನಿಧಿಸಿ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಲಾಯಿತು.
ಸಂಪಾಜೆ ವಲಯ ಅರಣ್ಯ ಕಚೇರಿಯಲ್ಲಿ ಆಯುಧ ಪೂಜೆಯ ಕಾರ್ಯಕ್ರಮ ಇಂದು ನಡೆಯಿತು. ಕಾರ್ಯಕ್ರಮದಲ್ಲಿ ವಲಯ ಅರಣ್ಯ ಅಧಿಕಾರಿಗಳು,ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ದೇವಚಳ್ಳ ಗ್ರಾಮದ ಹೊಸೊಳಿಕೆ ದಿ. ಕುಂಞಣ್ಣ ಗೌಡರ ಧರ್ಮಪತ್ನಿ ಭಾಗೀರಥಿ (90.ವ) ರವರು ಅ.13ರಂದು ನಿಧನರಾದರು. ಮೃತರು ಮಕ್ಕಳಾದ ಪಾವನೇಶ್ವರ ಹೊಸೊಳಿಕೆ, ಗಂಗಾಧರ ಹೊಸೊಳಿಕೆ, ಲೋಕೇಶ ಹೊಸೊಳಿಕೆ, ಪುಷ್ಪವೇಣಿ ಭಾಸ್ಕರ ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.
ಬೆಳ್ಳಾರೆಯ ಕೊಳಂಬಳದಲ್ಲಿ ಕಾರ್ಯಾಚರಿಸುತ್ತಿರುವ ಸ್ವರ್ಣ ಬೈಕ್ ಪಾಯಿಂಟ್ ನಲ್ಲಿ ಅ.14ರಂದು ಆಯುಧಪೂಜೆ ಕಾರ್ಯಕ್ರಮ ನಡೆಯಿತು. ಬೆಳಗ್ಗೆ ಗಣಹೋಮ ನೆರವೇರಿತು. ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕರಾದ ಗಗನ್ ನಾಲ್ಗುತ್ತು, ವಸಂತ ಕುಮಾರ್ ನಾಲ್ಗುತ್ತು, ಸಿಬ್ಬಂದಿಗಳಾದ ಭರತ್ ಹಾಗೂ ತೀರ್ಥೇಶ್, ಸತೀಶ್ ಕಳಂಜ, ಜಗದೀಶ್ ಮುಂಡುಗಾರು ಉಪಸ್ಥಿತರಿದ್ದರು.
ಹರಿಹರಪಲ್ಲತ್ತಡ್ಕದ ವಿರಾಮಿಸು ಕಾಂಪ್ಲೆಕ್ಸ್ ನಲ್ಲಿ ಕಿಶೋರ್ ವಾಡ್ಯಪ್ಪನಮನೆ ಮಾಲಕತ್ವದ ಶ್ರೀ ಮಹಾಲಕ್ಷ್ಮಿ ಇಲೆಕ್ಟ್ರಿಕಲ್ಸ್ & ಪ್ಲಂಬರ್ಸ್ ಇಂದು ಶುಭಾರಂಭಗೊಳ್ಳಲಿದೆ.
Loading posts...
All posts loaded
No more posts