Ad Widget

ಮುರುಳ್ಯ: ಕ್ಷಯ ಮುಕ್ತ ಗ್ರಾಮ ನಿರ್ಮಾಣದ ಬಗ್ಗೆ ಸಭೆ, ಮಾಹಿತಿ ಮತ್ತು ಟಾಸ್ಕ್ ಪೋರ್ಸ್ ಸಮಿತಿ ರಚನೆ

2025ಕ್ಕೆ ಭಾರತವನ್ನು ಕ್ಷಯ ಮುಕ್ತಗೊಳಿಸುವ ಪ್ರಧಾನಿಯವರ ಘೋಷಣೆಯಂತೆ ಮುರುಳ್ಯ ಗ್ರಾಮವನ್ನು ಕ್ಷಯ ಮುಕ್ತಗೊಳಿಸುವ ಯೋಜನೆಗೆ ಪೂರ್ವಭಾವಿಯಾಗಿ ಟಾಸ್ಕ್ ಪೋರ್ಸ್ ಸಮಿತಿ ರಚನೆಯು ಮುರುಳ್ಯ ಗ್ರಾಮ ಪಂಚಾಯತ್ನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮುರುಳ್ಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಕು.ಜಾನಕಿ ವಹಿಸಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಳ್ಯ ಕ್ಷಯ ಚಿಕಿತ್ಸಾ ಘಟಕದ ಹಿರಿಯ ಚಿಕಿತ್ಸಾ ಮೇಲ್ವಿಚಾರಕ ಲೋಕೇಶ್ ತಂಟೆಪ್ಪಾಡಿ ಮಾತನಾಡಿ...

ಕಡಬ :- ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಬೃಹತ್ ಹಕ್ಕೊತ್ತಾಯ ಸಭೆ

ಕಡಬ ತಾಲೂಕಿನ ಹಲವು ಗ್ರಾಮಗಳು ಕಳೆದ 40-50 ವರ್ಷಗಳಿಂದ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಜೀವನ ಸಾಗಿಸುತ್ತಿರುವ ರೈತರ ಜಮೀನುಗಳನ್ನು ಅಕ್ರಮ-ಸಕ್ರಮದ ಅಡಿಯಲ್ಲಿ ಅರ್ಜಿ ಕೊಟ್ಟರೂ ಈವರೆಗೆ ಮಂಜೂರು ಆಗದೇ ಇರುವುದರಿಂದ ಅವರ ಜಮೀನುಗಳನ್ನು ಯಾವುದೇ ನಿಭಂದನೆ ಇಲ್ಲದೇ ಮಂಜೂರುಗೊಳಿಸಬೇಕು. ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಭೂಮಿ ಕಾಯ್ದಿರಿಸಿದ್ದರೂ ಅರ್ಹ ಫಲಾನುಭವಿಗಳಿಗೆ ನಿವೇಶನ ನೀಡದೇ ಇರುವುದರಿಂದ ಅರ್ಹರಿಗೆ...
Ad Widget

ಕಡಬ: ಶಾಲೆಯಲ್ಲಿ ಗ್ಯಾಸ್ ಸೋರಿಕೆ; ತಪ್ಪಿದ ದುರಂತ

ಸುಬ್ರಹ್ಮಣ್ಯ: ಕಡಬ ತಾಲೂಕಿನ ನೂಜಿಬಾಳ್ತಿಲ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಡುಗೆ ಮಾಡುವ ಸಂದರ್ಭದಲ್ಲಿ ಗ್ಯಾಸ್ ಸೋರಿಕೆಯಾಗಿ ಬೆಂಕಿ ತಗುಲಿದ್ದು, ಸ್ಥಳದಲ್ಲಿದ್ದವರ ತುರ್ತು ಕಾರ್ಯಚರಣೆಯಿಂದ ಬಾರೀ ದುರಂತ ತಪ್ಪಿದ ಘಟನೆ ಅ.25ನೇ ಸೋಮವಾರ ಸಂಭವಿಸಿದೆ.ನೂಜಿಬಾಳ್ತಿಲ ಶಾಲೆಯಲ್ಲಿ ಸೋಮವಾರ ಬೆಳಗ್ಗೆ ಅಡುಗೆ ಮಾಡುವ ಕೊಠಡಿಯಲ್ಲಿ ಗ್ಯಾಸ್ ಉರಿಸುವ ಸಂದರ್ಭದಲ್ಲಿ ಗ್ಯಾಸ್ ಅಂಡೆಯ ಪೈಪ್ ನಲ್ಲಿ ಗ್ಯಾಸ್...

ಉಳುವಾರು ದೇವಣ್ಣ ಗೌಡ ನಾಪತ್ತೆ – ದೂರು

ಅರಂತೋಡು ಗ್ರಾಮದ ಉಳುವಾರು ನಿವಾಸಿ ದೇವಣ್ಣ ಗೌಡ ಅವರು ಅ.24 ರ ಮುಂಜಾನೆಯಿಂದ ಕಾಣೆಯಾಗಿದ್ದಾರೆಇವರು ಕಂಡಲ್ಲಿ 9741113650,8762416256, 9591370038 ಈ ಮೊಬೈಲ್ ನಂಬರ್ ಗೆ ಮಾಹಿತಿ ನೀಡಲು ಕೋರಲಾಗಿದೆ.

ಜೇನು ಕೃಷಿ ವಿಭಾಗದ ಸಹಾಯಕ ತಂತ್ರಜ್ಞೆಯಾಗಿ ಶಿಲ್ಪಾ.ಕೆ.ವಿ ನೇಮಕ

ಕಡಬ ಸರಕಾರಿ ಆಸ್ಪತ್ರೆಯ ಪ್ರಥಮ ದರ್ಜೆ ಸಹಾಯಕ ಕೊರಗಪ್ಪಗೌಡ ಮತ್ತು ಬಿಳಿನೆಲೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ದಮಯಂತಿ ಜಿ ದಂಪತಿಗಳ ಪುತ್ರಿ ಶಿಲ್ಪಾ.ಕೆ.ವಿ, ಜೈವಿಕ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗದ ನಂತರ ಕರ್ನಾಟಕ ಸರಕಾರದ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ ರಿಸರ್ಚ್ ಸೆಂಟರ್ ನಲ್ಲಿ ಜೇನು ಕೃಷಿ ವಿಭಾಗದ ಸಹಾಯಕ...

ಕೊಲ್ಲಮೊಗ್ರು :- ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರಿಂದ ಗ್ರಾಮಪಂಚಾಯತ್ ಕೊಲ್ಲಮೊಗ್ರು ಇದರ ಸಹಯೋಗದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವ್ ದ ಪ್ರಯುಕ್ತ ಕೊಲ್ಲಮೊಗ್ರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಅ.23 ರಂದು ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ ನಡೆಯಿತು.ನಾಯಿಗಳಿಗೆ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆಯನ್ನು ಪಶುವೈದ್ಯ ಡಾ.ವೆಂಕಟಾಚಲಪತಿ...

ಶ್ರೀಮತಿ ಸೀತಮ್ಮ ಕಳಂಜ ನಿಧನ

ಕಳಂಜ ಗ್ರಾಮದ ಕಳಂಜ ಮನೆ ಶ್ರೀಮತಿ ಸೀತಮ್ಮ ಕಳಂಜ ಇಂದು ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು. ಮೃತರಿಗೆ 57 ವರ್ಷ ವಯಸ್ಸಾಗಿತ್ತು.ಮೃತರು ಪತಿ ಸುಬ್ರಾಯ ಗೌಡ, ಸಹೋದರಿ ಹೊನ್ನಮ್ಮ, ಪುತ್ರ ಪುರಂದರ ಗೌಡ, ಸೊಸೆ ಶ್ರೀಮತಿ ರಮ್ಯ, ಮೊಮ್ಮಗಳು ಬೇಬಿ ಜನನಿ, ಪುತ್ರಿಯರಾದ ಶ್ರೀಮತಿ ಮೀನಾಕ್ಷಿ, ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ನಳಿನಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
error: Content is protected !!