Ad Widget

ಅ.30 : ವಳಲಂಬೆಯಲ್ಲಿ ಗಾನಾರ್ಚನೆ

. . . . . .

ಗುತ್ತಿಗಾರು: ಯಕ್ಷಗಾನ ಕಲೆಯ ಪೋಷಣೆ ಹಾಗೂ ಕಲಾರಾಧನೆಯ ಸತ್ಕಾರ್ಯದೊಂದಿಗೆ ಕಲಾವಿದರನ್ನೂ ಪೋಷಿಸುವ ಸಾಮಾಜಿಕ ಕಳಕಳಿಯೊಂದಿಗೆ ಯಕ್ಷಕಲಾಭಿಮಾನಿ ಮಿತ್ರರ ಆಶ್ರಯದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಅ.30 ರಂದು ಮಧ್ಯಾಹ್ನ 2.30 ರಿಂದ “ಗಾನಾರ್ಚನೆ” ನಡೆಯಲಿದೆ ಎಂದು ಯಕ್ಷಕಲಾಭಿಮಾನಿ ಮಿತ್ರರ ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಸಿದ್ಧ ಭಾಗವತರುಗಳಾದ ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು, ರವಿಚಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ಅಜೇರು ಭಾಗವಹಿಸಲಿದ್ದು ಚೆಂಡೆಯಲ್ಲಿ ಸುಬ್ರಹ್ಮಣ್ಯ ದೇಲಂತಮಜಲು, ಮದ್ದಳೆಯಲ್ಲಿ ಕೃಷ್ಣಪ್ರಕಾಶ್‌ ಉಳಿತ್ತಾಯ, ಚಕ್ರತಾಳದಲ್ಲಿ ಪುರುಷೋತ್ತಮ ಆಚಾರ್ಯ ದುಗ್ಗಲಡ್ಕ ಭಾಗವಹಿಸುವರು. ಹರೀಶ್‌ ಬಳಂತಿಮೊಗ್ರು ಕಾರ್ಯಕ್ರಮ ನಿರೂಪಣೆ ಮಾಡುವರು. ಮುಖ್ಯ ಅತಿಥಿಗಳಾಗಿ ಸುಬ್ರಹ್ಮಣ್ಯ ಕೆ ಎಸ್‌ ಎಸ್‌ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಎಸ್.ಗೋವಿಂದ ಭಾಗವಹಿಸುವರು. ಯಕ್ಷಗಾನ ಸಂಘಟಕ ಮತ್ತು ವಿಮರ್ಶಕ ಎಸ್‌ ಎನ್‌ ಪಂಜಾಜೆ ಗೌರವ ಉಪಸ್ಥಿತರಿರುವರು.

ವಿಶೇಷ ಆಕರ್ಷಣೆಯಲ್ಲಿ ಭಾಗವತರುಗಳಾದ ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು, ರವಿಚಂದ್ರ ಕನ್ನಡಿಕಟ್ಟೆ, ಕಾವ್ಯಶ್ರೀ ಅಜೇರು ಅವರ ವಿಭಿನ್ನ ಶೈಲಿಯ ಹಾಡುಗಾರಿಕೆಯು ಗಮನ ಸೆಳೆಯಲಿದೆ ಎಂದು ಯಕ್ಷಕಲಾಭಿಮಾನಿ ಮಿತ್ರರ ಪ್ರಕಟಣೆ ತಿಳಿಸಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!