
ದಾವಣಗೆರೆಯಲ್ಲಿ ಅ.23 ರಂದು ನಡೆದ ಸರಕಾರಿ ನೌಕರರ ರಾಜ್ಯ ಮಟ್ಟದ ಕರ್ನಾಟಕ ಶಾಸ್ತ್ರೀಯ ಸ್ಪರ್ಧೆಯಲ್ಲಿ ಶ್ರೀಮತಿ ಪೂರ್ಣಿಮಾ ಮಡಪ್ಪಾಡಿ ಯವರು ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ಇವರು ಸ.ಉ.ಹಿ. ಪ್ರಾಥಮಿಕ ಶಾಲೆ ಜಾಲ್ಸೂರು(ಅಡ್ಕಾರು) ಸುಳ್ಯ ತಾಲೂಕು ಇಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರು ಶ್ರೀ ದಿನೇಶ್ ಅಂಬೆಕಲ್ಲು ನ್ಯಾಯವಾದಿಗಳು & ನೋಟರಿ ಇವರ ಪತ್ನಿ ಹಾಗೂ ಮಾಧವ ಮಾಸ್ಟರ್ ಮಡಪ್ಪಾಡಿ ಮತ್ತು ಶ್ರೀಮತಿ ಭವಾನಿ ಟೀಚರ್ ಇವರ ಸುಪುತ್ರಿ.