- Friday
- November 1st, 2024
ದಾವಣಗೆರೆಯಲ್ಲಿ ಅ.23 ರಂದು ನಡೆದ ಸರಕಾರಿ ನೌಕರರ ರಾಜ್ಯ ಮಟ್ಟದ ಕರ್ನಾಟಕ ಶಾಸ್ತ್ರೀಯ ಸ್ಪರ್ಧೆಯಲ್ಲಿ ಶ್ರೀಮತಿ ಪೂರ್ಣಿಮಾ ಮಡಪ್ಪಾಡಿ ಯವರು ದ್ವಿತೀಯ ಸ್ಥಾನವನ್ನು ಗಳಿಸಿರುತ್ತಾರೆ. ಇವರು ಸ.ಉ.ಹಿ. ಪ್ರಾಥಮಿಕ ಶಾಲೆ ಜಾಲ್ಸೂರು(ಅಡ್ಕಾರು) ಸುಳ್ಯ ತಾಲೂಕು ಇಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು ಇವರು ಶ್ರೀ ದಿನೇಶ್ ಅಂಬೆಕಲ್ಲು ನ್ಯಾಯವಾದಿಗಳು & ನೋಟರಿ ಇವರ ಪತ್ನಿ ಹಾಗೂ ಮಾಧವ...
ನವಚೇತನ ಯುವಕ ಮಂಡಲ (ರಿ )ಬೊಳುಬೈಲು, ಕೆ. ಎಂ. ಸಿ. ಆಸ್ಪತ್ರೆ ಅತ್ತಾವರ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾಲ್ಸೂರು ವಲಯ, ವಿವೇಕಾನಂದ ವಿದ್ಯಾಸಂಸ್ಥೆ ವಿನೋಬನಗರ ಜಾಲ್ಸೂರು ವತಿಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರವು ವಿವೇಕಾನಂದ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮ ಉದ್ಘಾಟನೆಯನ್ನು ಸುಧಾಕರ ಕಾಮತ್, ಸಂಚಾಲಕರು ವಿವೇಕಾನಂದ ವಿದ್ಯಾಸಂಸ್ಥೆ, ವಿನೋಬನಗರ ಜಾಲ್ಸೂರು ನೆರವೇರಿಸಿದರು....
ಗುತ್ತಿಗಾರು: ಯಕ್ಷಗಾನ ಕಲೆಯ ಪೋಷಣೆ ಹಾಗೂ ಕಲಾರಾಧನೆಯ ಸತ್ಕಾರ್ಯದೊಂದಿಗೆ ಕಲಾವಿದರನ್ನೂ ಪೋಷಿಸುವ ಸಾಮಾಜಿಕ ಕಳಕಳಿಯೊಂದಿಗೆ ಯಕ್ಷಕಲಾಭಿಮಾನಿ ಮಿತ್ರರ ಆಶ್ರಯದಲ್ಲಿ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ಸಭಾಭವನದಲ್ಲಿ ಅ.30 ರಂದು ಮಧ್ಯಾಹ್ನ 2.30 ರಿಂದ "ಗಾನಾರ್ಚನೆ" ನಡೆಯಲಿದೆ ಎಂದು ಯಕ್ಷಕಲಾಭಿಮಾನಿ ಮಿತ್ರರ ಪ್ರಕಟಣೆ ತಿಳಿಸಿದೆ. ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರಸಿದ್ಧ ಭಾಗವತರುಗಳಾದ ಮುರಳಿಕೃಷ್ಣ ಶಾಸ್ತ್ರಿ ತೆಂಕಬೈಲು, ರವಿಚಂದ್ರ...
ಸುಬ್ರಹ್ಮಣ್ಯ, ಅಜ್ಜಿಗುಡ್ಡೆ, ನೂಜಿಬೆಟ್ಟು ಮೂಲಕ ಐನೆಕಿದು ಸಂಪರ್ಕಿಸುವ ರಸ್ತೆಯ ಇಕ್ಕೆಲಗಳಲ್ಲಿ ಅ.24 ರಂದು ಶ್ರಮದಾನ ಮಾಡುವ ಮೂಲಕ ಸ್ವಚ್ಛತಾ ಕಾರ್ಯ ನಡೆಸಿ ರಸ್ತೆಯನ್ನು ಜನಸಂಚಾರಕ್ಕೆ ಸುಗಮಗೊಳಿಸಲಾಯಿತು. ಈ ಸಂದರ್ಭದಲ್ಲಿ ಊರಿನ ಜನರು ಈ ಶ್ರಮದಾನದಲ್ಲಿ ಭಾಗಿಯಾಗಿದ್ದರು. ವರದಿ :- ಉಲ್ಲಾಸ್ ಕಜ್ಜೋಡಿ