Ad Widget

ಹರಿಹರ ಪಲ್ಲತ್ತಡ್ಕ : ಲಾರಿ ಮತ್ತು ಅಂಬ್ಯುಲೆನ್ಸ್ ನಡುವೆ ಅಪಘಾತ

ಹರಿಹರ ಪಲ್ಲತ್ತಡ್ಕದ ಪ್ರೈಮರಿ ಶಾಲೆಯ ಬಳಿ ಅ.21 ರ ಸಂಜೆ ಅಂಬ್ಯುಲೆನ್ಸ್ ಮತ್ತು ಲಾರಿಯ ನಡುವೆ ಅಪಘಾತ ಸಂಭವಿಸಿದ್ದು, ಹರಿಹರ ಪಲ್ಲತ್ತಡ್ಕದಿಂದ ತೆಂಗಿನ ಕಾಯಿ ಹೇರಿಕೊಂಡು ನಡುಗಲ್ಲು ಕಡೆಗೆ ಹೋಗುತ್ತಿದ್ದ ಲಾರಿ ಆ ಕಡೆಯಿಂದ ಬಂದ ಅಂಬ್ಯುಲೆನ್ಸ್ ಗೆ ಡಿಕ್ಕಿ ಹೊಡೆದಿದ್ದು, ಎರಡೂ ವಾಹನಗಳಿಗೂ ಅಲ್ಪ ಸ್ವಲ್ಪ ಹಾನಿಯಾಗಿದ್ದು, ಲಾರಿ ಅಂಬ್ಯುಲೆನ್ಸ್ ಗೆ ಗುದ್ದಿ ರಸ್ತೆಯ...

ಡಾ. ಅನುರಾಧಾ ಕುರುಂಜಿಯವರಿಂದ ಮಡಿಕೇರಿ ಆಕಾಶವಾಣಿಯಲ್ಲಿ ಡಾ. ಕೆವಿಜಿಯವರ ಕುರಿತು ಅರೆಭಾಷೆ ಸರಣಿ ಕಾರ್ಯಕ್ರಮ

ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಅನುರಾಧಾ ಕುರುಂಜಿಯವರಿಂದ ಮಡಿಕೇರಿ ಆಕಾಶವಾಣಿಯಲ್ಲಿ ಡಾ. ಕುರುಂಜಿ ವೆಂಕಟರಮಣ ಗೌಡೆರ ಕುರಿತು ಸರಣಿ ಕಾರ್ಯಕ್ರಮ ನಡೆಯಲಿದೆ. ಮಡಿಕೇರಿ ಆಕಾಶವಾಣಿಯು ಡಾ. ಕುರುಂಜಿ ವೆಂಕಟರಮಣ ಗೌಡರ ಜೀವನ ಮತ್ತು ಸಾಧನೆ ಕುರಿತು ಅರೆಭಾಷೆಯಲ್ಲಿ ಸರಣಿ ಕಾರ್ಯಕ್ರಮವನ್ನು ಪ್ರಸಾರ ಮಾಡಲಿದ್ದು, ಮೊದಲ ಹಂತದ ಕಾರ್ಯಕ್ರಮವನ್ನು ಡಾ. ಅನುರಾಧಾ ಕುರುಂಜಿಯವರು...
Ad Widget

ಆನ್ಲೈನ್ ಕಿರುಚಿತ್ರ ಸ್ಪರ್ಧೆಯಲ್ಲಿ ಸುಳ್ಯದ ಚಿಣ್ಣರಿಗೆ ಪ್ರಶಸ್ತಿ – ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಜನನಿಗೆ ಪ್ರಥಮ

ಸುಳ್ಯ: ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಮಂಗಳೂರಿನ ವಾರ್ತಾವಾಹಿನಿ V4 ಆಯೋಜಿಸಿದ್ದ ಕಿರುಚಿತ್ರ ಸ್ಪರ್ಧೆಯಲ್ಲಿ ಸುಳ್ಯದ ಚಿಣ್ಣರು ಪ್ರಥಮ ಹಾಗೂ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲಿ ಸುದ್ದಿ ವಾಹಿನಿ ಶಾಲಾ ವಿದ್ಯಾರ್ಥಿಗಳಿಗಾಗಿ ದೇಶಭಕ್ತಿ ಉದ್ದೀಪನಗೊಳಿಸುವ ಹಾಗೂ ಉತ್ತಮ ಸಂದೇಶ ಸಾರುವ ಕಿರುಚಿತ್ರ ಹಾಗೂ ದೇಶಭಕ್ತಿ ಹಾಡುವ ಸ್ಪರ್ಧೆಗಳನ್ನು ಆನ್ಲೈನ್ ಮುಖಾಂತರ ಆಯೋಜಿಸಿತ್ತು. ಪ್ರಾಥಮಿಕ ಹಾಗೂ ಪ್ರೌಢ...

ಶಿಕ್ಷಕರು ಬೇಕಾಗಿದ್ದಾರೆ

ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ಶಾಲಾ ವಿಭಾಗ ಹರಿಹರ ಪಲ್ಲತ್ತಡ್ಕ ಇಲ್ಲಿಗೆ ಗಣಿತ ಅತಿಥಿ ಶಿಕ್ಷಕರು ಬೇಕಾಗಿದ್ದಾರೆ.ಆಸಕ್ತರು ಈ ಕೆಳಗಿನ ಸಂಪರ್ಕ ಸಂಖ್ಯೆಗಳಿಗೆ ಸಂಪರ್ಕಿಸಬಹುದು.948203976508257200865 ವರದಿ :- ಉಲ್ಲಾಸ್ ಕಜ್ಜೋಡಿ

ನಿನ್ನೆ ಹಲವು ಕಡೆ ವ್ಯಾಪಕ ಮಳೆ – ಕೊಲ್ಲಮೊಗ್ರದಲ್ಲಿ ಮುಳುಗಿದ ಸೇತುವೆ

ಸುಬ್ರಹ್ಮಣ್ಯ ಹಾಗೂ ಸುತ್ತಲಿನ ಪರಿಸರದ ಪ್ರದೇಶಗಳಲ್ಲಿ ಅ.20ರ ಬುಧವಾರ ಸಂಜೆ ಗುಡುಗು ಸಹಿತ ಭಾರಿ ಮಳೆಯಾಗಿದೆ‌.ಸುಳ್ಯ ತಾಲೂಕಿನ ಕೊಲ್ಲಮೊಗ್ರು ಪರಿಸರದಲ್ಲಿ ಭಾರಿ ಮಳೆಗೆ ಕೊಲ್ಲಮೊಗ್ರು ಕಲ್ಮಕಾರು ರಸ್ತೆಯ ಶಾಲಾ ಬಳಿ ಇರುವ ಸೇತುವೆ ಮಳೆಗೆ ಜಲಾವೃತಗೊಂಡಿತು. ರಸ್ತೆಯಲ್ಲಿ ಕೂಡ ಮಳೆ ನೀರು ಹರಿದಿದೆ. ವಾಹನ ಸವಾರರು ಸಂಕಷ್ಟ ಅನುಭವಿಸಿದರು. ಸುಬ್ರಹ್ಮಣ್ಯ, ಹರಿಹರ ಪಲ್ಲತ್ತಡ್ಕ, ಐನೆಕಿದು, ಕೊಲ್ಲಮೊಗ್ರು,...

ಕುಕ್ಕೆ ದೇವಳದ ನೂತನ ಲಾಂಛನ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕಲಾವಿದನಿಂದ ಲಾಂಛನ ರಚನೆ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಆಡಳಿತ ಮಂಡಳಿಯು ನೂತನ ಲಾಂಛನವನ್ನು ಸಿದ್ಧಗೊಳಿಸಿದೆ. ರಜತ ವರ್ಣದ ಏಳು ಹೆಡೆಯ ನಾಗರಾಜ ಮತ್ತು ಷಣ್ಮುಖನನ್ನು ಶ್ರೀ ದೇವರ ಉತ್ಸವ ಮೂರ್ತಿಯನ್ನು ಹೋಲುವ ಏಳು ಹೆಡೆ ನಾಗರಾಜನ ನಡುವೆ ಷಣ್ಮುಖ ವಿರಾಜಮಾನನಾಗಿರುವ ರಜತ ವರ್ಣದ ಚಿತ್ರವು ಲಾಂಛನದ ಮದ್ಯ ಭಾಗವನ್ನು ಅಲಂಕರಿಸಿದೆ. ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಶಿವಪ್ರಸಾದ್...

ಜಾಲ್ಸೂರು ಪಂಚಾಯತ್ ವತಿಯಿಂದ ಕಸ ಸಂಗ್ರಹಣೆಗೆ ವರ್ತಕರಿಗೆ ಪ್ಲಾಸ್ಟಿಕ್ ಚೀಲ ವಿತರಣೆ

ಜಾಲ್ಸೂರು ಗ್ರಾಮ ಪಂಚಾಯತ್ ವತಿಯಿಂದ ಪಂಚಾಯತ್ ವ್ಯಾಪ್ತಿಯಲ್ಲಿ ಅ.೨೦ ರಂದು ಘನ ತ್ಯಾಜ್ಯ ಸಂಗ್ರಹಕ್ಕಾಗಿ ಚೀಲಗಳನ್ನು ನೀಡಲಾಯಿತು.ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಕೆ.ಎಂ ಬಾಬು ,ಪಿ.ಡಿ.ಒ ಸುಬ್ಬಯ್ಯ ,ಸಂಜೀವಿನಿ ಒಕ್ಕೂಟದ ಸ್ಥಳೀಯರು, ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
error: Content is protected !!