ಕೇಂದ್ರ ಸರ್ಕಾರದ ಸ್ವಚ್ಚಾ ಭಾರತ ಕಾರ್ಯಕ್ರಮ ಪಂಜ ಗ್ರಾಮ ಪಂಚಾಯತ್ ನ ಸಹಯೋಗದೊಂದಿಗೆ ಹಮ್ಮಿಕೊಂಡ ಸ್ವಚ್ಚತಾ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ.ಪಂಜ ಪಂಚಲಿಂಗೇಶ್ವರ ದೇವಸ್ಥಾನದ ಮೈದಾನದಿಂದ ಮೊದಲ್ಗೊಂಡು ಅಡ್ಡತೋಡು,ಪಲ್ಲೋಡಿ,ಕರಿಕ್ಕಳ,ಪೊಳಂಜ ರಸ್ತೆ, ಪಂಜ ಪೇಟೆಯ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಹಬ್ಬಿಕೊಂಡ ಪೊದೆಗಳನ್ನು ಕಡಿದು ಸ್ವಚ್ಚ ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಯುವಕ ಮಂಡಲಗಳ ಉತ್ಸಾಹಿ ಯುವಕರ ಅವಿರತ ಶ್ರಮದಿಂದ ಈ ಕಾರ್ಯಕ್ರಮ ಯಶಸ್ವಿಯಾಯಿತು.
ಪಂಜ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಅಧ್ಯಕ್ಷ ಚಂದ್ರಶೇಖರ ಕರಿಮಜಲು ಅಧ್ಯಕ್ಷತೆ ವಹಿಸಿದ್ದರು. ಪಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಪೂರ್ಣಿಮಾ ದೇರಾಜೆ,ಉಪಾಧ್ಯಕ್ಷೆ ನೇತ್ರಾವತಿ ಕಲ್ಲಾಜೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೀರ್ತಿ ಪ್ರಸಾದ್,ಗ್ರಾಮ ಪಂಚಾಯತ್ ಕಾರ್ಯದರ್ಶಿ ಪದ್ಮಯ್ಯ ಹಾಗೂ ಯುವ ಜನ ಸಂಯುಕ್ತ ಮಂಡಳಿ ರಿ ಸುಳ್ಯ ಕ್ರೀಡಾ ಕಾರ್ಯದರ್ಶಿ ಪವನ್ ಪಲ್ಲತ್ತಡ್ಕ ,ಯುವ ಜನ ಸಂಯುಕ್ತ ಮಂಡಳಿ ರಿ ಸುಳ್ಯ ಇದರ ನಿರ್ದೇಶಕ ಜನಾರ್ದನ ನಾಗತೀರ್ಥ
ಮತ್ತು ಈ ಬೃಹತ್ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಂಘಸಂಸ್ಥೆಗಳ ಅಧ್ಯಕ್ಷರು ಮತ್ತು ಸದಸ್ಯರು ಈ ಸಭೆಯಲ್ಲಿ ಹಾಜರಿದ್ದರು.
ಈ ಕಾರ್ಯಕ್ರಮದಲ್ಲಿ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ನ ಜೀವ ರಕ್ಷಕ ಆ್ಯಂಬುಲೆನ್ಸ್ ನ ಚಾಲಕರಿಗೆ ಮತ್ತು ನಿರ್ವಾಹಕರಿಗೆ ರಂಜಿತ್ ಜಬಳೆ ಇವರು ಸಮವಸ್ತ್ರ ಕೊಡುಗೆಯಾಗಿ ನೀಡಿದರು.
ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಇಂದು ಪಂಜದಲ್ಲಿ ಶುಭಾರಂಭಗೊಂಡ ಮಹಾಲಕ್ಷ್ಮಿ ಕಾಂಪ್ಲೆಕ್ಸ್ ನ ಮಾಲೀಕರಾದ ಗಣೇಶ್ ಕೋಟೆಗುಡ್ಡೆ ನೆರವೇರಿಸಿದರು.
ಸ್ವಚ್ಚತಾ ಕಾರ್ಯಕ್ರಮದಲ್ಲಿ ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್, ಮಿತ್ರ ಮಂಡಲ ನಾಗತೀರ್ಥ, ಶಿವಾಜಿ ಯುವಕ ಮಂಡಲ ಕುತ್ಕೂಂಜ, ಗೆಳೆಯರ ಬಳಗ ಪೊಳೆಂಜ, ಉಳ್ಳಾಕುಲು ಕಲಾರಂಗ ಪಲ್ಲೋಡಿ, ಜೈ ಕರ್ನಾಟಕ ಯುವಕ ಮಂಡಲ, ಶಿವ ಫ್ರೆಂಡ್ಸ್ ಪಂಜ, BMS ರಿಕ್ಷಾ ಚಾಲಕರು ಹಾಗೂ ಮಾಲಕರ ಸಂಘ ಪಂಜ ಘಟಕದ ಪದಾಧಿಕಾರಿಗಳು ಭಾಗವಹಿಸಿದ್ದರು. ದಾಮೋದರ ನೇರಳ ನಿರೂಪಿಸಿ, ವಂದಿಸಿದರು.