Ad Widget

ಕೃಷಿ ಭೂಮಿಯನ್ನು ಅರಣ್ಯವನ್ನಾಗಿಸಲು ಪಿತೂರಿ – ಭ್ರಷ್ಟಾಚಾರ ವ್ಯವಸ್ಥೆ ಹಾಗೂ ಕೃಷಿ ಭೂಮಿಯನ್ನು ಅರಣ್ಯವನ್ನಾಗಿಸಿದರೆ ಪ್ರತಿಭಟನೆಯ ಎಚ್ಚರಿಕೆ : ಮಲೆನಾಡು ಜನಹಿತ ರಕ್ಷಣಾ ವೇದಿಕೆ

. . . . . . .

ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರು ವಾಸಿಸುತ್ತಿರುವ ಹಾಗೂ ಕೃಷಿ ಚಟುವಟಿಕೆಗಳನ್ನು ನಡೆಸುತ್ತಿರುವ ಕೃಷಿ ಭೂಮಿಗಳನ್ನು ಅರಣ್ಯವನ್ನಾಗಿ ಪರಿವರ್ತನೆ ಮಾಡಿ ಭಾರತವನ್ನು ಬಡರಾಷ್ಟ್ರವನ್ನಾಗಿ ಮಾಡಲಾಗುತ್ತಿದೆ ಎಂದು ಅ.01ರಂದು ಸುಬ್ರಹ್ಮಣ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಆರೋಪಿಸಿದರು.
ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಜನರ ಬದೂಕನ್ನು ಕಸಿದುಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಹಾಗೂ ಕಾಡು ಪ್ರಾಣಿಗಳ ರಕ್ಷಣೆ ಎಂಬ ಕಾರಣ ಹೇಳಿ ಕೋವಿ ಪರವಾನಗಿ ರದ್ದುಪಡಿಸಲಾಗುತ್ತಿದೆ. ಹಾಗೂ ಕಾಡು ಪ್ರಾಣಿಗಳಿಂದ ಕೃಷಿ ನಾಶಪಡಿಸಿ ಆಹಾರೋತ್ಪಾದನೆ ಇಲ್ಲದಂತೆ ಮಾಡಲಾಗುತ್ತಿದೆ ಎಂದು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕೇಂದ್ರ ಸಮಿತಿ ಸಂಚಾಲಕರಾದ ಕಿಶೋರ್ ಶಿರಾಡಿ ಹೇಳಿದರು.
ಅದೇ ರೀತಿ 5 ಎಕರೆಗಿಂತ ಕಡಿಮೆ ಇರುವ ಅರಣ್ಯವನ್ನು ಹಾಗೂ ಸರಕಾರಿ ಭೂಮಿಯನ್ನು ನೆಡುತೋಪು, ನಾಗಬನ, ಗೋಮಾಳ ಹಾಗೂ ಸಾರ್ವಜನಿಕರಿಗೆ ಕಾಯ್ದಿರಿಸಿದ ಜಾಗ ಮುಂತಾದವುಗಳನ್ನು ಸುರಕ್ಷಿತ ಅರಣ್ಯಕ್ಕೆ ಸೇರಿಸುವ ಹಾಗಿಲ್ಲ ಆದರೆ ಇಲ್ಲಿ ಸೇರಿಸಲಾಗಿದೆ ಹಾಗೂ ಇದರ ಬಗ್ಗೆ ಯಾವುದೇ ಜನರು ಹಾಗೂ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ ಎಂದು ಅವರು ಹೇಳಿದರು.
ಸಣ್ಣ ಸಣ್ಣ ಸಂಸ್ಥೆಗಳು ಮರಳು ಗಣಿಗಾರಿಕೆ ನಡೆಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರಿಗಳು ದೊಡ್ಡ ದೊಡ್ಡ ಕಂಪನಿಗಳು ನಡೆಸುವ ಮರಳು ಗಣಿಗಾರಿಕೆಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇಲ್ಲಿಯೂ ಕೂಡ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಅವರು ಆರೋಪಿಸಿದರು.
ಈ ರೀತಿ ಕೃಷಿ ಭೂಮಿಯನ್ನು ಅರಣ್ಯಕ್ಕೆ ಸೇರಿಸುವುದರಿಂದ ಕ್ರಮೇಣ ದೇಶದ ಅಭಿವೃದ್ಧಿ ಕುಂಠಿತವಾಗಲಿದೆ. ಹಾಗೂ ಇಂತಹ ಯೋಜನೆಗಳಿಂದ ಜನರು ಸರಕಾರದ ಯೋಜನೆಯ ಮೂಲಕ ಜಾಗದ ರೆಕಾರ್ಡ್ ಮಾಡಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಹಾಗೂ ಅಕ್ರಮ-ಸಕ್ರಮ, 94C ಅರ್ಜಿಗಳ ನೆಪದಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳು ಸುಲಭ ರೀತಿಯಲ್ಲಿ ಹಣ ಮಾಡುವ ದಾರಿ ಕಂಡುಕೊಂಡಿದ್ದಾರೆ ಎಂದು ಅವರು ಅರೋಪಿಸಿದರು.
ಸುಮಾರು 5 ಹಂತಗಳಲ್ಲಿ ಸಾವಿರಾರು ಎಕರೆ ರೆವೆನ್ಯೂ ಜಾಗಗಳನ್ನು ಸುರಕ್ಷಿತ ಅರಣ್ಯಗಳಿಗೆ ಸೇರಿಸಿದ್ದಾರೆ ಎಂದು ಅವರು ಹೇಳಿದರು.
ಅಧಿಕಾರಿಗಳು ಯೋಜನೆಯ ಹೆಸರಿನಲ್ಲಿ ಬಡ ರೈತರಿಂದ ಹಾಗೂ ಬಡ ಜನರಿಂದ ಹಣ ಪಡೆಯುವ ಭ್ರಷ್ಟಾಚಾರ ವ್ಯವಸ್ಥೆ ಹಾಗೂ ಅರಣ್ಯ ಇಲಾಖೆ ಕೃಷಿ ಭೂಮಿಯನ್ನು ಅರಣ್ಯವನ್ನಾಗಿ ಪರಿವರ್ತಿಸುವ ಕ್ರಮಗಳ ಬಗ್ಗೆ ಸರಕಾರ ಎಚ್ಚೆತ್ತುಕೊಳ್ಳದೇ ಹೋದರೆ ಮುಂದಿನ ದಿನಗಳಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಕಿಶೋರ್ ಶಿರಾಡಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ರವೀಂದ್ರ ಕುಮಾರ್ ರುದ್ರಪಾದ, ಶೇಖರಪ್ಪ ತಳವಾರ, ಚಂದ್ರಶೇಖರ ಕೋನಡ್ಕ, ಸುರೇಶ್ ಉಜ್ಜಿರಡ್ಕ, ಶಶಿಧರ್ ನಾರ್ಣಕಜೆ ಮುಂತಾದವರು ಉಪಸ್ಥಿತರಿದ್ದರು.

(ವರದಿ :- ಉಲ್ಲಾಸ್ ಕಜ್ಜೋಡಿ)

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!