Ad Widget

ಗುತ್ತಿಗಾರು : ದೇವಿ ಕೃಪಾ ಪ್ರಗತಿ ಬಂಧು ಸಂಘ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಬಿ ಸಿ ಟ್ರಸ್ಟ್ ( ರಿ ) ಸುಳ್ಯ ತಾಲೂಕು ಗುತ್ತಿಗಾರು ವಲಯದ ಗುತ್ತಿಗಾರಿನ ಚಣಿಲದಲ್ಲಿ "ದೇವಿ ಕೃಪಾ" ಹೆಸರಿನ ಪ್ರಗತಿ ಬಂಧು ಸಂಘವನ್ನು ವಲಯದ ಮೇಲ್ವಿಚಾರಕರಾದ ಶ್ರೀ ಮುರಳೀಧರ ರವರು ದೀಪ ಬೆಳಗಿಸಿ ಉದ್ಘಾಟಿಸಿ ಐದು ಮಂದಿಯೂ ಏಕ ಮನಸ್ಸಿನಿಂದ ಜತೆಗೂಡಿ ನಿಮ್ಮ ವೈಯಕ್ತಿಕ ಅಭಿವೃದ್ಧಿ ಮತ್ತು...

ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷರಾಗಿ ಅಬ್ದುಲ್ ಮಜೀದ್ ಎಸ್.ಎಮ್. ಪುನರಾಯ್ಕೆ

ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್( ರಿ) ಅರಂತೋಡು ಇದರ 44 ನೇ ವಾರ್ಷಿಕ ಮಹಾಸಭೆಯು ನುಸ್ರತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಆ.8ರಂದು ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಎಸ್.ಎಮ್.ಅಬ್ದುಲ್ ಮಜೀದ್ ವಹಿಸಿದ್ದರು. ಅರಂತೋಡು ಜುಮ್ಮಾ ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ದುವಾ ನೆರವೇರಿಸಿ ಉದ್ಘಾಟಿಸಿದರು....
Ad Widget

ಪಂಜ: ಶ್ರೀಮತಿ ಅನಸೂಯ.ಸಿ.ಕೆ ನಿಧನ

ಪಂಜ ಸಂಕಡ್ಕ ನಿವಾಸಿ ಕೂತ್ಕುಂಜ ಸ.ಹಿ.ಪ್ರಾ.ಶಾಲೆಯ ಮುಖ್ಯ ಶಿಕ್ಷಕ ಚಂದ್ರಶೇಖರ ಕುಕ್ಕುಪುಣಿಯವರ ಪತ್ನಿ ಶ್ರೀಮತಿ ಅನಸೂಯ.ಸಿ.ಕೆ ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಆ.20ರಂದು ನಿಧನರಾದರು. ಅವರಿಗೆ 49 ವರ್ಷ ವಯಸ್ಸಾಗಿತ್ತು.ಶ್ರೀಮತಿ ಅನಸೂಯ.ಸಿ.ಕೆ ಯವರು ಪಂಜ ವನಿತಾ ಸಮಾಜದ ಕಾರ್ಯದರ್ಶಿಯಾಗಿ, ಸದಸ್ಯೆಯಾಗಿ ಸೇವೆ ಸಲ್ಲಿಸಿದ್ದರು.

ಬೆಳ್ಳಾರೆ : ‘ಕ್ಷಯ ಮುಕ್ತ ಭಾರತ’ ವಿಶೇಷ ರಂಗ ತರಬೇತಿ ಉದ್ಘಾಟನೆ

ಜೇಸಿಐ ಬೆಳ್ಳಾರೆ, ಯುವ ಜೇಸಿಐ ಬೆಳ್ಳಾರೆ, ಕ್ಷಯ ಚಿಕಿತ್ಸಾ ಘಟಕ - ಆರೋಗ್ಯ ಇಲಾಖೆ ಸುಳ್ಯ ನೇತೃತ್ವದಲ್ಲಿ ಕ್ಷಯ ರೋಗ ಕುರಿತು ಜಾಗೃತಿ ಮೂಡಿಸುವ ಕಿರುಚಿತ್ರ 'ಕ್ಷಯ ಮುಕ್ತ ಭಾರತ' ಇದರ ವಿಶೇಷ ರಂಗ ತರಬೇತಿಯ ಉದ್ಘಾಟನೆ ಬೆಳ್ಳಾರೆ ಜೇಸಿ ಭವನದಲ್ಲಿ ಆ.23ರಂದು ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ...

ಜಯನಗರ : ಪೌಷ್ಟಿಕ ಆಹಾರ ಮೇಳ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ವತಿಯಿಂದ ಪೌಷ್ಟಿಕ ಆಹಾರ ಮೇಳ ಜಯನಗರದಲ್ಲಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಜಯನಗರದ ಶಿಕ್ಷಕಿಯಾದ ಶ್ರೀಮತಿ ಮಮತಾ ರವರು ಉದ್ಘಾಟಿಸಿ ಪೌಷ್ಟಿಕ ಆಹಾರದ ಮಹತ್ವದ ಕುರಿತು ಮಾಹಿತಿ ನೀಡಿದರು. ಜ್ಞಾನವಿಕಾಸ ಕಾರ್ಯಕ್ರಮದ ಹಿನ್ನೆಲೆ,ಉದ್ದೇಶದ ಕುರಿತು ತಾಲೂಕು ಯೋಜನಾಧಿಕಾರಿ ಗಳಾದ ಶ್ರೀ ಚೆನ್ನಕೇಶವ...

ಬಿಜೆಪಿ ಮಹಿಳಾ ಮೋರ್ಚಾದಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಸನ್ಮಾನ

ಸುಳ್ಯ ಬಿಜೆಪಿ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಯವರಿಗೆ ಸನ್ಮಾನ ಮಾಡಲಾಯಿತು.ಈ ಸಂದರ್ಭದಲ್ಲಿ ಮಹಿಳಾ ಮೋರ್ಚಾ ಅಧ್ಯಕ್ಷೆ, ಕಾರ್ಯದಶಿಗಳು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ನೂತನ ಬಾರ್ ತೆರೆಯಬಾರದೆಂದು ಹರ್ಷಿತ್ ಅವರು ಅಕ್ರಮ ಗಣಿಗಾರಿಕೆ ಹಣೆಪಟ್ಟಿ ಕಟ್ಟಿ ನಮ್ಮನ್ನು ಮಣಿಸಲು ಯತ್ನಿಸುತ್ತಿದ್ದಾರೆ – ದೇವಿಪ್ರಸಾದ್ ಚಿಕ್ಮುಳಿ

ನಾವು ನಮ್ಮ ಕಟ್ಟಡದಲ್ಲಿ ಬಾರ್ ತೆರೆದರೆ ತಮ್ಮ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಅಕ್ರಮ ಗಣಿಗಾರಿಕೆ ಎಂಬ ಹಣೆಪಟ್ಟಿ ನೀಡಿ ಹರ್ಷಿತ್ ಕೊರಂಬಟ ಮತ್ತು ನಿವೃತ್ತ ಪಿಡ್ಲ್ಯೂಡಿ ಇಂಜಿನಿಯರ್ ಗಿರೀಶ್ ಕೊರಂಬಟ ಎಂಬವರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಸಾಮಾಜಿಕ ಕಾರ್ಯಕರ್ತ ಎಂದು ಬಿಂಬಿಸಿಕೊಂಡಿರುವ ಅಡ್ಕಾರು ವಿನೋಬನಗರದ ಭೋಜಪ್ಪ ನಾಯ್ಕ ಅವರನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ದೇವಿಪ್ರಸಾದ್...

ಸುಳ್ಯ : ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ನಾರಾಯಣ ಗುರು ಜಯಂತಿ ಆಚರಣೆ

ಸುಳ್ಯ ಮಂಡಲ ಹಿಂದುಳಿದ ವರ್ಗಗಳ ಮೋರ್ಚಾದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ ಪಕ್ಷದ ಕಚೇರಿಯಲ್ಲಿ ಆ.23 ರಂದು ನಡೆಯಿತು.‌ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿಯವರು ಕಾರ್ಯಕ್ರಮ ಉದ್ಘಾಟಿಸಿದರು. ಓಬಿಸಿ ಸುಳ್ಯ ಮಂಡಲ ಅಧ್ಯಕ್ಷ ಚಂದ್ರಶೇಖರ್ ಪನ್ನೆ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ್ ಕುಮಾರ್ ಕಂದಡ್ಕ, ಬಿಜೆಪಿ ಮಂಡಲ...

ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ಜೇನುತುಪ್ಪ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ ಕೇಂದ್ರ ಸಚಿವೆ ಶೋಭ ಕರಂದ್ಲಾಜೆ

ಪುತ್ತೂರಿನಲ್ಲಿ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಸಚಿವರಾದ ಸನ್ಮಾನ್ಯ ಶೋಭಾ ಕರಂದ್ಲಾಜೆ ಯವರು ಗ್ರಾಮಜನ್ಯ ರೈತ ಉತ್ಪಾದಕ ಸಂಸ್ಥೆಯ ಜೇನುತುಪ್ಪವನ್ನು ಇಂದು ಉದ್ಘಾಟಿಸಿ ಮಾರುಕಟ್ಟೆಗೆ ಪರಿಚಯಿಸಿದರು. ಈ ಸಂದರ್ಭದಲ್ಲಿ ಪುತ್ತೂರಿನ ಶಾಸಕರಾದ ಮಾನ್ಯ ಸಂಜೀವ ಮಠಂದೂರು, ಗ್ರಾಮಜನ್ಯದ ಅಧ್ಯಕ್ಷರಾದ ರಾಮಕೃಷ್ಣ ಭಟ್ ಕುರುಂಬುಡೆಲು, ನಿರ್ದೇಶಕರಾದ ಮೂಲಚಂದ್ರ ಕೆ., ಶಂಕರ ಭಾರದ್ವಾಜ್, ರಾಮಪ್ರತೀಕ ಕರಿಯಾಲ,...

ತಾಳೆ ಬೆಳೆಗಾರರ ಸಂಘದ ವತಿಯಿಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಗೆ ಮನವಿ – ರೈತರಿಗೆ ಬೆಂಬಲ ಬೆಲೆ ಹಾಗೂ ಕೃಷಿಗೆ ವಿಸ್ತರಣೆಗೆ ಪ್ರೋತ್ಸಾಹ ನೀಡಲು ಒತ್ತಾಯ

ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆಯವರು ಸುಳ್ಯಕ್ಕೆ ಬಂದಿದ್ದ ಸಂದರ್ಭದಲ್ಲಿ ತಾಳೆ ಬೆಳೆಗಾರರ ಸಮಸ್ಯೆಗಳ ಪರಿಹಾರದ ಬಗ್ಗೆ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು. ಅಂತರ ರಾಷ್ಟ್ರೀಯ ಪಾಮ್ ಎಣ್ಣೆ ದರ ಆಧರಿಸಿ ಎಣ್ಣೆ ಹಾಗೂ ತಾಳೆ ಹಣ್ಣಿನ ಖರೀದಿ ದರ ನಿರ್ಧರಿಸಲಾಗುತ್ತದೆ.ಆ ಬೆಲೆ ಇಲ್ಲಿನ ಉತ್ಪಾದಕ ವೆಚ್ಚದ ಅನ್ವಯ ಲಾಭದಾಯಕವಾಗುವುದಿಲ್ಲ...
Loading posts...

All posts loaded

No more posts

error: Content is protected !!