Ad Widget

ದರ್ಖಾಸ್ತು ಹಿ.ಪ್ರಾ.ಶಾಲೆ ಎಸ್.ಡಿ.ಎಂ.ಸಿ ರಚನೆ – ಅಧ್ಯಕ್ಷರಾಗಿ ಹರೀಶ್.ಡಿ

ದರ್ಖಾಸ್ತು ಸ.ಹಿ.ಪ್ರಾ.ಶಾಲೆಯ ಎಸ್.ಡಿ.ಎಂ.ಸಿ ಸಭೆಯು ಆ.26ರಂದು ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷ ಚಂದ್ರಶೇಖರ ಪನ್ನೆ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಎಸ್.ಡಿ.ಎಂ.ಸಿ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಹರೀಶ್.ಡಿ, ಉಪಾಧ್ಯಕ್ಷೆಯಾಗಿ ಭವಾನಿ, ಸದಸ್ಯರಾಗಿ ಗೀತಾ, ಸುಜಾತ, ಸಂಜೀವ, ಹಸೀನಾ, ನುಸೈಬಾ, ಜಯಶ್ರೀ, ಬಾಲಕೃಷ್ಣ, ಗಿರಿಜ, ಸುಜಾತ.ಬಿ, ಸುಜಾತ, ಕಲಾ, ಜಯಂತಿ, ಜಾನ್...

ದರ್ಖಾಸ್ತು : ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ- ಜನಸೇವೆಯ ಇಂತಹ ಶಿಬಿರಗಳಿಗೆ ಸರ್ಕಾರದ ಸಹಕಾರ – ಸಚಿವ ಎಸ್. ಅಂಗಾರ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಸೇವಾ ಭಾರತಿ ಬೆಳ್ಳಾರೆ ವತಿಯಿಂದ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಉಡುಪಿ, ಮಂಗಳೂರು ಮತ್ತು ಸುಳ್ಯ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ (ಅಂಧತ್ವ ವಿಭಾಗ) ಮಂಗಳೂರು, ಡಾ| ಪಿ. ದಯಾನಂದ ಪೈ ಮತ್ತು ಪಿ. ಸತೀಶ್ ಪೈ ಚಾರಿಟೇಬಲ್...
Ad Widget

ಸ್ವಾರ್ಥಕ್ಕಾಗಿ ಸಮಾಜಕ್ಕೆ ಕೇಡು ಬಯಸಿ, ಗುತ್ತಿಗಾರಿನ ಸ್ವಾಭಿಮಾನಕ್ಕೆ ಧಕ್ಕೆ ತರುವವರ ವಿರುದ್ಧ ಒಗ್ಗಟ್ಟಾಗಿ ಹೋರಾಟಕ್ಕೆ ಸಿದ್ಧ : ಭರತ್ ಮುಂಡೋಡಿ

ವೈಯಕ್ತಿಕ ದ್ವೇಷವನ್ನಿಟ್ಟುಕೊಂಡು ತನ್ನ ಸ್ವಾರ್ಥಕ್ಕಾಗಿ ಸಮಾಜಕ್ಕೆ ಊರಿಗೆ ಕೇಡು ಬಯಸುವವರಿಂದ ಗುತ್ತಿಗಾರಿನ ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ಒಗ್ಗಟ್ಟಾಗಿ ಈ ಮೊದಲು ಹೋರಾಟ ನಡೆಸಿದ್ದೇವೆ. ಇನ್ನೂ ಅಂತಹ ಸಂದರ್ಭ ಬಂದಾಗ ರಾಜಕೀಯ ರಹಿತ ಹೋರಾಟಕ್ಕೆ ಸಿದ್ಧ ಎಂದು ಮಾಜಿ ಜಿ.ಪಂ.ಸದಸ್ಯ ಭರತ್ ಮುಂಡೋಡಿ ಹೇಳಿದರು.ಅವರು ಇಂದು ಗುತ್ತಿಗಾರಿನಲ್ಲಿ ನಡೆದ ನಾಗರಿಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು. ಗುತ್ತಿಗಾರು ಗ್ರಾಮವನ್ನು...

ಸಚಿವ ಎಸ್. ಅಂಗಾರರಿಂದ ಮೇದಿನಡ್ಕದಲ್ಲಿ ನೂತನ ಅಂಗನವಾಡಿ ಉದ್ಘಾಟನೆ

ದೇಶದ ಏಳಿಗೆಗೆ ಜನರ ಸಹಕಾರ ಅಗತ್ಯವಾಗಿದೆ. ಅವಶ್ಯಕವಾಗಿ ಆಗಬೇಕಾದ ಅಭಿವೃದ್ಧಿ ಕಾರ್ಯಗಳ ಕುರಿತು ಸರಕಾರದ ಗಮನಕ್ಕೆ ತರಬೇಕು. ಆಗ ಅದನ್ನು ಹೇಗೆ ಕಾರ್ಯಗತಗೊಳಿಸಬೇಕು ಎಂಬುದರ ಕುರಿತು ಕ್ರಮ ಕೈಗೊಳ್ಳಲಾಗುವುದು. ಅಭಿವೃದ್ಧಿಯನ್ನು ಹೇಗೆ ಮಾಡಬೇಕು ಎಂಬುದರ ಸ್ಪಷ್ಟ ಅರಿವು ನಮಗಿದೆ ಎಂದು ಸಚಿವ ಎಸ್.ಅಂಗಾರ ಅವರು ಹೇಳಿದರು.ಅಜ್ಜಾವರದ ಮೇದಿನಡ್ಕದಲ್ಲಿ ಆ. 29 ರಂದು ನೂತನ ಅಂಗನವಾಡಿ ಯನ್ನು...

ಸಚಿವರಿಂದ ಗೃಹ ರಕ್ಷಕದಳ ಕಛೇರಿಗೆ ಕಂಪ್ಯೂಟರ್ ಹಸ್ತಾಂತರ – ಮುರಲಿಮೋಹನ ಚೂಂತಾರು, ಸಚಿವ ಅಂಗಾರ ಹಾಗೂ ಗಿರೀಶ್ ಭಾರದ್ವಾಜರಿಗೆ ಗೃಹರಕ್ಷಕ ದಳದಿಂದ ಗೌರವಾರ್ಪಣೆ

ಗೃಹರಕ್ಷಕ ದಳದ ನೂತನ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಮುಖ್ಯ ಕಮಾಂಡರ್ ಮುರಲಿ ಮೋಹನ ಚೋಂತಾರು, ಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್ ಹಾಗೂ ದ.ಕ. ಉಸ್ತುವಾರಿ ಸಚಿವ ಎಸ್.ಅಂಗಾರ ಅವರನ್ನು ಗೃಹರಕ್ಷಕ ದಳದ ವತಿಯಿಂದ ಸಮ್ಮಾನಿಸಲಾಯಿತು. ಸಚಿವ ಅಂಗಾರರು ಸುಳ್ಯ ಹಾಗೂ ಸುಬ್ರಹ್ಮಣ್ಯದ ಗೃಹರಕ್ಷಕ ದಳ ಕಚೇರಿಗೆ ಕಂಪ್ಯೂಟರ್ ಹಸ್ತಾಂತರಿಸಿದರು.

ಪೂರ್ಣಚಂದ್ರ ದೇರಪ್ಪಜ್ಜನಮನೆ ನಿಧನ

ನಾಲ್ಕೂರು ಗ್ರಾಮದ ದೇರಪ್ಪಜ್ಜನ ಮನೆ ಡಿ.ಎಚ್. ಪೂರ್ಣಚಂದ್ರ ರವರು ಮೆದುಳಿನ ರಕ್ತಸ್ರಾವದಿಂದ ಆ.27 ರಂದು ಪೂನಾದಲ್ಲಿ ನಿಧನರಾದರು. ಪೂನಾದ ಖಾಸಗಿ ಕಂಪೆನಿಯಲ್ಲಿ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಲತಾ, ಪುತ್ರ ಶಮಂತ್, ಪುತ್ರಿ ವಿಂಧ್ಯಾ, ಸಹೋದರ, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಕಮಿಲ : ಪಂಚಶ್ರೀ ಪ್ರಗತಿಬಂಧು ಸಂಘ ರಚನೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಗುತ್ತಿಗಾರು ವಲಯದ ಕಮಿಲ ಒಕ್ಕೂಟದ ಆಜಡ್ಕ ಎಂಬಲ್ಲಿ ನೂತನವಾಗಿ ಪಂಚಶ್ರೀ ಪ್ರಗತಿಬಂಧು ಸಂಘ ವನ್ನು ಒಕ್ಕೂಟದ ಅಧ್ಯಕ್ಷರಾದ ಕೇಶವ ಗೌಡ ಕಾಂತಿಲ ಉದ್ಘಾಟಿಸಿದರು. ಸಂಘದ ದಾಖಲಾತಿಯನ್ನು ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಶಾರದಾ ಹಾಗೂ ಶ್ರೀಮತಿ ಲತಾ ಕುಮಾರಿ ಹಸ್ತಾಂತರಿಸಿದರು. ಈ ಸಂದರ್ಭ...

ಸುಳ್ಯ : ಗ್ರಂಥಾಲಯ ಮೇಲ್ವಿಚಾರಕರ ಸಭೆ

ಸುಳ್ಯ ತಾಲೂಕು ಗ್ರಂಥಾಲಯ ಮೇಲ್ವಿಚಾರಕರ ಸಭೆಯ ಆ 27ರಂದು ತಾಲೂಕು ಪಂಚಾಯತ್ ಮಿನಿ ವಿಧಾನಸೌಧದಲ್ಲಿ ನಡೆಯಿತು. ಮುಖ್ಯ ಗ್ರಂಥಾಲಯಾಧಿಕಾರಿ ಗಾಯತ್ರಿ ಮತ್ತು ತಾಲೂಕು ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ರವರು ಗ್ರಂಥಾಲಯದ ಡಿಜಿಟಲೀಕರಣ ಮತ್ತು ಬೇಕನ್ ಗ್ರಂಥಾಲಯದ ಬಗ್ಗೆ ಮಾಹಿತಿ ನೀಡಿದರು. ಹಾಗೂ ಸುಳ್ಯ ತಾಲೂಕಿನ 10 ಗ್ರಂಥಾಲಯವನ್ನು ತಕ್ಷಣ ಡಿಜಿಟಲೀಕರಣ ಗೊಳಿಸುವಂತೆ ಕಾರ್ಯಪ್ರವರ್ತರಾಗಲು ತಿಳಿಸಿದರು. ತಾಲೂಕಿನ 25...

ವಿಶ್ವಾಸವಿಲ್ಲದ ವ್ಯವಸ್ಥೆಯ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುತ್ತಾರೆ. ಪ್ರತಿಯೊಬ್ಬರೂ ತಮ್ಮ ತಮ್ಮ ಕಾರ್ಯಕ್ಷೇತ್ರಕ್ಕೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು- ಸಚಿವ ಎಸ್.ಅಂಗಾರ

ಮಾದಕ ದ್ರವ್ಯ ಜಾಲ ಹಾಗೂ ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಇಂಥ ಕೃತ್ಯಗಳನ್ನು ನಾವು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ . ಇದನ್ನು ತಡೆಗಟ್ಟಲು ಸಂಬಂಧಪಟ್ಟ ಇಲಾಖೆ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಚಿವ ಎಸ್ ಅಂಗಾರ ಅವರು ಹೇಳಿದರು. ಸುಳ್ಯದ ಯುವಜನ ಸಂಯುಕ್ತಮಂಡಳಿಯ ಸಭಾಂಗಣದಲ್ಲಿ ನಡೆದ ನೂತನ ಗೃಹರಕ್ಷಕ ದಳದ ಕಚೇರಿಯ...

ಸುಬ್ರಹ್ಮಣ್ಯದ ಜನಾನುರಾಗಿ ವೈದ್ಯ ಬಿ.ಕೆ.ಭಟ್ ನಿಧನ

ಸುಬ್ರಹ್ಮಣ್ಯದ ನಿಟ್ಟೆ ಆಸ್ಪತ್ರೆಯಲ್ಲಿ ಕಳೆದ 30 ವರ್ಷಗಳಿಂದ ಪ್ರಖ್ಯಾತ ವೈದ್ಯ ಬಿ.ಕೆ.ಭಟ್ ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಸುಬ್ರಹ್ಮಣ್ಯದಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದ ಇವರು ಭಾಗದ ಜನರಿಗೆ ಉತ್ತಮ ಚಿಕಿತ್ಸೆ ನೀಡಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ , ಪುತ್ರ, ಸೊಸೆ ಹಾಗೂ ಮೊಮ್ಮಗಳನ್ನು ಅಗಲಿದ್ದಾರೆ.
Loading posts...

All posts loaded

No more posts

error: Content is protected !!