Ad Widget

ಬೊಳುಬೈಲು : ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

ನವಚೇತನ ಯುವಕ ಮಂಡಲ (ರಿ )ಬೊಳುಬೈಲು ವತಿಯಿಂದ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯನ್ನು ಕೆ. ವಿ. ಜಿ. ತಾಂತ್ರಿಕ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ |ಮನೋಜ್ ಅಡ್ಡಂತಡ್ಕ ದೀಪ ಬೆಳಗಿಸಿ ಉದ್ಘಾಟಿಸಿ ಧಾರ್ಮಿಕ ಪ್ರವಚನ ನೀಡಿದರು. ಜಾಲ್ಸುರು ಗ್ರಾಮ ಪಂಚಾಯತ್ ಅಧ್ಯಕ್ಷರು ಕೆ. ಎಂ. ಬಾಬು ಶುಭಹಾರೈಸಿ ಯುವಕ ಮಂಡಲದ ನೂತನ ಯೋಜನೆ ಸ್ಥಳೀಯ ಶಾಲಾ...

ಅರಂಬೂರು : ಅಲ್- ಅಮೀನ್ ಯೂತ್ ಫೆಡರೇಷನ್ ನೂತನ ಕಾರ್ಯಾಲಯ ಉದ್ಘಾಟನೆ

ಅರಂಬೂರಿನ ಬದರ್ ಜುಮಾ ಮಸೀದಿಯ ವಾಣಿಜ್ಯ ಸಂಕೀರ್ಣದಲ್ಲಿ ಅಲ್ ಅಮೀನ್ ಯೂತ್ ಫೆಡರೇಶನ್ ಇದರ ನೂತನ ಕಛೇರಿ ಉದ್ಘಾಟನಾ ಸಮಾರಂಭ ನಡೆಯಿತು. ಕಛೇರಿ ಉದ್ಘಾಟನೆ ಹಾಜಿ ಅಬ್ದುಲ್ ರಹಿಮಾನ್ ನೆರವೇರಿಸಿದರು. ಮಸೀದಿ ಖತೀಬರಾದ ಬಹು| ಮೂಸ ಹಾರಿಸ್ ಮಖ್ದೂಮಿ ಕುಕ್ಕಾಜೆ ಉಸ್ತಾದರು ದುವಾಃ ನೇತೃತ್ವ ನೀಡಿ ಸಂಘಟನೆಗೆ ಶುಭಾಶಯ ತಿಳಿಸಿದರು.ಬದ್ರಿಯಾ ಜುಮಾ ಮಸೀದಿ ಕಾರ್ಯದರ್ಶಿ ಅಕ್ಬರಲಿ...
Ad Widget

ಶೇಣಿ: ಶ್ರೀಕೃಷ್ಣ ಸೇವಾ ಸಮಿತಿಯಿಂದ 19ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಶೇಣಿ ಶ್ರೀ ಕೖಷ್ಣ ಸೇವಾ ಸಮಿತಿಯ ವತಿಯಿಂದ 19ನೇ ವರ್ಷದ ಶ್ರೀ ಕೖಷ್ಣ ಜನ್ಮಾಷ್ಠಮಿಯನ್ನು ಆ.30ರಂದು ಆಚರಿಸಲಾಯಿತು. ಈ ಪ್ರಯುಕ್ತ ಶೇಣಿ ಸ.ಹಿ.ಪ್ರಾ.ಶಾಲಾ ವಠಾರದಲ್ಲಿ ಶ್ರೀ ಸತ್ಯನಾರಾಯಣ ದೇವರ ಪೂಜೆ ನಡೆಯಿತು. ಈ ಸಂದರ್ಭದಲ್ಲಿ ಸಮಿತಿಯ ಪದಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

ಕಲಾವಿಕಾಸ(ರಿ.)ಕಳಂಜ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಕಲಾವಿಕಾಸ (ರಿ.) ಕಳಂಜ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಕಳಂಜ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ದೀಪ ಪ್ರಜ್ವಲನೆಯ ಮೂಲಕ ಸಾಂಕೇತಿಕವಾಗಿ ಆ.30 ರಂದು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಲಾವಿಕಾಸ(ರಿ.) ಕಳಂಜ ಇದರ ಅಧ್ಯಕ್ಷ ಲೋಹಿತ್ ಕಟ್ಟತ್ತಾರು, ಕಾರ್ಯದರ್ಶಿ ಶಿವಪ್ರಸಾದ್ ಕಳಂಜ, ಶ್ರೀ ವಿಷ್ಣುಮೂರ್ತಿ ಸೇವಾ ಸಮಿತಿ ಕಳಂಜ ಇದರ ಅಧ್ಯಕ್ಷರಾದ ಲಕ್ಷೀಶ್ ರೈ ಗುರಿಕ್ಕಾನ, ಗೌರವಾಧ್ಯಕ್ಷರಾದ...

ಸುಳ್ಯ : ಕರವೇ ವತಿಯಿಂದ ಊಟದ ಕಿಟ್ ವಿತರಣೆ

ಕರ್ನಾಟಕ ರಕ್ಷಣಾ ವೇದಿಕೆ ಸುಳ್ಯ ಘಟಕ ವತಿಯಿಂದ ಆ.29 ರಂದು ವೀಕೆಂಡ್ ಕರ್ಪ್ಯೂ ಸಮಯದಲ್ಲಿ ಟ್ರಕ್ ಚಾಲಕರಿಗೆ ಮತ್ತು ಬಡ ಕಾರ್ಮಿಕರಿಗೆ ಊಟದ ಕಿಟ್ ವಿತರಿಸಲಾಯಿತು.ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸುಳ್ಯ ತಾಲೂಕು ಗೌರವಾಧ್ಯಕ್ಷ ಅಶೋಕ್ ಕುಮಾರ್ ಮತ್ತು ಸದಸ್ಯರಾದ ರಾಮಚಂದ್ರ, ರುಕ್ಮಯ್ಯ, ಪುರುಷೋತ್ತಮ, ಕೃಷ್ಣಕುಮಾರ್ ಕೇರ್ಪಳ, ಸುರೇಶ್ ಬೆಟ್ಟಂಪಾಡಿ, ಮೋಹನ್ ಕಲ್ಲಗದ್ದೆ, ಯೋಗೀಶ್...

ಬೆಳ್ಳಾರೆ: ಕ್ಷಯ ಮುಕ್ತ ಭಾರತ ಕಿರುಚಿತ್ರ ತರಬೇತಿ ಕೇಂದ್ರಕ್ಕೆ ಸಚಿವ ಎಸ್ ಅಂಗಾರ ಭೇಟಿ- ಶಿಬಿರಾರ್ಥಿಗಳೊಂದಿಗೆ ಸಂವಾದ

ಜೇಸಿಐ ಬೆಳ್ಳಾರೆ,ಯುವ ಜೇಸಿ ವಿಭಾಗ, ಕ್ಷಯ ಚಿಕಿತ್ಸಾ ಘಟಕ ಆರೋಗ್ಯ ಇಲಾಖೆ ಸುಳ್ಯ ಜಂಟಿ ಆಶ್ರಯದಲ್ಲಿ ಬೆಳ್ಳಾರೆ ಜೇಸಿ ಭವನದಲ್ಲಿ ನಡೆಯುತ್ತಿರುವ ಕ್ಷಯ ಮುಕ್ತ ಭಾರತ ರಂಗ ತರಬೇತಿಗೆ ಕರ್ನಾಟಕ ಸರ್ಕಾರದ ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಅಂಗಾರ ಆ.29ರಂದು ಭೇಟಿ...

ಪೆರುವಾಜೆ: ಭಾವೈಕ್ಯ ಯುವಕ ಮಂಡಲ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ಭಾವೈಕ್ಯ ಯುವಕ ಮಂಡಲ (ರಿ.) ಪೆರುವಾಜೆ ಇದರ ವತಿಯಿಂದ " ಶ್ರೀ ಕೃಷ್ಣ ಜನ್ಮಾಷ್ಟಮಿ" ಕಾರ್ಯಕ್ರಮ ಆ. 29ರಂದು ಪೆರುವಾಜೆಯ ಯುವಕ ಮಂಡಲದ ವೇದಿಕೆಯಲ್ಲಿ ಸಾಂಕೇತಿಕವಾಗಿ ಆಚರಿಸಲಾಯಿತು. ಶ್ರೀ ಕೃಷ್ಣಜನ್ಮಾಷ್ಟಮಿ ಪ್ರಯುಕ್ತ ಕೆಲವು ಸ್ಪರ್ಧೆಯನ್ನು ಆನ್‌ಲೈನ್ ಮುಖಾಂತರ ನಡೆಸಲಾಯಿತು. ಕಾರ್ಯಕ್ರಮವನ್ನು ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಗನ್ನಾಥ ಪೂಜಾರಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಿವೃತ್ತ...

ಕ್ರೀಡಾ ಭಾರತೀ ಸುಳ್ಯ ಘಟಕದ ವತಿಯಿಂದ ಪ್ರಬಂಧ ಸ್ಪರ್ಧೆ-ಬಹುಮಾನ ವಿತರಣೆ

ಕ್ರೀಡಾ ಭಾರತೀ ಸುಳ್ಯ ಘಟಕದ ವತಿಯಿಂದ ರಾಷ್ಟ್ರೀಯ ಕ್ರೀಡಾ ದಿನಾಚರಣೆಯ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ಆ.29 ರಂದು ಸುಳ್ಯ ಚೆನ್ನಕೇಶವ ದೇವಾಲಯದ ಸಭಾಂಗಣದಲ್ಲಿ ನಡೆಯಿತು. ಈ ಸಮಾರಂಭದ ಅಧ್ಯಕ್ಷತೆಯನ್ನು ಕ್ರೀಡಾ ಭಾರತೀ ಅಧ್ಯಕ್ಷರಾದ ಎ.ಸಿ.ವಸಂತ ಅಮಚೂರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸುಳ್ಯ ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಡಾ|ಹರಿಪ್ರಸಾದ್...

ದರ್ಖಾಸ್ತು ಸ.ಹಿ.ಪ್ರಾ.ಶಾಲೆಗೆ ಸಚಿವ ಎಸ್.ಅಂಗಾರ ಭೇಟಿ, ಸನ್ಮಾನ

ದರ್ಖಾಸ್ತು ಸ.ಹಿ.ಪ್ರಾ.ಶಾಲೆಗೆ ಕರ್ನಾಟಕ ಸರ್ಕಾರದ ಮಾನ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಅಂಗಾರ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಶಾಲಾ ವತಿಯಿಂದ ಸಚಿವರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಸ್.ಡಿ.ಎಂ.ಸಿ ಅಧ್ಯಕ್ಷ ಹರೀಶ್.ಡಿ ಹಾಗೂ ಎಸ್.ಡಿ.ಎಂ.ಸಿ ಸದಸ್ಯರು, ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪಲ್ಲವಿ ಹಾಗೂ ಶಿಕ್ಷಕ ವೃಂದದವರು,...

ಮಾವಿನಕಟ್ಟೆ ಶ್ರಮದಾನ – ಶಾಲಾ ಆವರಣ ಸ್ವಚ್ಚತೆ

ಮಾವಿನಕಟ್ಟೆ ಹಿರಿಯ ಪ್ರಾಥಮಿಕ ಶಾಲಾ ಅವರಣವನ್ನು ಆ.29 ರಂದು ಶ್ರಮದಾನದ ಮೂಲಕ ಸುಚಿಗೊಳಿಸಲಾಯಿತು. ಶಾಲಾ ಮೇಲುಸ್ತುವಾರಿ ಸಮಿತಿ ಮತ್ತು ಊರವರ ಸಹಕಾರದಲ್ಲಿ ನಡೆದ ಶ್ರಮದಾನದ ಉಸ್ತುವಾರಿಯನ್ನು ಗ್ರಾಮ ಪಂಚಾಯಿತಿ ಸದಸ್ಯರಾದ ಶೈಲೇಶ್ ಅಂಬೆಕಲ್ಲು, ದುರ್ಗಾದಾಸ್ ಮೆತ್ತಡ್ಕ, ಮೇಲುಸ್ತುವಾರಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸಂಧ್ಯಾ ಮುಖ್ಯ ಶಿಕ್ಷಕರಾದ ಶ್ರೀಮತಿ ಪೂರ್ಣಿಮಾ ಮತ್ತು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ...
Loading posts...

All posts loaded

No more posts

error: Content is protected !!