Ad Widget

ಬೆಳ್ಳಾರೆ : ಖಾಸಗಿ ರಸ್ತೆಯಲ್ಲಿ ಅಳವಡಿಸಿದ್ದ ಬೀದಿ ದೀಪ ತೆರವು ಮಾಡಿದ ಪಿಡಿಒ – ಜಾಲತಾಣದಲ್ಲಿ ಸುಳ್ಳು ಆರೋಪಕ್ಕೆ ಅಧ್ಯಕ್ಷರಿಂದ ಸ್ಪಷ್ಟನೆ

ಬೆಳ್ಳಾರೆ ಕೊಳಂಬಳ ಅರ್ನಾಡಿ ಎಂಬಲ್ಲಿ ಖಾಸಗಿ ರಸ್ತೆಗೆ ಪಂಚಾಯತ್ ಬೀದಿದೀಪ ಅಳವಡಿಸಿದ್ದನ್ನು ಪಿಡಿಒ ನೇತೃತ್ವದಲ್ಲಿ ತೆರವು ಮಾಡಲಾಗಿತ್ತು. ಈ ಕುರಿತು ಸರಿಯಾದ ಕ್ರಮ ಕೈಗೊಂಡಿದ್ದರೂ ಪಿಡಿಒ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿತ್ರು. ಬಿಜೆಪಿ ಕಾರ್ಯಕರ್ತನ ಮನೆಯ ಹತ್ತಿರದ ಸಾರ್ವಜನಿಕ ರಸ್ತೆಗೆ ಹೋಗುವ ಬೀದಿ ದೀಪ ತೆರವುಗೊಳಿಸಿದ್ದಾರೆ. ಅನಿಲ್ ರೈ ಕುಮ್ಮಕ್ಕಿನಿಂದ ಗ್ರಾಂ ಪಂ. ಬೆಳ್ಳಾರೆ...

ಚೆಂಬು : ಭಗವಾನ್ ಸಂಘ ಊರುಬೈಲು ವತಿಯಿಂದ ಸೇತುವೆಗಳ ಸ್ವಚ್ಚತೆ

ಆಗಸ್ಟ್ ಒಂದರಿಂದ ಹದಿನೈದರವರೆಗಿನ "ಸ್ವಚ್ಚ ಭಾರತ್ ಪಾಕ್ಷಿಕ ಅಭಿಯಾನ" ಯೋಜನೆ ಅಂಗವಾಗಿ ನೆಹರು ಯುವ ಕೇಂದ್ರ, ಮಡಿಕೇರಿ ಇವರ ಆಶ್ರಯದಲ್ಲಿ ಶ್ರೀ ಭಗವಾನ್ ಸಂಘ ,ಊರುಬೈಲು, ಇದರ ಸದಸ್ಯರು ಆಗಸ್ಟ್ 1ರಂದು ಚೆಂಬು ಗ್ರಾಮದ ಎಲ್ಲಾ ಪ್ರಮುಖ ಸೇತುವೆಗಳನ್ನು ಸ್ವಚ್ಚಗೊಳಿಸಿ ,ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.ಪ್ರಾರಂಭದಲ್ಲಿ ಸಂಘದ ಕಾರ್ಯದರ್ಶಿ ಯತೀಶ್ ಹನಿಯಡ್ಕ ಸಂಘದ ಸದಸ್ಯರಿಗೆ...
Ad Widget

ಗೂನಡ್ಕ : ಯುವಕನಿಗೆ ಗುದ್ದಿ ಪರಾರಿಯಾಗಲೆತ್ನಿಸಿದ ಬೊಲೆರೋ ಬೆನ್ನಟ್ಟಿ ಹಿಡಿದ ಸ್ಥಳೀಯರು

ಬೈಕ್ ಚಲಾಯಿಸಿಕೊಂಡು ಹೋಗುತ್ತಿದ್ದ ಗೂನಡ್ಕದ ಸಲೀಂ ಎಂಬ ಯುವಕನಿಗೆ ದಾವಣಗೆರೆಯ ಬೊಲೆರೋ ವಾಹನ ಡಿಕ್ಕಿ ಹೊಡೆದು ಯುವಕ ಗಂಭೀರ ಗಾಯಗೊಂಡ ಘಟನೆ ಸೋಮವಾರ ಗೂನಡ್ಕದಲ್ಲಿ ನಡೆದಿದೆ.ಬೈಕ್ ಗೆ ಡಿಕ್ಕಿ ಹೊಡೆದು ಬೊಲೆರೋ ಚಾಲಕ ವಾಹವನ್ನು ಮುಂದಕ್ಕೆ ಚಲಾಯಿಸಿಕೊಂಡು ಸಾಗಿದ ಬಳಿಕ ಸ್ಥಳೀಯರು ಬೊಲೆರೋವನ್ನು ಚಟ್ಟೆಕಲ್ಲು ಎಂಬಲ್ಲಿ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಯುವಕನಿಗೆ ಸುಳ್ಯದಲ್ಲಿ ಚಿಕಿತ್ಸೆ...

ಬಳ್ಪ-ನಾದೂರು-ಕಾಂಜಿ ದೇವಸ್ಥಾನ ರಸ್ತೆ ದುರಸ್ತಿಗೆ ಗ್ರಾಮಸ್ಥರ ಒತ್ತಾಯ

ಬಳ್ಪ ಆದರ್ಶ ಗ್ರಾಮದ ಒಳ ಹೊಕ್ಕರೇ ಸಮಸ್ಯೆಗಳ ಪಟ್ಟಿಯೇ ಬೆಳೆಯುತ್ತಿದೆ ಹೊರತು ಅಭಿವೃದ್ಧಿಯಲ್ಲಿ ಆದರ್ಶ ಕಾಣುತಿಲ್ಲ. ಬಳ್ಪದಿಂದ ನಾದೂರು,ಕಾಂಜಿ ದೇವಸ್ಥಾನ ಸಂಪರ್ಕಿಸಿಸುವ ರಸ್ತೆ ಮಳೆಗಾಲ ಬಂದಾಗ ಮಣ್ಣೆಲ್ಲಾ ಕೊಚ್ಚಿಹೋಗಿ ತೋಡಿನಂತಾಗಿ ಬಿಡುತ್ತದೆ. ವಾಹನಗಳು ಸರ್ಕಸ್ ಮಾಡುತ್ತಾ, ಹೊರಳಾಡುತ್ತ ಹೋಗುವ ಪರಿಸ್ಥಿತಿ ಬಂದಿದೆ.ಈ ರಸ್ತೆ ಪಂಚಾಯತ್ ಗೆ ಒಳಪಟ್ಟು ಸುಮಾರು 30 ವರ್ಷ ಕಳೆದರೂ ಅಭಿವೃದ್ಧಿ ಮಾತ್ರ...

ಬಿಜೆಪಿ ರೈತ ಮೋರ್ಚಾ ಪ್ರಯತ್ನದ ಫಲವಾಗಿ ಎಲ್ಲಾ ರೈತರಿಗೆ ಮತ್ತೆ ಶೂನ್ಯ ಬಡ್ಡಿ ದರ ಸಾಲ ಸಿಗುವಂತಾಗಿದೆ – ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಬೊಳ್ಳೂರು

ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ರೈತರಿಗೆ ನೀಡಲಾಗುವ ರೈತರಿಗೆ ಶೂನ್ಯ ಬಡ್ಡಿದರ ಸಾಲದ ಮೇಲೆ ಸರಕಾರ ಜಾರಿಗೆ ತಂದ ಷರತ್ತನ್ನು ಸರಕಾರ ಸಡಿಲಿಕೆ ಮಾಡಿದೆ ಇದರಿಂದ ರೈತರಿಗೆ ಅನುಕೂಲವಾಗಿದೆ. ಷರತ್ತನ್ನು ಸಡಿಸಲು ದ.ಕ.ಜಿಲ್ಲಾ ಬಿಜೆಪಿ ರೈತ ಮೋರ್ಚಾ ಸಮಿತಿ,ರಾಜ್ಯ ರೈತ ಮೋರ್ಚಾ ಸಮಿತಿ, ಕರಾವಳಿ ಭಾಗದ ಸಚಿವರು ಹಾಗೂ ಶಾಸಕರು ನಡೆಸಿದ ಪ್ರಯತ್ನ‌ ಫಲ ನೀಡಿದೆ...

ಸುಳ್ಯ : ಲಯನ್ಸ್ ಕ್ಲಬ್ ವತಿಯಿಂದ ‘ಹಸಿರೇ ಉಸಿರು’ ಕಾರ್ಯಕ್ರಮಕ್ಕೆ ಚಾಲನೆ – 10 ಸಾವಿರ ಗಿಡ ನಾಟಿ

ಸುಳ್ಯ ಲಯನ್ಸ್ ಕ್ಲಬ್ ಹಾಗೂ ಆಲೆಟ್ಟಿ ಗ್ರಾಮ ಪಂಚಾಯತ್ ಇದರ ಆಶ್ರಯದಲ್ಲಿ ಹಸಿರೇ ಉಸಿರು ಕಾರ್ಯಕ್ರಮದಡಿಯಲ್ಲಿ ಆಲೆಟ್ಟಿ ಗ್ರಾಮದಾದ್ಯಂತ ಸುಮಾರು 10 ಸಾವಿರ ಗಿಡ ನೆಡುವ ವನಮಹೋತ್ಸವ ಕಾರ್ಯಕ್ರಮಕ್ಕೆ ಜುಲೈ 31ರಂದು ಚಾಲನೆ ನೀಡಲಾಯಿತು. ಸುಳ್ಯ ಯುವಜನ ಸಂಯುಕ್ತ ಮಂಡಳಿಯ ವೇದಿಕೆಯಲ್ಲಿ ನಡೆದ ಸಮಾರಂಭವನ್ನು ಡಾ. ಯು.ಪಿ.ಶಿವಾನಂದ ದೀಪ ಬೆಳಗಿಸಿ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಲಯನ್ಸ್...

ಸೀನಿಯರ್ ಬ್ಯುಸಿನೆಸ್‌ ಕೋರ್ಸ್ ನಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್ ಕ್ಯಾಂಪಸ್ ಫೆಲೋಶಿಪ್ ಪಡೆದ ಪ್ರಜ್ವಲ್ ಹೊದ್ದೆಟ್ಟಿ

ಬ್ಯಾಚುಲರ್ ಆಫ್ ಬ್ಯುಸಿನೆಸ್‌ ಮೇಜರಿಂಗ್ ಅಂತರಾಷ್ಟ್ರೀಯ ಬ್ಯುಸಿನೆಸ್ ಎರಡು ವರ್ಷಗಳ ವಿದ್ಯಾಭ್ಯಾಸ ವನ್ನು ಆಸ್ಟ್ರೇಲಿಯಾ ಸಿಂಗಾಪುರ್ ಯುನಿವರ್ಸಿಟಿ ನಲ್ಲಿ ಪೂರೈಸಿ ಇನ್ನುಳಿದ ಎರಡು ವರ್ಷಗಳ ವಿದ್ಯಾಭ್ಯಾಸ ವನ್ನು ಆಸ್ಟ್ರೇಲಿಯಾದ ಜೇಮ್ಸ್ ಕುಕ್ ಯೂನಿವರ್ಸಿಟಿ ಯಲ್ಲಿ ಪೂರೈಸಿ ಆಸ್ಟ್ರೇಲಿಯಾದ ಬ್ರಿಸ್ಬೇನ್ ಕ್ಯಾಂಪಸ್ ಫೆಲೋಶಿಪ್ ಅನ್ನು ಪ್ರಜ್ವಲ್ ಹೊದ್ದೆಟ್ಟಿ ಪಡೆದಿರುತ್ತಾರೆ. ಇವರು ಮಂಗಳೂರಿನಲ್ಲಿ ನೆಲೆಸಿರುವ ಗೋವರ್ಧನ ಹೊದ್ದೆಟ್ಟಿ ಹಾಗೂ...

ಕನಕಮಜಲು : ಸ್ವರ್ಣ ಮಹಿಳಾ ಮಂಡಲ ಮಹಾಸಭೆ – ನೂತನ ಅಧ್ಯಕ್ಷೆಯಾಗಿ ಸುಶೀಲಾ ಕಾರಿಂಜ

ಸ್ವರ್ಣ ಮಹಿಳಾ ಮಂಡಲ (ರಿ) . ಕನಕಮಜಲು ಇದರ ಮಹಾಸಭೆ ಹಾಗೂ ಪದಗ್ರಹಣ ಕಾರ್ಯಕ್ರಮವು ಜು.31ರಂದು ಶ್ರೀ ಆತ್ಮ ರಾಮ ಭಜನಾ ಮಂದಿರದಲ್ಲಿ ನಡೆಯಿತು. ಶ್ರೀಮತಿ ಕೃತಿಕಾ ಗುರುಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ತಾಲೂಕು ಮಹಿಳಾ ಒಕ್ಕೂಟದ ಗೌರವಾಧ್ಯಕ್ಷರಾದ ಶ್ರೀಮತಿ ಗುಣವತಿ ಕೊಲ್ಲಂತಡ್ಕ, ಶ್ರೀಮತಿ ಶಾರದಾ ಉಗ್ಗಮೂಲೆ ಕನಕಮಜಲು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಮಹಿಳಾ...
error: Content is protected !!