Ad Widget

ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು : ಸರಳ ರೀತಿಯಲ್ಲಿ 75ನೇ ಸ್ವಾತಂತ್ರೋತ್ಸವ ಆಚರಣೆ

ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇಲ್ಲಿ 75 ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷರಾದ ಶ್ರೀ ಲೋಕೇಶ್ವರ.ಡಿ.ಆರ್ ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ನೆಲ್ಸನ್, ಶಿಕ್ಷಕರಾದ ಪ್ರಸನ್ನ ಕುಮಾರ್.ವೈ.ಬಿ, ದ್ವಿತೀಯ ದರ್ಜೆ ಸಹಾಯಕರಾದ ಸೋಮಶೇಖರ್.ಯಂ, ಕಾಲೇಜು ವಿಭಾಗದ ರಾಜ್ಯಶಾಸ್ತ್ರ ಉಪನ್ಯಾಸಕರಾದ ರಂಜಿತ್.ಎ.ವೈ ಎಸ್.ಡಿ.ಯಂ.ಸಿ. ಸದಸ್ಯರಾದ...

ತಡಗಜೆ ಅಂಗನವಾಡಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಬೆಳ್ಳಾರೆ ಗ್ರಾಮದ ತಡಗಜೆ ವಾರ್ಡಿನ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವವು ತಡಗಜೆ ಅಂಗನವಾಡಿಯಲ್ಲಿ ವಾರ್ಡಿನ ಎಲ್ಲಾ ಪ್ರಮುಖರ ಸಮ್ಮುಖದಲ್ಲಿ ಮೊಟ್ಟ ಮೊದಲನೇ ಬಾರಿಗೆ ಧ್ವಜಾರೋಹಣ ಮಾಡುವ ಮೂಲಕ ಆಚರಿಸಲಾಯಿತು. ಧ್ವಜಾರೋಹಣವನ್ನು ವಾರ್ಡ್ ಸದಸ್ಯೆ ಜಯಶ್ರೀ ನೆರವೇರಿಸಿದರು. ಬಳಿಕ ತಡಗಜೆಯಿಂದ ಬೆಳ್ಳಾರೆ ತನಕ ಸ್ವಾತಂತ್ರ್ಯೋತ್ಸವ ನಡಿಗೆ ನಡೆಯಿತು.
Ad Widget

ಅಚ್ರಪ್ಪಾಡಿ ಶಾಲೆ: 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹರ್ಷಾಚರಣೆ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಅಚ್ರಪ್ಪಾಡಿ ಇಲ್ಲಿ 75ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವ ಆಚರಿಸಲಾಯಿತು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಜನಾರ್ಧನ.ಎ ಇವರು ಧ್ವಜಾರೋಹಣಗೈದು ಶುಭಹಾರೈಸಿದರು. ಶಾಲಾ ಹಿತರಕ್ಷಣಾ ಸಮಿತಿ ಅಧ್ಯಕ್ಷ ಬಾಬುಗೌಡ ಅಚ್ರಪ್ಪಾಡಿ ಇವರು ಸ್ವಾತಂತ್ರ್ಯಪೂರ್ವ ಮತ್ತು ಸ್ವತಂತ್ರದ ನಂತರದಲ್ಲಿ ಆದ ಬದಲಾವಣೆಗಳನ್ನು ತಿಳಿಸುತ್ತಾ ನಾವು ಕಾಲಕ್ಕೆ ತಕ್ಕ ಬದಲಾವಣೆಯೊಂದಿಗೆ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕಾಗಿದೆ ಎಂದು...

ಕೊಲ್ಲಮೊಗ್ರು: ಬಂಗ್ಲೆಗುಡ್ಡೆ ಶಾಲೆಯಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕೊಲ್ಲಮೊಗ್ರು: ಸ.ಹಿ.ಪ್ರಾ.ಶಾಲೆ ಬಂಗ್ಲೆಗುಡ್ಡೆಯಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು . ಕೊಲ್ಲಮೊಗ್ರು ಗ್ರಾಮ ಪಂಚಾಯತುನ ಉಪಾಧ್ಯಕ್ಷರಾದ ಶ್ರೀಮತಿ ಜಯಶ್ರೀ ಚಾಂತಾಳ ಇವರು ಧ್ವಜಾರೋಹಣ ಮಾಡಿದರು.ಬಳಿಕ ಶಾಲಾ ವಿದ್ಯಾರ್ಥಿಗಳು ಬ್ಯಾಂಡ್ ಹಾಗೂ ವಾದ್ಯಗಳನ್ನು ನುಡಿಸಿದರು. ಈ ಸಂದರ್ಭದಲ್ಲಿ ಶಾಲಾ ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಬಾಲಸುಬ್ರಹ್ಮಣ್ಯ ಎನ್. ಜಿ ವಕೀಲರು ಸುಳ್ಯ, ಪಿಡಿಒ ರವಿಚಂದ್ರ ಎ,...

ಕೊಲ್ಲಮೊಗ್ರು : 75 ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕೊಲ್ಲಮೊಗ್ರು ಗ್ರಾ.ಪಂ ನಲ್ಲಿ 75 ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು . ಗ್ರಾ.ಪಂ ಅಧ್ಯಕ್ಷರಾದ ಉದಯ ಕೊಪ್ಪಡ್ಕ ಧ್ವಜಾರೋಹಣ ಮಾಡಿದರು.ಬಳಿಕ ನಿವೃತ್ತ ಯೋಧರಾದ ಪದ್ಮನಾಭ ಗೌಡ ಗೋಳ್ಯಾಡಿ, ಸತೀಶ್ ಜಾಲುಮನೆ, ಅವರುಗಳನ್ನು ಗೌರವಿಸಲಾಯಿತು. ಕೆ.ವಿ.ಜಿ ಅನುದಾನಿತ ಪ್ರೌಢಶಾಲೆಯ ವಿದ್ಯಾರ್ಥಿಗಳು ಬ್ಯಾಂಡ್ ವಾದ್ಯಗಳನ್ನು ನುಡಿಸಿದರು. ಪಿಡಿಒ ರವಿಚಂದ್ರ ಎ, ಕಾರ್ಯದರ್ಶಿ ಮೋಹನ್ ಕಡ್ತಲ್ ಕಜೆ , ಗ್ರಾ.ಪಂ ಉಪಾಧ್ಯಕ್ಷರಾದ...

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ವಾತಂತ್ರ್ಯೋತ್ಸವ, ಧ್ವಜಾರೋಹಣ

ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಗಿರೀಶ್ ಧ್ವಜಾರೋಹಣ ನೆರವೇರಿಸಿದರು. ಬೆಳ್ಳಾರೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಶೇಖರ ಪನ್ನೆ, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಬೇಬಿ ಸಿಸಿ, ಬೆಳ್ಳಾರೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು. ತಾಲೂಕು ಕ್ಷಯ ಚಿಕಿತ್ಸಾ ಘಟಕದ ಹಿರಿಯ...

ಕೋಟೆಮುಂಡುಗಾರು ಶಾಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕೋಟೆಮುಂಡುಗಾರು ಸ.ಹಿ.ಪ್ರಾ.ಶಾಲೆಯಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಗಂಗಾಧರ ತೋಟದಮೂಲೆ ಧ್ವಜಾರೋಹಣ ನೆರವೇರಿಸಿದರು. ಬಳಿಕ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಆವರಣದ ತನಕ ಸ್ವಾತಂತ್ರ್ಯೋತ್ಸವ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ ಮತ್ತು ಸದಸ್ಯರು, ಕೋಟೆಮುಂಡುಗಾರು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಮೋಹಿನಿ ಮತ್ತು ಸಹ...

ಬಿಳಿನೆಲೆ: 75ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕಡಬ ತಾಲೂಕಿನ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ ಹಾಗೂ ವೇದವ್ಯಾಸ ವಿದ್ಯಾಲಯ ಬಿಳಿನೆಲೆ ಇದರ ಜಂಟಿ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಸಂಸ್ಥೆಯ ಪ್ರಾಕ್ತನ ವಿದ್ಯಾರ್ಥಿ ಹಾಗೂ ಸೇನೆಯಲ್ಲಿ ಸುಮಾರು 30 ವರ್ಷಗಳ ಕಾಲ ಸುಬೇದಾರರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಗೋಪಾಲ ವಿ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶ್ರೀ...

ಕಳಂಜ ಗ್ರಾಮ ಪಂಚಾಯತ್ ನಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಣೆ

ಕಳಂಜ ಗ್ರಾಮ ಪಂಚಾಯತ್ ನಲ್ಲಿ 75ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಕುಮಾರ್ ಕಿಲಂಗೋಡಿ ಧ್ವಜಾರೋಹಣ ನೆರವೇರಿಸಿ ಶುಭ ಹಾರೈಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ್.ಕೆ.ಆರ್, ಗ್ರಾ.ಪಂ.ಉಪಾಧ್ಯಕ್ಷ ಗಣೇಶ್ ರೈ ಕಳಂಜ, ಸದಸ್ಯರಾದ ಬಾಲಕೃಷ್ಣ ಬೇರಿಕೆ, ಶ್ರೀಮತಿ ಕಮಲ, ಶ್ರೀಮತಿ ಪ್ರೇಮಲತಾ, ಶ್ರೀಮತಿ ಸುಧಾ, ಮಾಜಿ ಅಧ್ಯಕ್ಷೆ ಶ್ರೀಮತಿ ಯಶೋಧಾ ಮಣಿಮಜಲು, ಮಾಜಿ ಉಪಾಧ್ಯಕ್ಷ...

ಕಳಂಜ ಬುಖಾರಿಯ ಜುಮಾ ಮಸೀದಿಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ

ಬುಖಾರಿಯ ಜುಮಾ ಮಸೀದಿ ಕಳಂಜ ಇದರ ವತಿಯಂದ 75ನೇ ಸ್ವಾತಂತ್ರ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಮಸೀದಿಯ ಅಧ್ಯಕ್ಷರಾದ ಅಬ್ದುಲ್ ಜಮಾಲ್.ಎ.ಕೆ ಯವರು ದ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಮಸೀದಿ ಧರ್ಮಗುರುಗಳು ದುವಾ ನೆರವೇರಿಸಿದರು. ಮದರಸ ಶಾಲಾ ಮಕ್ಕಳು ರಾಷ್ಟ್ರಗೀತೆಯನ್ನು ಹಾಡಿದರು. ಈ ಕಾರ್ಯಕ್ರಮದಲ್ಲಿ ಅಬ್ದುಲ್ ಲತೀಫ್, ಇಬ್ರಾಹಿಂ ಹಾಜಿ, ಇಸ್ಮಾಯಿಲ್.ಪಿ.ಎಸ್, ಮಹಮ್ಮದ್.ಕೆ.ಎಂ, ಮೊಯ್ದೀನ್.ಎ.ಬಿ, ಅಬ್ದುಲ್ ಅಝೀಝ್.ಟಿ, ಅಬ್ದುಲ್ ಅಝೀಝ್.ಕೆ,...
Loading posts...

All posts loaded

No more posts

error: Content is protected !!