- Saturday
- April 5th, 2025

ಬಳ್ಪದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಿಯೋ ಟವರ್ ಅನ್ನು ಸಚಿವ ಅಂಗಾರ ಇಂದು ಲೋಕಾರ್ಪಣೆ ಮಾಡಿದರು. ಈ ಭಾಗದ ಜನರ ಬೇಡಿಕೆ ಈಡೇರಿಕೆ ಬಹು ದಿನಗಳ ಬೇಡಿಕೆ ಈಡೇರಿದಂತಾಗಿದೆ. ಈ ಸಂದರ್ಭದಲ್ಲಿ ರಾಕೇಶ್ ರೈ ಕೆಡೆಂಜಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಕುಸುಮಾ ರೈ , ರಮಾನಂದ ಎಣ್ಣೆಮಜಲು, ವಿನೋದ್ ಬೊಳ್ಮಲೆ ಮತ್ತಿತರರು ಉಪಸ್ಥಿತರಿದ್ದರು.

ಶ್ರೀಕೃಷ್ಣ ಸೇವಾ ಸಮಿತಿ ಬಾಳಿಲ ಮುಪ್ಪೇರ್ಯ ಇದರ ವತಿಯಿಂದ ನಡೆದ ಒಂಭತ್ತನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮ ಕಾಂಚೋಡು ಶ್ರೀ ಮಂಜುನಾಥೇಶ್ವರ ದೇವಾಲಯದಲ್ಲಿ ಸರಳವಾಗಿ ನಡೆಯಿತು. ಗೋವಿಂದಯ್ಯ ಕೆ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ದೇವಳದಲ್ಲಿ ವಿಶೇಷ ಪೂಜೆ, ಒಂದರಿಂದ ಆರು ವರ್ಷದ ಒಳಗಿನ ಮಕ್ಕಳಿಗೆ ಕೃಷ್ಣನ ವೇಷ ಸ್ಪರ್ಧೆ ಹಾಗು ಬಹುಮಾನ ವಿತರಣಾ ಕಾರ್ಯಕ್ರಮ...

ದೇವ ಗೆಳೆಯರ ಬಳಗದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ ಸರಳವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಎ.ಪಿ.ಎಂ.ಸಿ ಅಧ್ಯಕ್ಷ ವಿನಯ್ ಕುಮಾರ್ ಮುಳುಗಾಡು, ತೀರ್ಥೇಶ್ ಪಾರೆಪ್ಪಾಡಿ, ದೇವ ಕಿ.ಪ್ರಾ.ಶಾಲೆಯ ಮುಖ್ಯಶಿಕ್ಷಕ ಜಯಪ್ರಕಾಶ್ ಮುತ್ಲಾಜೆ, ದುರ್ಗೇಶ್ ಪಾರೆಪ್ಪಾಡಿ, ಭವಿತೇಶ್ ಹಿರಿಯಡ್ಕ,ಕೀರ್ತನ್ ಹಿರಿಯಡ್ಕ ಮತ್ತಿತರರು ಭಾಗವಹಿಸಿದ್ದರು.

ಮಡಪ್ಪಾಡಿ ಗ್ರಾಮ ಪಂಚಾಯತ್ ವತಿಯಿಂದ ರೈತ ಬಂಧು ಅಭಿಯಾನ ಹಾಗೂ ಪೌಷ್ಟಿಕ ತೋಟ ವಿಶೇಷ ಅಭಿಯಾನ ಮಹಿಳಾ ಕಾಯಕೋತ್ಸವ ಆ.30 ರಂದು ಗ್ರಾಮ ಪಂಚಾಯಿತಿನಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮಿತ್ರದೇವ ಮಡಪ್ಪಾಡಿ ಇವರು ವಹಿಸಿದ್ದರು . ಸುಳ್ಯ ತಾಲೂಕು ಪಂಚಾಯಿತಿನ ಐಇಸಿ ಸಂಯೋಜಕರಾದ ನಮಿತಾ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ತೋಟಗಾರಿಕೆ ತಾಂತ್ರಿಕ ಅಭಿಯಂತರರಾದ ಕುಮಾರಿ...