ಮಂಡೆಕೋಲು ಗ್ರಾಮದ ಮಡಿವಾಳಮೂಲೆ ಶ್ರೀ ಮಹಾದೇವಿ ಭಜನಾ ಮಂದಿರದ ಜೀರ್ಣೋದ್ದಾರ ಕಾರ್ಯ ನಡೆಯುತ್ತಿದ್ದು ಇದರ ಅಂಗವಾಗಿ ಮಂದಿರಕ್ಕೆ ಸಂಬಂಧಿಸಿದ ಶಿವಾಜಿನಗರ ಹಾಗೂ ಮಡಿವಾಳಮೂಲೆ ಕಾಲೋನಿಗಳ ಪ್ರತೀ ಮನೆಗಳಲ್ಲಿ ತುಳಸಿ ಕಟ್ಟೆ ನಿರ್ಮಾಣ ಮಾಡುವ ಸಂಕಲ್ಪ ಕೈಗೊಳ್ಳಲಾಗಿದ್ದು, ಅದರ ಅಂಗವಾಗಿ ಆ.29 ರಂದು ಭಜನಾ ಮಂದಿರದ ಸಭಾಂಗಣದಲ್ಲಿ ತುಳಸಿ ಗಿಡ ವಿತರಿಸುವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದ ಬಗ್ಗೆ ಧಾರ್ಮಿಕ ಮುಖಂಡರಾದ ರಾಜೇಶ್ ಮೇನಾಲ ಉಪನ್ಯಾಸ ನೀಡಿದರು. ವೇಧಿಕೆಯಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿನುತಾ ಪಾತಿಕಲ್ಲು, ಮಂಡೆಕೋಲು ಮಹಾವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವಮೂರ್ತಿ ಹೆಬ್ಬಾರ್, ಅಖಿಲ ಕರ್ನಾಟಕ ಜನಜಾಗೃತಿ ವೇಧಿಕೆಯ ನಿಕಟಪೂರ್ವ ತಾಲೂಕು ಅಧ್ಯಕ್ಷ ಮಹೇಶ್ ಕುಮಾರ್ ಮೇನಾಲ, ಜನಜಾಗೃತಿ ವೇಧಿಕೆಯ ಸುಳ್ಯ ವಲಯಾಧ್ಯಕ್ಷ ಸುರೇಶ್ ಕಣೆಮರಡ್ಕ, ಸಮಾಜ ಸೇವಕ ದಾಮೋಧರ ಪಾತಿಕಲ್ಲು, ಪಂಚಾಯತ್ ಉಪಾಧ್ಯಕ್ಷ ಅನಿಲ್ ತೋಟಪ್ಪಾಡಿ, ಪಂಚಾಯತ್ ಸದಸ್ಯರುಗಳಾದ ಬಾಲಚಂದ್ರ ದೇವರಗುಂಡ, ಉಷಾ ಗಂಗಾಧರ್ ಮಾವಂಜಿ, ಪ್ರತಿಮಾ ಮಾವಿನಡಿ, ಪ್ರಶಾಂತಿ ಜನಾರ್ಧನ, ಗೀತಾ ಶಿವಾಜಿನಗರ, ಮಂದಿರದ ಗೌರವಾಧ್ಯಕ್ಷ ಸುಂದರ ಮಡಿವಾಳಮೂಲೆ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ರಮೇಶ ಶಿವಾಜಿನಗರ, ಮುಖ್ಯ ಅರ್ಚಕ ಕುಶಲ ಉಪಸ್ಥಿತರಿದ್ದರು.
ವಸಂತ ಮಡಿವಾಳಮೂಲೆ ಸ್ವಾಗತಿಸಿ, ಸತೀಶ್ ವಂದಿಸಿದರು. ಸುನಿಲ್ ಶಿವಾಜಿನಗರ ಪ್ರಸ್ತಾಪಿಸಿ ಶಿವಪ್ರಸಾದ್ ಉಗ್ರಾಣಿಮನೆ ನಿರೂಪಿಸಿದರು.
- Saturday
- November 23rd, 2024