Ad Widget

ಪೂರ್ಣಚಂದ್ರ ದೇರಪ್ಪಜ್ಜನಮನೆ ನಿಧನ

ನಾಲ್ಕೂರು ಗ್ರಾಮದ ದೇರಪ್ಪಜ್ಜನ ಮನೆ ಡಿ.ಎಚ್. ಪೂರ್ಣಚಂದ್ರ ರವರು ಮೆದುಳಿನ ರಕ್ತಸ್ರಾವದಿಂದ ಆ.27 ರಂದು ಪೂನಾದಲ್ಲಿ ನಿಧನರಾದರು. ಪೂನಾದ ಖಾಸಗಿ ಕಂಪೆನಿಯಲ್ಲಿ ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಿದ್ದರು. ಮೃತರು ಪತ್ನಿ ಲತಾ, ಪುತ್ರ ಶಮಂತ್, ಪುತ್ರಿ ವಿಂಧ್ಯಾ, ಸಹೋದರ, ಸಹೋದರಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಕಮಿಲ : ಪಂಚಶ್ರೀ ಪ್ರಗತಿಬಂಧು ಸಂಘ ರಚನೆ

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಗುತ್ತಿಗಾರು ವಲಯದ ಕಮಿಲ ಒಕ್ಕೂಟದ ಆಜಡ್ಕ ಎಂಬಲ್ಲಿ ನೂತನವಾಗಿ ಪಂಚಶ್ರೀ ಪ್ರಗತಿಬಂಧು ಸಂಘ ವನ್ನು ಒಕ್ಕೂಟದ ಅಧ್ಯಕ್ಷರಾದ ಕೇಶವ ಗೌಡ ಕಾಂತಿಲ ಉದ್ಘಾಟಿಸಿದರು. ಸಂಘದ ದಾಖಲಾತಿಯನ್ನು ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಶಾರದಾ ಹಾಗೂ ಶ್ರೀಮತಿ ಲತಾ ಕುಮಾರಿ ಹಸ್ತಾಂತರಿಸಿದರು. ಈ ಸಂದರ್ಭ...
Ad Widget

ಸುಳ್ಯ : ಗ್ರಂಥಾಲಯ ಮೇಲ್ವಿಚಾರಕರ ಸಭೆ

ಸುಳ್ಯ ತಾಲೂಕು ಗ್ರಂಥಾಲಯ ಮೇಲ್ವಿಚಾರಕರ ಸಭೆಯ ಆ 27ರಂದು ತಾಲೂಕು ಪಂಚಾಯತ್ ಮಿನಿ ವಿಧಾನಸೌಧದಲ್ಲಿ ನಡೆಯಿತು. ಮುಖ್ಯ ಗ್ರಂಥಾಲಯಾಧಿಕಾರಿ ಗಾಯತ್ರಿ ಮತ್ತು ತಾಲೂಕು ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ರವರು ಗ್ರಂಥಾಲಯದ ಡಿಜಿಟಲೀಕರಣ ಮತ್ತು ಬೇಕನ್ ಗ್ರಂಥಾಲಯದ ಬಗ್ಗೆ ಮಾಹಿತಿ ನೀಡಿದರು. ಹಾಗೂ ಸುಳ್ಯ ತಾಲೂಕಿನ 10 ಗ್ರಂಥಾಲಯವನ್ನು ತಕ್ಷಣ ಡಿಜಿಟಲೀಕರಣ ಗೊಳಿಸುವಂತೆ ಕಾರ್ಯಪ್ರವರ್ತರಾಗಲು ತಿಳಿಸಿದರು. ತಾಲೂಕಿನ 25...

ವಿಶ್ವಾಸವಿಲ್ಲದ ವ್ಯವಸ್ಥೆಯ ಮೇಲೆ ಜನ ವಿಶ್ವಾಸ ಕಳೆದುಕೊಳ್ಳುತ್ತಾರೆ. ಪ್ರತಿಯೊಬ್ಬರೂ ತಮ್ಮ ತಮ್ಮ ಕಾರ್ಯಕ್ಷೇತ್ರಕ್ಕೆ ನ್ಯಾಯ ಒದಗಿಸುವ ಕಾರ್ಯ ಮಾಡಬೇಕು- ಸಚಿವ ಎಸ್.ಅಂಗಾರ

ಮಾದಕ ದ್ರವ್ಯ ಜಾಲ ಹಾಗೂ ಸಮಾಜದಲ್ಲಿ ಶಾಂತಿ ಕದಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಇಂಥ ಕೃತ್ಯಗಳನ್ನು ನಾವು ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ . ಇದನ್ನು ತಡೆಗಟ್ಟಲು ಸಂಬಂಧಪಟ್ಟ ಇಲಾಖೆ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಸಚಿವ ಎಸ್ ಅಂಗಾರ ಅವರು ಹೇಳಿದರು. ಸುಳ್ಯದ ಯುವಜನ ಸಂಯುಕ್ತಮಂಡಳಿಯ ಸಭಾಂಗಣದಲ್ಲಿ ನಡೆದ ನೂತನ ಗೃಹರಕ್ಷಕ ದಳದ ಕಚೇರಿಯ...

ಸುಬ್ರಹ್ಮಣ್ಯದ ಜನಾನುರಾಗಿ ವೈದ್ಯ ಬಿ.ಕೆ.ಭಟ್ ನಿಧನ

ಸುಬ್ರಹ್ಮಣ್ಯದ ನಿಟ್ಟೆ ಆಸ್ಪತ್ರೆಯಲ್ಲಿ ಕಳೆದ 30 ವರ್ಷಗಳಿಂದ ಪ್ರಖ್ಯಾತ ವೈದ್ಯ ಬಿ.ಕೆ.ಭಟ್ ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ಸುಬ್ರಹ್ಮಣ್ಯದಲ್ಲಿ ಹಲವಾರು ವರ್ಷಗಳಿಂದ ನೆಲೆಸಿದ್ದ ಇವರು ಭಾಗದ ಜನರಿಗೆ ಉತ್ತಮ ಚಿಕಿತ್ಸೆ ನೀಡಿ ಜನಾನುರಾಗಿಯಾಗಿದ್ದರು. ಮೃತರು ಪತ್ನಿ , ಪುತ್ರ, ಸೊಸೆ ಹಾಗೂ ಮೊಮ್ಮಗಳನ್ನು ಅಗಲಿದ್ದಾರೆ.

ಗೌಡ ಸಂಸ್ಕೃತಿ, ಆಚಾರ-ವಿಚಾರಗಳು ಮುಂದಿನ ಪೀಳಿಗೆಗೆ ರವಾನೆಯಾಗಬೇಕು – ಕಜೆಗದ್ದೆ

ಗೌಡ ಜನಾಂಗದ ಸಂಸ್ಕೃತಿ, ಆಚಾರ -ವಿಚಾರಗಳು ಮುಂದಿನ ಪೀಳಿಗೆಗೆ ರವಾನೆಯಾಗಬೇಕಿದ್ದರೆ ಯುವ ಜನಾಂಗ ಅದರತ್ತ ಆಕರ್ಷಿತವಾಗುವಂತೆ ಆಗಬೇಕು. ಈ ನಿಟ್ಟಿನಲ್ಲಿ ಅಕಾಡೆಮಿಯ ವತಿಯಿಂದ ನಡೆಯುವ ಶಿಬಿರಗಳಲ್ಲಿ ಯುವಕ ಯುವತಿಯರು ಪಾಲ್ಗೊಂಡು ಸಂಸ್ಕೃತಿ ಆಚಾರ ವಿಚಾರಗಳನ್ನು ಕಲಿತುಕೊಳ್ಳಬೇಕು ಎಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಹೇಳಿದ್ದಾರೆ‌.  ಅವರು ಮಂಡೆಕೋಲು ಗ್ರಾ.ಪಂ...
error: Content is protected !!