
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಸುಳ್ಯ ತಾಲೂಕು ಗುತ್ತಿಗಾರು ವಲಯದ ಕಮಿಲ ಒಕ್ಕೂಟದ ಆಜಡ್ಕ ಎಂಬಲ್ಲಿ ನೂತನವಾಗಿ ಪಂಚಶ್ರೀ ಪ್ರಗತಿಬಂಧು ಸಂಘ ವನ್ನು ಒಕ್ಕೂಟದ ಅಧ್ಯಕ್ಷರಾದ ಕೇಶವ ಗೌಡ ಕಾಂತಿಲ ಉದ್ಘಾಟಿಸಿದರು. ಸಂಘದ ದಾಖಲಾತಿಯನ್ನು ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀಮತಿ ಶಾರದಾ ಹಾಗೂ ಶ್ರೀಮತಿ ಲತಾ ಕುಮಾರಿ ಹಸ್ತಾಂತರಿಸಿದರು. ಈ ಸಂದರ್ಭ ವಲಯ ಮೇಲ್ವಿಚಾರಕ ಮುರಳೀಧರ ಸೇವಾಪ್ರತಿನಿಧಿ ಲೋಕೇಶ್ ಡಿ.ಆರ್. ಉಪಸ್ಥಿತರಿದ್ದರು.