ದ.ಕ ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರ ವತಿಯಿಂದ ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ನ ಸಹಯೋಗದಲ್ಲಿ “ಆಜಾದಿ ಕಾ ಅಮೃತ್ ಮಹೋತ್ಸವ್” ದ ಪ್ರಯುಕ್ತ ನಾಯಿಗಳಿಗೆ “ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ ಹಾಗೂ ಮಾಹಿತಿ ಶಿಬಿರ” ಆ.27 ರಂದು ನಡೆಯಿತು.
ಈ ಕಾರ್ಯಕ್ರಮವನ್ನು ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ಉಪಾಧ್ಯಕ್ಷ ವಿಜಯ ಅಂಙಣ ಉದ್ಘಾಟಿಸಿದರು. ಗ್ರಾಮಪಂಚಾಯತ್ ಸದಸ್ಯರಾದ ದಿವಾಕರ ಮುಂಡಾಜೆ, ಪದ್ಮಾವತಿ ಕಲ್ಲೇಮಠ, ಬಿಂದು.ಪಿ, ಗ್ರಾಮಪಂಚಾಯತ್ ಪಿಡಿಓ ಪುರುಷೋತ್ತಮ ಮಣಿಯಾನ ಮನೆ ಮುಂತಾದವರು ಉಪಸ್ಥಿತರಿದ್ದರು. ಪಶುವೈದ್ಯ ಡಾ.ವೆಂಕಟಾಚಲಪತಿ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ವಠಾರದಲ್ಲಿ, ಹರಿಹರ ಶ್ರೀರಾಮಕುಟ್ಟಿ ಅವರ ಮನೆಯ ಬಳಿ, ರೇಗನ್ ಶೆಟ್ಟಿಯಡ್ಕ ಅವರ ಮನೆಯ ಬಳಿ, ಕಲ್ಲೇಮಠ ಸಾರ್ವಜನಿಕ ಗ್ರಂಥಾಲಯದ ಬಳಿ, ಬಾಳುಗೋಡು ಬಸವನಗುಡಿ ವಠಾರದಲ್ಲಿ ಹಾಗೂ ಬಾಳುಗೋಡು ಬೆಟ್ಟುಮುಕ್ಕಿ ಮೈದಾನದ ಬಳಿ ನಾಯಿಗಳಿಗೆ ಹುಚ್ಚು ನಾಯಿ ರೋಗ ನಿರೋಧಕ ಲಸಿಕೆ ನೀಡಲಾಯಿತು.
✍ವರದಿ :- ಉಲ್ಲಾಸ್ ಕಜ್ಜೋಡಿ