ಗುತ್ತಿಗಾರು ಸ. ಪ. ಪೂ. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿ ಈ ಬಾರಿಯ 10ನೇ ಪರೀಕ್ಷಾ ಫಲಿತಾಂಶದಲ್ಲಿ 623ಅಂಕ ತೆಗೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದ ನಿಶ್ಮಿತಾ ಕೆ. ಜಿ. ಹಾಗೂ 579 ಅಂಕ ಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದ ಅನುಷಾ ಎಂ. ವಿ. ಮೋಟ್ನೂರ್ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಅನಾರೋಗ್ಯ ದಿಂದ ಬಳಲುತ್ತಿರುವ ಆನಂದ ಮೆಟ್ಟಿನಡ್ಕ ಅವರಿಗೆ 25ಕೆ. ಜಿ ಅಕ್ಕಿ ಮತ್ತು ದಿನ ಉಪಯೋಗಿ ವಸ್ತುಗಳ ಕಿಟ್ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗ್ರಾ.ಪ. ಅಧ್ಯಕ್ಷೆ ರೇವತಿ ಅಚಳ್ಳಿ, ಸುಬ್ರಮಣ್ಯ ಠಾಣಾಧಿಕಾರಿ ಜಂಬೂ ರಾಜ್ ಮಹಾಜನ್ ಸ. ಮಾ.ಹಿ. ಶಾಲೆ. ಎ ಡಿ ಎಂ ಸಿ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಗುತ್ತಿಗಾರು ಹೈಸ್ಕೂಲ್ ಮುಖ್ಯ ಗುರು ನೆಲ್ಸನ್ ಕ್ಯಾಸ್ಟೋಲಿನ್, ಪಂಚಾಯತ್ ಸದಸ್ಯ ವಿಜಯ್ ಚಾರ್ಮಾತ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಮತ್ತು ಕಾರ್ಯಕ್ರಮ ಸಂಘಟಿಸಿದ ರಿಕ್ಷಾ ಚಾಲಕರ ಕಾರ್ಯಕ್ಕೆ ಶುಭ ಹಾರೈಸಿದರು. ಕಾಲೇಜು ದ್ವಿ. ದ. ಸಹಾಯಕ ಸೋಮಶೇಖರ್ ಮಾವಜಿ, ಪಂಚಾಯತ್ ಸದಸ್ಯರುಗಳಾದ ವಿನಯ್ ಸಾಲ್ತಡಿ, ಜಗದೀಶ್ ಬಾಕಿಲ, ಮಾಯಿಲಪ್ಪ ಕೊಂಬೆಟ್ಟು, ಲತಾ ಕುಮಾರಿ.ಘಟಕದ ಅಧ್ಯಕ್ಷ ಉದಯ್ ಹಾಲೆಮಜಲ್, ಪದಾಧಿಕಾರಿಗಳಾದ ರಾಜ್ ಉತ್ರಂಬೆ ಗಿರೀಶ್ ಪಾರೆಪ್ಪಾಡಿ ವಸಂತ ಚತ್ರಪ್ಪಾಡಿ, ಉಪಸ್ಥಿತರಿದ್ದರು. ಬಿ. ಎಂ. ಎಸ್. ಘಟಕದ ಗೌರವ ಅಧ್ಯಕ್ಷ ಮೋಹನ್ ಮುಕ್ಕೂರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಕಡೋಡಿ ಸ್ವಾಗತಿಸಿದರು,ಸರ್ವ ಸದಸ್ಯರು ಸಾಧಕ ವಿದ್ಯಾರ್ಥಿಗಳ ಪೋಷಕರಾದ ವೆಂಕಟ್ ಮೋಟ್ನೂರ್, ಗಣಪಯ್ಯ ಕುದ್ರೆಡ್ಕ ಉಪಸ್ಥಿತರಿದ್ದರು ನಿರಂತ್ ದೇವಸ್ಯ ಕಾರ್ಯಕ್ರಮ ನಿರೂಪಿಸಿದರು.
- Saturday
- November 23rd, 2024