ವಿಕ್ರಮ್ ಫೌಂಡೇಶನ್ ಮತ್ತು ಜಾಗರಣ ವೇದಿಕೆಯು ವಿನೂತನ ಕಾರ್ಯಕ್ರಮವನ್ನು ಮಂಡೆಕೋಲು ಗ್ರಾಮದಲ್ಲಿ ಹಮ್ಮಿಕೊಂಡಿದೆ ಈ ಹಿಂದೆ ನಾಗನ ದೋಶವಿದೆ ಎಂದು ಒಂದು ಬಡ ಮಹಿಳೆಯು ಮಹೇಶ್ ಉಗ್ರಾಣಿಮನೆ ಯವರಿಗೆ ತಿಳಿಸಿದ್ದು ಆ ಮನೆಯನ್ನು ನಿರ್ಮಿಸಿ ಕೊಡುವ ಸಂದರ್ಭದಲ್ಲಿ ಇನ್ನು ಕೆಲವರು ನಮಗು ಸಹಾಯ ಮಾಡಿ ಎಂದು ವಿನಂತಿಸಿದ ಹಿನ್ನಲೆಯಲ್ಲಿ ಮಹೇಶ್ ಉಗ್ರಾಣಿಮನೆ ಯವರು ವಿಕ್ರಂ ಫೌಂಡೇಶನ್ ನ ಮುಖ್ಯಸ್ಥ , ಪೋಸ್ಟ್ ಕಾರ್ಡ್ ಮಾಧ್ಯಮದ ಮಹೇಶ್ ವಿಕ್ರಂ ಹೆಗ್ಡೆಯವರಿಗೆ ಸಾಮಾಜಿಕ ಜಾಲತಾಣದಲ್ಲಿ ವಿನಂತಿಸಿದ ತಕ್ಷಣವೇ ಕಾರ್ಯ ಪ್ರವೃತ್ತ ರಾದ ವಿಕ್ರಂ ಹೆಗ್ಡೆ ಅವರು ಮಂಡೆಕೋಲು ಗ್ರಾಮಕ್ಕೆ ಭೇಟಿ ನೀಡಿ ಮನೆ ನಿರ್ಮಿಸಿ ಕೊಡುವ ಭರವಸೆ ನೀಡಿ ವಿಕ್ರಂ ಫೌಂಡೇಶನ್ ಮುಖಾಂತರ ಆರ್ಥಿಕ ಸಹಾಯಧನ ಸಂಗ್ರಹಿಸಲು ಆರಂಬಿಸಿ ಇದೀಗ ಸುಮಾರು 10 ಲಕ್ಷದದಷ್ಟು ಮೊತ್ತ ಸಂಗ್ರಹವಾಗಿದ್ದು ಇನ್ನು ಸುಮಾರು 20 ಲಕ್ಷದಷ್ಟು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ.
ಪ್ರತಿ ಮನೆಗೆ 5ಲಕ್ಷದಂತೆ 6 ಮನೆಗಳನ್ನು ನಿರ್ಮಿಸಲು ಮುಂದಾಗಿದ್ದು ವಿದ್ಯುಕ್ತವಾಗಿ ಭೂಮಿ ಪೂಜೆಯನ್ನು ಮಹೇಶ್ ವಿಕ್ರಂ ಹೆಗ್ಡೆಯವರ ಸಮ್ಮುಖದಲ್ಲಿ ನ ಉದಯ್ ಆಚಾರ್ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ಜಾಗರಣ ವೇದಿಕೆಯ ಸುಳ್ಯ ತಾಲೂಕು, ಮಂಡೆಕೋಲು ಘಟಕದ ಎಲ್ಲಾ ಕಾರ್ಯಕರ್ತರು ಹಾಗೂ ಮಂಡೆಕೋಲು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಅನಿಲ್ ತೋಟಪ್ಪಾಡಿ,ಪ್ರತಿಮ ಭಟ್ ,ಬಾಲಚಂದ್ರ ದೇವರಗುಂಡ, ತಾರಾನಾಥ ಪೇರಾಲು,ಲಕ್ಷ್ಮಣ ಉಗ್ರಾಣಿಮನೆ,ಉದಯ್ ಆಚಾರ್ ,ರಮೇಶ್ ಇರಂತಮಜಲು ಮತ್ತಿತರರು ಉಪಸ್ಥಿತರಿದ್ದರು.
- Thursday
- November 21st, 2024