
ಪೈಕ. ಸ .ಕಿ.ಪ್ರಾ ಶಾಲೆಯ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅ. 17 ರಂದು ರಚನೆ ಮಾಡಲಾಯಿತು.
2021 -22 ನೇ ಸಾಲಿನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ಮಂಜುನಾಥ ಕೆ., ಉಪಾಧ್ಯಕ್ಷರಾಗಿ ಶ್ರೀಮತಿ ರೇಣುಕಾ ಆಯ್ಕೆಯಾದರು.
ಸದಸ್ಯರುಗಳಾಗಿ ಉದಯಕುಮಾರ್ ಪಿ, ಭುವನೇಶ್ವರ ಪಿ, ಅಚ್ಚುತ ಪಿ, ಆನಂದ, ವೆಂಕಟರಮಣ ಎಂ, ರಾಘವೇಂದ್ರ, ಶ್ರೀಮತಿ ಗೀತಾ ಪಿ, ಶ್ರೀಮತಿ ಮಾಧವಿ, ಶ್ರೀಮತಿ ಧನ್ಯ ಕುಮಾರಿ ಪಿ, ಶ್ರೀಮತಿ ಭಾರತಿ, ಶ್ರೀಮತಿ ಕುಸುಮಾವತಿ, ಶ್ರೀಮತಿ ಕಮಲ, ಶ್ರೀಮತಿ ವೀಣಾ ಆಯ್ಕೆಯಾದರು.
ಪದನಿಮಿತ್ತ ಸದಸ್ಯರುಗಳಾಗಿ ಮುಖ್ಯ ಶಿಕ್ಷಕಿ ಶ್ರೀಮತಿ ಸ್ನೇಹಲತಾ ಎಸ್ ಕೆ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಗುಲಾಬಿ ಮತ್ತು ಆರೋಗ್ಯ ಕಾರ್ಯಕರ್ತೆ ವಾರಿಜ ಆಯ್ಕೆಯಾದರು.
ನಾಮನಿರ್ದೇಶಿತ ಸದಸ್ಯರುಗಳಾಗಿ ಗುತ್ತಿಗಾರು ಗ್ರಾಮ ಪಂಚಾಯತ್ ಸದಸ್ಯೆ ಶ್ರೀಮತಿ ಸುಮಿತ್ರ ಮೂಕಮಲೆ ಮತ್ತು ವಿದ್ಯಾರ್ಥಿ ನಾಯಕಿ ಜನನಿ ಆಯ್ಕೆಯಾದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯ ಜಗದೀಶ್ ಬಾಕಿಲ , ಎಸ್ ಡಿ ಎಂ ಸಿ ಯ ಮಾಜಿ ಅಧ್ಯಕ್ಷರುಗಳಾದ ಮಾಧವ ಮತ್ತು ಪೂರ್ಣಚಂದ್ರ ಪೈಕ ಮತ್ತು ಪೋಷಕರು ಉಪಸ್ಥಿತರಿದ್ದರು.