Ad Widget

ಹರಿಹರ ಪಲ್ಲತ್ತಡ್ಕ : ಆ.27 ರಂದು ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ

. . . . . . .

ಆ.27 ರಂದು ದ.ಕ ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸುಳ್ಯ ಇವರ ವತಿಯಿಂದ ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ನ ಸಹಯೋಗದಲ್ಲಿ “ಆಜಾದಿ ಕಾ ಅಮೃತ್ ಮಹೋತ್ಸವ್” ದ ಪ್ರಯುಕ್ತ “ನಾಯಿಗಳಿಗೆ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಶಿಬಿರ ಹಾಗೂ ಮಾಹಿತಿ ಶಿಬಿರ” ನಡೆಯಲಿದೆ.

ಈ ಕಾರ್ಯಕ್ರಮವು ಆ.27 ರಂದು ಉದ್ಘಾಟನೆಗೊಂಡು ಪೂರ್ವಾಹ್ನ 10:30 ರಿಂದ 11:30 ರವರೆಗೆ ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ವಠಾರದಲ್ಲಿ ಲಸಿಕೆ ನೀಡಲಾಗುವುದು.
ನಂತರ ಪೂರ್ವಾಹ್ನ 11:30 ರಿಂದ 12:00 ಗಂಟೆವರೆಗೆ ಹರಿಹರ ಶ್ರೀರಾಮಕುಟ್ಟಿ ಅವರ ಮನೆಯ ಬಳಿ ಲಸಿಕೆ ನೀಡಲಾಗುವುದು.
ಪೂರ್ವಾಹ್ನ 12:00 ರಿಂದ 12:30 ರವರೆಗೆ ರೇಗನ್ ಶೆಟ್ಟಿಯಡ್ಕ ಅವರ ಮನೆಯ ಬಳಿ ಲಸಿಕೆ ನೀಡಲಾಗುವುದು.
ಅಪರಾಹ್ನ 12:30 ರಿಂದ 1:00 ಗಂಟೆವರೆಗೆ ಕಲ್ಲೇಮಠ ಸಾರ್ವಜನಿಕ ಗ್ರಂಥಾಲಯದ ಬಳಿ ಲಸಿಕೆ ನೀಡಲಾಗುವುದು.
ಅಪರಾಹ್ನ 1:00 ರಿಂದ 1:30 ರವರೆಗೆ ಬಾಳುಗೋಡು ಬಸವನಗುಡಿ ವಠಾರದಲ್ಲಿ ಹಾಗೂ 1:30 ರಿಂದ 2:00 ಗಂಟೆವರೆಗೆ ಬಾಳುಗೋಡು ಬೆಟ್ಟುಮುಕ್ಕಿ ಮೈದಾನದ ಬಳಿ ಲಸಿಕೆ ನೀಡಲಾಗುವುದು. ಎಲ್ಲಾ ನಾಯಿಗಳಿಗೆ ಉಚಿತವಾಗಿ ಲಸಿಕೆ ನೀಡಲಾಗುವುದು. ನಾಯಿಗಳನ್ನು ಲಸಿಕೆಗಾಗಿ ಕರೆತರುವವರು ನಾಯಿಯ ಮಾಲಿಕರ ಆಧಾರ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಯನ್ನು ಕಡ್ಡಾಯವಾಗಿ ತರತಕ್ಕದ್ದು ಎಂದು ಹರಿಹರ ಪಲ್ಲತ್ತಡ್ಕ ಗ್ರಾಮಪಂಚಾಯತ್ ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

✍ವರದಿ :- ಉಲ್ಲಾಸ್ ಕಜ್ಜೋಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!