
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ದಿ ಯೋಜನೆ ಬಿ ಸಿ ಟ್ರಸ್ಟ್ ( ರಿ ) ಸುಳ್ಯ ತಾಲೂಕು ಗುತ್ತಿಗಾರು ವಲಯದ ಗುತ್ತಿಗಾರಿನ ಚಣಿಲದಲ್ಲಿ “ದೇವಿ ಕೃಪಾ” ಹೆಸರಿನ ಪ್ರಗತಿ ಬಂಧು ಸಂಘವನ್ನು ವಲಯದ ಮೇಲ್ವಿಚಾರಕರಾದ ಶ್ರೀ ಮುರಳೀಧರ ರವರು ದೀಪ ಬೆಳಗಿಸಿ ಉದ್ಘಾಟಿಸಿ ಐದು ಮಂದಿಯೂ ಏಕ ಮನಸ್ಸಿನಿಂದ ಜತೆಗೂಡಿ ನಿಮ್ಮ ವೈಯಕ್ತಿಕ ಅಭಿವೃದ್ಧಿ ಮತ್ತು ಕುಟುಂಬದ ಅಭಿವೃದ್ಧಿ ಈ ಸಂಘವು ಪೂರಕವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಸೇವಾ ಪ್ರತಿನಿಧಿ ಲೋಕೇಶ್ವರ ಡಿ ಆರ್ ರವರು ಗುತ್ತಿಗಾರು ಒಕ್ಕೂಟಕ್ಕೆ ನಿಮ್ಮ ಸಂಘವು ಹೊಸದಾಗಿ ಸೇರ್ಪಡೆಯಾಗಿದ್ದು ಎಲ್ಲರೂ ಒಗ್ಗಟ್ಟಿನಿಂದ ಸಂಘವನ್ನು ನಡೆಸಿ ಎಂದು ಶುಭಹಾರೈಸಿ ಕಾರ್ಯಕ್ರಮ ನಿರೂಪಿಸಿದರು.
ಸಂಘದ ಅಧ್ಯಕ್ಷರಾಗಿ ಪರಮೇಶ್ವರ ಚಣಿಲ ಕಾರ್ಯದರ್ಶಿಯಾಗಿ ಲೋಹಿತ್ ಕುಮಾರ್ ಪಿ, ಕೋಶಾಧಿಕಾರಿ ಯಾಗಿ ಸುರೇಶ್ ಕೆ ಮತ್ತು ಸದಸ್ಯರಾಗಿ ದಯಾನಂದ ಪಿ ಹಾಗೂ ಚಂದ್ರಕಾಂತ ಕೆ ಇವರನ್ನು ಆಯ್ಕೆ ಮಾಡಲಾಯಿತು.