ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಮಾಭಿವೃದ್ದಿ ಯೋಜನೆ ಬಿ ಸಿ ಟ್ರಸ್ಟ್ ಸುಳ್ಯ ವತಿಯಿಂದ ಪೌಷ್ಟಿಕ ಆಹಾರ ಮೇಳ ಜಯನಗರದಲ್ಲಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಜಯನಗರದ ಶಿಕ್ಷಕಿಯಾದ ಶ್ರೀಮತಿ ಮಮತಾ ರವರು ಉದ್ಘಾಟಿಸಿ ಪೌಷ್ಟಿಕ ಆಹಾರದ ಮಹತ್ವದ ಕುರಿತು ಮಾಹಿತಿ ನೀಡಿದರು. ಜ್ಞಾನವಿಕಾಸ ಕಾರ್ಯಕ್ರಮದ ಹಿನ್ನೆಲೆ,ಉದ್ದೇಶದ ಕುರಿತು ತಾಲೂಕು ಯೋಜನಾಧಿಕಾರಿ ಗಳಾದ ಶ್ರೀ ಚೆನ್ನಕೇಶವ ರವರು ತಿಳಿಸಿದರು. ಸಂಸ್ಕಾರಯುತ ಶಿಕ್ಷಣದಲ್ಲಿ ಪೋಷಕರ ಪಾತ್ರದ ಕುರಿತು ಡಾ. ಅನುರಾಧ ಕುರುಂಜಿ ಯವರು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಭಾರತಿ,ವಲಯ ಮೇಲ್ವಿಚಾರಕರಾದ ಶ್ರೀಮತಿ ಹೇಮಲತಾ, ಸೇವಪ್ರತಿನಿಧಿಯಾದ ವನಿತಾ ,ಒಕ್ಕೂಟದ ಅಧ್ಯಕ್ಷರಾದ ಲಾವಣ್ಯ ಉಪಸ್ಥಿತರಿದ್ದರು.
- Thursday
- November 21st, 2024