Ad Widget

ಚಟ್ಟೆಕಲ್ಲು ಫ್ರೆಂಡ್ಸ್ ಕ್ಲಬ್ ವತಿಯಿಂದ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನೆ

ಸಂಪಾಜೆ : ಚಟ್ಟೆಕಲ್ಲು ಫ್ರೆಂಡ್ಸ್ ಕ್ಲಬ್(CFC) (ರಿ.) ವತಿಯಿಂದ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮವು ಕಲ್ಲುಗುಂಡಿ ಹಯಾತುಲ್ ಇಸ್ಲಾಂ ಮದರಸದಲ್ಲಿ ನಡೆಯಿತು. ಎಂ.ಜೆ.ಎಂ ಕಲ್ಲುಗುಂಡಿ ಖತೀಬರಾದ ನಈಂ ಫೈಝಿ ಉಸ್ತಾದರು ದುಆ ನೆರವೇರಿಸಿದರು. ಸಿ.ಎಫ್.ಸಿ ಅಧ್ಯಕ್ಷರಾದ ಹಸೈನಾರ್ ಸಿ.ಎ ರವರು ಕಾರ್ಯಕ್ರಮದ ಅಧ್ಯಕ್ಷ ವಹಿಸಿದ್ದರು. ಗ್ರಾಮ ಪಂಚಾಯತ್ ಸಂಪಾಜೆ ಅಧ್ಯಕ್ಷ ಜಿ.ಕೆ ಹಮೀದ್ ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಸಮಾಜ ಎದುರಿಸುತ್ತಿರುವ ಹಲವಾರು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಾರ್ಗೋಪಾಯಗಳನ್ನು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸುಳ್ಯ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಧ್ಯಕ್ಷರಾದ ತಾಜ್ ಮೊಹಮ್ಮದ್, ಎಂ.ಜೆ.ಎಂ ಕಲ್ಲುಗುಂಡಿ ಅಧ್ಯಕ್ಷರಾದ ಅಬ್ಬಾಸ್ ಹಾಜಿ,ಎಂ ಜೆ ಎಂ ಕಲ್ಲುಗುಂಡಿ ಮುಹಝೀನ್ ಝಕರಿಯ ಡಿ ಕೆ, ಸೆಂಟ್ಯಾರ್ ಚಾರಿಟೇಬಲ್ ಟ್ರಸ್ಟ್(ರಿ) ಇದರ ಅಧ್ಯಕ್ಷರಾದ ಹೆಚ್.ಎ ಅಶ್ರಫ್ ರವರು ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಎಸ್ ಎಸ್ ಎಲ್ ಸಿ ಯಲ್ಲಿ ಉನ್ನತ ವಿಜಯಿಯಾದ ಆಯಿಷತ್ ತಸ್ಮಿಯ ಮತ್ತು ಅಹ್ಮದ್ ನವಾಝ್ ಎಂ.ಎ ಹಾಗೂ ಪಿ ಯು ಸಿ ಯಲ್ಲಿ ಉನ್ನತ ವಿಜಯಿಯಾದ ಫಾತಿಮತ್ ನೌಶಿದ ಎಸ್.ಎಂ, ಶಿಫಾನ ಪರ್ವೀನ್ ಕೆ.ಎ, ಮೊಹಮ್ಮದ್ ಅಮೀರ್ ಕೆ.ಹೆಚ್ ಮತ್ತು ಮೊಹಮ್ಮದ್ ಅಶ್ಫಾಕ್ ಕೆ.ಎ
ಸನ್ಮಾನಮಾಡಲಾಯಿತು ಹಾಗೂ ಯುವಸಬಲೀಕರಣದ ಭಾಗವಾಗಿ ರಸಪ್ರಶ್ನೆ ಹಾಗೂ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಜುನೈದ್ ಮತ್ತು ಸಾಬಿತ್ ರವರಿಗೆ ಬಹುಮಾನ ವಿತರಿಸಲಾಯಿತು.
ಫಾರೂಕ್ ಕಾನಕ್ಕೋಡ್ ನಿರೂಪಿಸಿದರು.ಸ್ವಾದಿಕ್ ಮಾಸ್ಟರ್ ಕಲ್ಲುಗುಂಡಿ ಸ್ವಾಗತಿಸಿ, ಹಾಶಿಮ್ ಎಸ್ ಎಚ್ ವಂದಿಸಿದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!