
ನೆಲ್ಲೂರು ಕೇಮ್ರಾಜೆ: ಇಲ್ಲಿನ ಜೀರ್ಮುಖಿ – ಬೊಮ್ಮಾರು ಸಂಪರ್ಕಿಸುವ ಗಟ್ಟಿಗಾರು ಶಾಲೆಯ ಹತ್ತಿರದ ರಸ್ತೆ ಮಳೆಯಿಂದಾಗಿ ಕೆಸರುಮಯವಾಗಿದ್ದು ಅಲ್ಲಿನ ಸಂಚಾರ ದುಸ್ತರವಾಗಿದೆ.
ವಿದ್ಯಾಗಮಕ್ಕಾಗಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬರುವಾಗಲೂ ಪೋಷಕರು ಕಷ್ಡಪಡುವಂತಾಗಿದೆ.
ಕಳೆದ ಕೆಲ ದಿನಗಳ ಹಿಂದೆ ಮಂದ್ರಪ್ಪಾಡಿಯಲ್ಲಿನ ರಸ್ತೆಯೂ ಅದೇ ಸ್ಥಿತಿಯಲ್ಲಿತ್ತು. ಮಾಧ್ಯಮ ಗಳ ವರದಿಯ ಬಳಿಕ ಪಂಚಾಯತ್ ಅವರು ಎಚ್ಚೆತ್ತುಕೊಂಡು ಜಲ್ಲಿ ಹಾಕಿ ದುರಸ್ತಿ ಮಾಡಿ ಜನ ಓಡಾಡುವಂತೆ ಮಾಡಿದ್ದರು. ಈಗ ಗಟ್ಟಿಗಾರು ಶಾಲೆಯ ಬಳಿಯ ಕೆಸರುಮಯ ರಸ್ತೆಯನ್ನೂ ದುರಸ್ತಿ ಮಾಡಬೇಕು ಎಂದು ಅಲ್ಲಿನ ಸಾರ್ವಜನಿಕರು ಆಗ್ರಹಿಸಿದ್ದಾರೆ.