Ad Widget

ಕೋವಿಡ್ ಪಾಸಿಟಿವಿಟಿ ದರ ಏರಿಕೆಯಾಗದಂತೆ ಜಾಗೃತಿವಹಿಸಿ- ಸಚಿವ ಅಂಗಾರ

ಸುಳ್ಯ: ದ.ಕ ಜಿಲ್ಲೆ ಹಲವು ಗಡಿ ಪ್ರದೇಶಗಳನ್ನು ಹೊಂದಿದ್ದು ಇದು ಕೋವಿಡ್ ನ ಕುರಿತು ಮತ್ತಷ್ಟು ಜಾಗೃತರಾಗಿ ಇರಬೇಕಾದ ಸನ್ನಿವೇಶವನ್ನು ಉಂಟು ಮಾಡಿದೆ. ಹಾಗಾಗಿ ಇಲ್ಲಿನ ಅಧಿಕಾರಿ ವರ್ಗ ಮತ್ತಷ್ಟು ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡು ಕೋವಿಡ್ ಪಾಸಿಟಿವಿಟಿ ದರ ಏರದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಚಿವ ಎಸ್ ಅಂಗಾರ ಅವರು ಹೇಳಿದರು.ಆ.೧೮ ರಂದು ಕೆವಿಜಿ ಆಯರ್ವೇದ...

ಕುಕ್ಕೆ: ಶ್ರೀ ದೇವಳದಲ್ಲಿ ಆ.3೦ರ ತನಕ ಯಾವುದೇ ಸೇವೆಗಳಿಗೆ ಅವಕಾಶವಿಲ್ಲ

ಸುಬ್ರಹ್ಮಣ್ಯ: ಕೇರಳ ರಾಜ್ಯಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆಯಾದ ದ.ಕದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲಾಧಿಕಾರಿಗಳ ಆದೇಶದಂತೆ ರಾಜ್ಯದ ನಂಬರ್ ವನ್ ಆದಾಯದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆ.30ರ ತನಕ ಯಾವುದೇ ಸೇವೆಗಳು ನಡೆಯುವುದಿಲ್ಲ. ಕೇವಲ ಶ್ರೀ ದೇವರ ದರುಶನಕ್ಕೆ ಮಾತ್ರ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ತೀರ್ಥಪ್ರಸಾದ ವಿತರಣೆ, ಅನ್ನಸಂತರ್ಪಣೆ ಇರುವುದಿಲ್ಲ. ಶನಿವಾರ ಮತ್ತು...
Ad Widget

ಶತಾಯುಷಿ ಶ್ರೀಮತಿ ಚೋಮು ಕಲ್ಲಪಣೆ ನಿಧನ

ಕೊಡಿಯಾಲ ಗ್ರಾಮದ ಶತಾಯುಷಿ ಶ್ರೀಮತಿ ಚೋಮು ಕಲ್ಲಪಣೆಯವರು ಆ.18ರಂದು ನಿಧನರಾದರು. ಅವರಿಗೆ 105 ವರ್ಷ ವಯಸ್ಸಾಗಿತ್ತು. ಮೃತರು ಪುತ್ರ ಮುದರ, ಪುತ್ರಿಯರಾದ ಲಕ್ಷ್ಮೀ, ಕುಸುಮ, ಕಮಲ, ಚನ್ನು, ಸೊಸೆಯಂದಿರಾದ ಜಾನಕಿ, ಸೇಸಮ್ಮ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಸಂಪಾಜೆ : ಮುಸ್ಲಿಮ್ ಒಕ್ಕೂಟದಿಂದ “ನನ್ನ ಕನಸಿನ ಭಾರತ” ಭಾಷಣ ಸ್ಪರ್ಧೆ

75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ 15 ಆಗಸ್ಟ್ 2021 ರಂದು ಮುಸ್ಲಿಮ್ ಒಕ್ಕೂಟ ಸಂಪಾಜೆ ವಾಟ್ಸಪ್ ಗ್ರೂಪ್ ನಲ್ಲಿ "ನನ್ನ ಕನಸಿನ ಭಾರತ" ವಿಷಯದಲ್ಲಿ ನಡೆದ ಕನ್ನಡ ಭಾಷಣ ಸ್ಪರ್ಧೆ ನಡೆದಿತ್ತು. ಈ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಸ್ವಾದಿಕ್ ಸಂಪಾಜೆ, ದ್ವಿತೀಯ ಸ್ಥಾನವನ್ನು ಮೊಹಮ್ಮದ್ ಹಾಸಿಮ್, ತೃತೀಯ ಶಮೀರ್ ಮೌಲವಿ ಪಡೆದರು.
error: Content is protected !!