ಸುಳ್ಯ: ಅಮೃತ ಮಹೋತ್ಸವದ ಹಿನ್ನಲೆ ಎಲ್ಲಾ ಗ್ರಾ.ಪಂ. ಮಟ್ಟದಿಂದಲೂ ಅಮೃತ ಮಹೋತ್ಸವವನ್ನು ಕೇಂದ್ರ ಸರಕಾರದ ನಿರ್ದೇಶನದಂತೆ ಆಚರಿಸಲಾಗಿತ್ತು. ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ವೀರ ಸಾವರ್ಕರ್ ಅವರ ಫೋಟೋವನ್ನು ಹರಿದು ಟಿಪ್ಪು ಫೋಟೋ ಹಾಕಬೇಕು ಎಂಬ ನೆಪವೊಡ್ಡಿ ಸ್ವಾತಂತ್ರ್ಯ ಹೋರಾಟಗಾರ ವೀರಸಾವರ್ಕರ್ ಅವರ ಫೋಟೋ ಹರಿದು ಹಾಕಿ ಅವಮಾನ ಮಾಡುವ ಮೂಲಕ ದೇಶದ್ರೋಹದ ಕೆಲಸ ಮಾಡಿದೆ. ಇದರ ವಿರುದ್ಧ ಸರಕಾರ ಕ್ರಮ ಕೈಗೊಂಡು ದೇಶದ್ರೋಹಿ ಎಸ್.ಡಿ.ಪಿ.ಐ ಸಂಘಟನೆಯನ್ನು ನಿಶೇಧಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಅಫ್ಘಾನಿಸ್ತಾನ ದ ದುಸ್ಥಿತಿ ನಮಗೂ ಬರಬಹುದು ಎಂದು ಬಿ.ಜೆ.ಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದರು.
ಸುಳ್ಯದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಲವ್ ಜಿಹಾದ್, ಭಯೋತ್ಪಾದನೆಗೆ ಕುಮ್ಮಕ್ಕು, ದೇಶ ವಿರೋಧಿ ಕೃತ್ಯ ಮಾಡಿದವರ ಮೇಲೆ ಸರಕಾರ ದೇಶದ್ರೋಹದ ಕೇಸ್ ಹಾಕಬೇಕು . ಎಂದರು.
ಈ ಸಂದರ್ಭ ನ.ಪಂ.ಉಪಾಧ್ಯಕ್ಷೆ ಸರೋಜಿನಿ ಪೆಲ್ತಡ್ಕ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ತಾ.ಪಂ. ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಪ್ರಮುಖರಾದ ಮಹೇಶ್ ರೈ ಹಾಗೂ ಸುನೀಲ್ ಕೇರ್ಪಳ ಐಬಿ ಚಂದ್ರಶೇಖರ ಅವರು ಉಪಸ್ಥಿತರಿದ್ದರು.