- Wednesday
- April 2nd, 2025

ಲವ್ ಜಿಹಾದ್ ಮತ್ತು ಉಗ್ರಗಾಮಿ ಚಟುವಟಿಕೆಗಳನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆಯ ವತಿಯಿಂದ ಸುಳ್ಯ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.ಕರಾವಳಿ ಭಾಗದಲ್ಲಿ ಹೆಚ್ಚುತ್ತಿರುವ ಲವ್ ಜಿಹಾದ್ ಮತ್ತು ಉಗ್ರಗಾಮಿ ಕೃತ್ಯಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಪರ್ಕ ಪ್ರಮುಖ್ ನರಸಿಂಹ ಮಾಣಿ ಮತ್ತು ನಗರ...

ಅಚ್ರಪ್ಪಾಡಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಆ.11ರಂದು ರಚನೆ ಮಾಡಲಾಯಿತು. 2021-22 ನೇ ಸಾಲಿನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನೂತನ ಅಧ್ಯಕ್ಷರಾಗಿ ಜನಾರ್ಧನ , ಉಪಾಧ್ಯಕ್ಷೆಯಾಗಿ ಶ್ರೀಮತಿ ಕುಮುದ, ಸದಸ್ಯರುಗಳಾಗಿ ಶ್ರೀಮತಿ ಶ್ಯಾಮಲಾ, ಶ್ರೀಮತಿ ರಶ್ಮಿ , ಶ್ರೀಮತಿ ಜಯಶ್ರೀ ಪರಶುರಾಮ , ಶ್ರೀಮತಿ ಸೌಮ್ಯ ಗೋವರ್ಧನ,...

ಸುಬ್ರಮಣ್ಯ ಗ್ರಾಮ ಕಾಂಗ್ರೆಸ್ ವತಿಯಿಂದ ಸುಬ್ರಮಣ್ಯದ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ಕಾರ್ಯಕ್ರಮ ಇಂದು ಕುಕ್ಕೆ ಸುಬ್ರಹ್ಮಣ್ಯದ ವೆಲಂಕಣಿ ಸಭಾಭವನದಲ್ಲಿ ಇಂದು ನಡೆಯಿತು. ಕೆಪಿಸಿಸಿ ಸಂಯೋಜಕ, ಕಡಬ ಬ್ಲಾಕ್ ಉಸ್ತುವಾರಿಗಳಾದ ನಂದಕುಮಾರ್ ಮಡಿಕೇರಿ ಯವರು ಆಹಾರ ಕಿಟ್ ಪ್ರಾಯೋಜಿಸಿದ್ದರು. ಕಾರ್ಯಕ್ರಮದಲ್ಲಿ ಸುಬ್ರಮಣ್ಯ ಗ್ರಾಮ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಇಂಜಾಡಿ, ಕೆಪಿಸಿಸಿ ಸದಸ್ಯರಾದ ಡಾ. ಬಿ...

ಚೀನಾ, ಟಿಬೆಟ್ ಹಾಗೂ ಪಾಕಿಸ್ತಾನಗಳಿಂದ ಸುತ್ತುವರೆದಿರುವ ಕೇಂದ್ರಾಡಳಿತ ಪ್ರದೇಶವಾದ ಲಡಾಕ್ ಗೆ ಕಾಲ್ನಡಿಗೆಯಲ್ಲಿ ತಲುಪುವ ಸಾಹಸದ ಕೆಲಸಕ್ಕೆ ಮುಂದಾಗಿರುವ ಕಡಬದ ಮೂವರು ಯುವಕರು ಸೋಮವಾರ ತಮ್ಮ ನಡಿಗೆಯನ್ನು ಕಡಬದಿಂದ ಆರಂಭಿಸಿದ್ದಾರೆ.ಕಡಬ ತಾಲೂಕಿನ ಕುಟ್ರುಪಾಡಿ ಗ್ರಾಮದ ವಿಮಲಗಿರಿಯ ಸಂಪ್ರೀತ್, ಐತ್ತೂರು ಗ್ರಾಮದ ಬೆತ್ತೋಡಿಯ ಸೆಬಾಸ್ಟಿಯನ್, ಕೋಣಾಜೆಯ ನಿಶಾಂತ್ ಎಂಬ ಮೂವರು ಯುವಕರು ಈ ಸಾಹಸಕ್ಕೆ ಕೈ ಹಾಕಿದವರು....

ಸುವರ್ಣ ಚಾನಲ್ ನಲ್ಲಿ ಆಗಸ್ಟ್ 30 ರಿಂದ ಆರಂಭವಾಗಲಿರುವ ಡ್ಯಾನ್ಸ್ ರಿಯಾಲಿಟಿ ಶೋ ಗೆ ಮೋನಿಷಾ ಅಳಂಕಲ್ಯ ಆಯ್ಕೆಯಾಗಿದ್ದಾರೆ. ಸೈಂಟ್ ಜೋಸೆಫ್ ಶಾಲಾ ವಿದ್ಯಾರ್ಥಿನಿಯಾಗಿರುವ ಮೋನಿಷಾ ಮಂಡೆಕೋಲು ಗ್ರಾಮದ ಅಳಂಕಲ್ಯ ಕುಸುಮಾ ಚಂದ್ರಶೇಖರ್ ದಂಪತಿಗಳ ಪುತ್ರಿ.

ಕರ್ನಾಟಕ ಸರ್ಕಾರ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಸುಳ್ಯ, ತಾಲ್ಲೂಕು ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಸುಳ್ಯ ಇವುಗಳ ಸಂಯುಕ್ತ ಆಶ್ರಯದಲ್ಲಿ, ತಾಲ್ಲೂಕಿನಲ್ಲಿ ಹೊಸದಾಗಿ ರಚನೆ ಯಾದ 12 ಪ.ಪಂಗಡ ಸ್ತ್ರೀ ಶಕ್ತಿ ಗುಂಪುಗಳಿಗೆ ಸುಳ್ಯ ತಾಲ್ಲೂಕು ಸ್ತ್ರೀ ಶಕ್ತಿ ಭವನದಲ್ಲಿ ನಡೆದ 3...

ಕಳಂಜ ನಿವಾಸಿ ಬಾಬು ಪೂಜಾರಿ ಕಳಂಜ ಹೃದಯಾಘಾತದಿಂದ ಆ.15ರಂದು ನಿಧನರಾದರು. ಮೃತರಿಗೆ 70 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಶ್ರೀಮತಿ ಭವಾನಿ, ಪುತ್ರ ಸುಧೀರ್, ಪುತ್ರಿಯರಾದ ಶ್ರೀಮತಿ ಜಯಶ್ರೀ, ಶ್ರೀಮತಿ ಸುಜಾತ ಈಶ್ವರಮಂಗಲ, ಶ್ರೀಮತಿ ವಿಜಯಶ್ರೀ ಬೆಂಗಳೂರು ಹಾಗೂ ಸಹೋದರರಾದ ಆನಂದ ಪೂಜಾರಿ ಕಳಂಜ, ಐತ್ತಪ್ಪ ಪೂಜಾರಿ ಕಳಂಜ, ಸುಂದರ ಪೂಜಾರಿ ಸಜೀಪ ಮೇಲ್ಕಾರ್, ಸಹೋದರಿಯರಾದ...

ಮಂಡೆಕೋಲು ಗ್ರಾಮದ ಕುಕ್ಕೇಟಿ ಕೂಸಪ್ಪ ಗೌಡ(89)ರವರು ಆ.16ರಂದು ಮಧ್ಯರಾತ್ರಿ ಸುಳ್ಯ ಕೆ.ವಿ.ಜಿ. ಆಸ್ಪತ್ರೆಯಲ್ಲಿ ವಯೋಸಹಜ ಅಸೌಖ್ಯದಿಂದ ನಿಧನರಾದರು. ಅವರು ಪತ್ನಿ ಶ್ರೀಮತಿ ಚಿನ್ನಮ್ಮ, ಪುತ್ರರಾದ ದೇವಯ್ಯ, ಪೂವಯ್ಯ, ರಾಘವ, ರಾಮಚಂದ್ರ, ಪುತ್ರಿಯರಾದ ಪುಷ್ಪಾವತಿ, ಮಮತಾ, ಚಿತ್ರಲೇಖ ಹಾಗೂ ಸೊಸೆಯಂದಿರು, ಅಳಿಯಂದಿರು, ಮೊಮ್ಮಕ್ಕಳು, ಮರಿಮಕ್ಕಳು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

ಕಡಬ ತಾಲೂಕಿನ ಕಾಣಿಯೂರಿನ ಚಾರ್ವಾಕದ ಯುವಕ ರಾಜೇಶ್ ತನ್ನ ಹುಟ್ಟು ಹಬ್ಬವನ್ನು ವಿನೂತನ ರೀತಿಯಲ್ಲಿ ಆಚರಿಸಿಕೊಂಡು ಬಡ ಕುಟುಂಬಕ್ಕೆ ಆಸರೆಯಾಗಿದ್ದಾರೆ. ಪ್ರತಿಯೊಬ್ಬರೂ ಹುಟ್ಟು ಹಬ್ಬವನ್ನು ಒಂದು ರೀತಿಯಲ್ಲಿ ಮೋಜು ಮಸ್ತಿಯೊಂದಿಗೆ ಆಚರಿಸುತ್ತಾರೆ. ಆದರೆ ಅದಕ್ಕೆ ಅಪವಾದವೆಂಬಂತೆ ಚಾರ್ವಾಕದ ಯುವಕ ಶ್ರೀ ದುರ್ಗಾ ಅರ್ಥ್ ಮೂವರ್ಸ್ ಮಾಲೀಕ ರಾಜೇಶ್ ಚಾರ್ವಾಕ ತೀರ ಬಡಕುಟುಂಬದ ಶೇಖರ ಪೂಜಾರಿ ಅವರ...

ಸುಳ್ಯ: ಅಮೃತ ಮಹೋತ್ಸವದ ಹಿನ್ನಲೆ ಎಲ್ಲಾ ಗ್ರಾ.ಪಂ. ಮಟ್ಟದಿಂದಲೂ ಅಮೃತ ಮಹೋತ್ಸವವನ್ನು ಕೇಂದ್ರ ಸರಕಾರದ ನಿರ್ದೇಶನದಂತೆ ಆಚರಿಸಲಾಗಿತ್ತು. ಪುತ್ತೂರು ತಾಲೂಕಿನ ಕಬಕ ಗ್ರಾಮದಲ್ಲಿ ವೀರ ಸಾವರ್ಕರ್ ಅವರ ಫೋಟೋವನ್ನು ಹರಿದು ಟಿಪ್ಪು ಫೋಟೋ ಹಾಕಬೇಕು ಎಂಬ ನೆಪವೊಡ್ಡಿ ಸ್ವಾತಂತ್ರ್ಯ ಹೋರಾಟಗಾರ ವೀರಸಾವರ್ಕರ್ ಅವರ ಫೋಟೋ ಹರಿದು ಹಾಕಿ ಅವಮಾನ ಮಾಡುವ ಮೂಲಕ ದೇಶದ್ರೋಹದ ಕೆಲಸ ಮಾಡಿದೆ....

All posts loaded
No more posts