Ad Widget

ಬೆಳ್ಳಾರೆ :ಎಸ್.ಡಿ.ಪಿ.ಐ ಮತ್ತು ಪಿ.ಫ್.ಐ ಸಂಘಟನೆಯನ್ನು ನಿಷೇಧಿಸುವಂತೆ ಒತ್ತಾಯಿಸಿ ಹಿಂದೂ ಸಂಘಟನೆಯಿಂದ ನಾಳೆ ಪ್ರತಿಭಟನೆ

ವಿಶ್ವ ಹಿಂದೂ ಪರಿಷತ್ ಬಜರಂಗದಳ, ಹಿಂದೂ ಜಾಗರಣ ವೇದಿಕೆ ಬೆಳ್ಳಾರೆ ಇದರ ವತಿಯಿಂದನಾಳೆ (ಆ.17) ಬೆಳಿಗ್ಗೆ 11.00 ಗಂಟೆಗೆ ಸರಿಯಾಗಿ ಬೆಳ್ಳಾರೆ ಪೊಲೀಸ್ ಠಾಣೆಯ ಮುಂಭಾಗ ಎಸ್.ಡಿ.ಪಿ.ಐ ಮತ್ತು ಪಿ.ಫ್.ಐ ಸಂಘಟನೆಯನ್ನು ನಿಷೇಧಿಸಲು ಮತ್ತು ಕಬಕದಲ್ಲಿ ಸ್ವಾತಂತ್ರ್ಯೋತ್ಸವದ ದಿನ ರಥಯಾತ್ರೆಯನ್ನು ತಡೆದು ನಿಲ್ಲಿಸಿ ಬಂಧಿತರಾಗಿರುವ ಎಸ್.ಡಿ.ಪಿ.ಐ ಕಾರ್ಯಕರ್ತರ ಮೇಲೆ ದೇಶದ್ರೋಹ ಕೇಸು ದಾಖಲಿಸುವಂತೆ ಒತ್ತಾಯಿಸಿ ಪ್ರತಿಭಟನೆ...

ಕಳಂಜ ಗ್ರಾಮ ಪಂಚಾಯತ್ ನಲ್ಲಿ ವಿದ್ಯಾರ್ಥಿಗಳಿಗೆ ಉಚಿತ ವೈಫೈ ವ್ಯವಸ್ಥೆ

ಕೋವಿಡ್ ಕಾರಣದಿಂದ ಶಾಲೆಗಳು ಪುನರಾರಂಭವಾಗದೆ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗಿರುವುದು ಎಲ್ಲರಿಗೂ ತಿಳಿದ ವಿಚಾರ. ಹೀಗಿದ್ದರೂ ಸರ್ಕಾರವು ಆನ್ಲೈನ್ ತರಗತಿಗಳ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದೆ. ಆದರೆ ಗ್ರಾಮೀಣ ಭಾಗದಲ್ಲಿ ಅಂತರ್ಜಾಲದ ಸಮಸ್ಯೆಯಿರುವುದರಿಂದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ತೊಡಕುಂಟಾಗಿರುತ್ತದೆ. ಇಂತಹ ವಿಷಮ ಪರಿಸ್ಥಿತಿಯನ್ನು ಮನಗಂಡು ಇದೀಗ ಕಳಂಜ ಗ್ರಾಮ ಪಂಚಾಯತ್ ನಿಂದ ವಿದ್ಯಾರ್ಥಿಗಳಿಗೆ ಉಚಿತ ವೈಫೈ ಸೌಲಭ್ಯವನ್ನು...
Ad Widget

ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಖಜಾಂಜಿಯಾಗಿ ಚಂದ್ರಾಕ್ಷಿ ಜೆ ರೈ ಆಯ್ಕೆ

ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಖಜಾಂಜಿಯಾಗಿ ಶ್ರೀಮತಿ ಚಂದ್ರಾಕ್ಷಿ ಜೆ ರೈ ಯವರು ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಆಯ್ಕೆಯಾಗಿರುತ್ತಾರೆ. ಗೌರವಾಧ್ಯಕ್ಷೆಯಾಗಿ ಶ್ರೀಮತಿ ಹರಿಣಿ ಸದಾಶಿವ ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಸುಳ್ಯ ತಾಲೂಕಿನಿಂದ ಶ್ರೀಮತಿ ಮಹಾಲಕ್ಷ್ಮಿ ಕೊರಂಬಡ್ಕ, ಶ್ರೀಮತಿ ಹರ್ಷಾ ಕರುಣಾಕರ, ಶ್ರೀಮತಿ ತ್ರಿವೇಣಿ ದಾಮ್ಲೆ ಮತ್ತು ಶ್ರೀಮತಿ ಸುಮನಾ ಕ್ರಪಾಶಂಕರ್ ಆಯ್ಕೆಯಾಗಿರುತ್ತಾರೆ.

ಸ್ನೇಹ ಶಾಲೆಯಲ್ಲಿ ಸಾಧಕರಿಗೆ ಸನ್ಮಾನ

ಸ್ನೇಹ ಶಾಲೆಯಲ್ಲಿ ಎಸ್.ಎಸ್. ಎಲ್.ಸಿ. ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆ.16 ರಂದು ನಡೆಯಿತು. 10ನೇ ತರಗತಿಯಲ್ಲಿ ಉತ್ತಮ ಅಂಕಗಳನ್ನು ಪಡೆದು ಉತ್ತೀರ್ಣರಾದ 14 ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷರಾಗಿರುವ ಡಾ. ಚಂದ್ರಶೇಖರ ದಾಮ್ಲೆ ಹಾಗೂ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಯಲಕ್ಷ್ಮಿ ದಾಮ್ಲೆ ಶಾಲು ಹೊದಿಸಿ ಪುಸ್ತಕಗಳನ್ನು ನೀಡಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ತುಷಾರ್ ಡಿ.ಕೆ, ಶಿವಶರಣ ಹೊಳ್ಳ ಎನ್,...

ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ಸಂಘಟನೆಗಳನ್ನು ನಿಷೇಧಿಸುವಂತೆ ಒತ್ತಾಯಿಸಿ ಹಿಂದು ಸಂಘಟನೆಗಳಿಂದ ನಾಳೆ ಠಾಣೆಯ ಎದುರು ಪ್ರತಿಭಟನೆ

ಕಬಕದಲ್ಲಿ ಸ್ವಾತಂತ್ರ್ಯ ದಿನ ರಥಯಾತ್ರೆಯನ್ನು ತಡೆದು ನಿಲ್ಲಿಸಿ ಬಂಧಿತರಾಗಿರುವ ಎಸ್ ಡಿ ಪಿ ಐ ಕಾರ್ಯಕರ್ತರ ಮೇಲೆ ದೇಶದ್ರೋಹದ ಕೇಸು ದಾಖಲಿಸಿವಂತೆ ಹಾಗೂ ಎಸ್ ಡಿ ಪಿ ಐ ಮತ್ತು ಪಿ ಎಫ್ ಐ ಸಂಘಟನೆಗಳನ್ನು ನಿಷೇಧಿಸಲು ಒತ್ತಾಯಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಹಾಗೂ ಹಿಂದು ಜಾಗರಣ ವೇದಿಕೆಯ ವತಿಯಿಂದ ಪ್ರತಿಭಟನೆ ಹಾಗೂ ಮನವಿ...

ಗುತ್ತಿಗಾರು : ಕಾಲೇಜಿನಲ್ಲಿ 75 ನೇ ಸ್ವಾತಂತ್ರೋತ್ಸವ ಆಚರಣೆ

ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು ಇಲ್ಲಿ 75 ನೇ ಸ್ವಾತಂತ್ರೋತ್ಸವ ಅಮೃತ ಮಹೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಧ್ವಜಾರೋಹಣವನ್ನು ಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷರಾದ ಲೋಕೇಶ್ವರ.ಡಿ.ಆರ್ ನೆರವೇರಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ನೆಲ್ಸನ್, ಶಿಕ್ಷಕರಾದ ಪ್ರಸನ್ನ ಕುಮಾರ್.ವೈ.ಬಿ, ದ್ವಿತೀಯ ದರ್ಜೆ ಸಹಾಯಕರಾದ ಸೋಮಶೇಖರ್.ಯಂ, ಕಾಲೇಜು ವಿಭಾಗದ ರಾಜ್ಯಶಾಸ್ತ್ರ ಉಪನ್ಯಾಸಕರಾದ ರಂಜಿತ್.ಎ.ವೈ ಎಸ್.ಡಿ.ಯಂ.ಸಿ. ಸದಸ್ಯರಾದ ಗಂಗಾಧರ.ಚಿಕ್ಮುಳಿ...

ನಾರ್ಣಕಜೆ : ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮ

ನೆಲ್ಲೂರುಕೆಮಾಜೆ ಯುವಕ ಮಂಡಲದ ಸದಸ್ಯರು ಹಾಗೂ ಪಂಚಾಯತ್ ಸದಸ್ಯ ರಿಂದ ನಾರ್ಣಕಜೆ,ಜಬಳೆ ಪರಿಸರದ ರಸ್ತೆ ಬದಿಯಲ್ಲಿ ಸ್ವಚ್ಚತೆ ಹಾಗೂ ಕಾಡು ಕಡಿಯುವ ಮೂಲಕ ಸ್ವಾತಂತ್ರ್ಯ ದಿನಾಚರಣೆ ಯನ್ನು ಆಚರಿಸಲಾಯಿತು.ಈ ಸಂದರ್ಭದಲ್ಲಿ ಜಯಪ್ರಸಾದ್ ಸುಳ್ಳಿ, ದೇವಿಪ್ರಸಾದ್ ಸುಳ್ಳಿ, ರಾಮಚಂದ್ರ ಪ್ರಭು, ಹರೀಶ್ ಸುಳ್ಳಿ, ತೇಜಕುಮಾರ್ ನಾರ್ಣಕಜೆ, ಚಂದ್ರಶೇಖರ ನಾರ್ಣಕಜೆ, ಜಯಮಣಿಕಂಠ ನಾರ್ಣಕಜೆ, ರಾಮಚಂದ್ರ ನಾರ್ಣಕಜೆ, ನಿರ್ದೇಶ್ ಸುಳ್ಳಿ,...

ಐವರ್ನಾಡು : ಯು.ಡಿ.ಶೇಖರ್ ಗೆ ಸನ್ಮಾನ – ನೂತನ ಪಿ.ಡಿ.ಒ.ಶ್ಯಾಮ್ ಪ್ರಸಾದ್ ಗೆ ಸ್ವಾಗತ

ಐವರ್ನಾಡು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಹಲವು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಯು.ಡಿ.ಶೇಖರ್ ರವರಿಗೆ ಸನ್ಮಾನ ಕಾರ್ಯಕ್ರಮವು ಆ.16 ರಂದು ಐವರ್ನಾಡು ಗ್ರಾಮ ವಿಕಾಸ ಸಭಾ ಭವನದಲ್ಲಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಕೀಲಾಡಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಭಹಾರೈಸಿದರು. ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥ ಯು.ಡಿ.ಶೇಖರ್...

ಗೋವಿಂದನಗರ ಶಾಲೆಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ

ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋವಿಂದನಗರ ಮತ್ತು ಅಂಗನವಾಡಿ ಕೇಂದ್ರ ದಲ್ಲಿ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಾಯಿತು. ಹಿರಿಯ ಮುಖ್ಯ ಗುರುಗಳಾದ ಶ್ರೀ ಗೋಪಾಲಕೃಷ್ಣ ಭಟ್ ರವರು ದ್ವಜಾರೋಹಣ ಸಂದರ್ಭದಲ್ಲಿ ರಾಷ್ಟ್ರ ನಾಯಕರನ್ನು ನೆನೆಯುತ್ತಾ ದೇಶಭಕ್ತಿ, ರಾಷ್ಟ್ರ ದ್ವಜದ ಮಹತ್ವ, ಸೈನಿಕರ ತ್ಯಾಗದ ಬಗ್ಗೆ ತಿಳಿಸಿದರು. ಎಸ್.ಡಿ.ಎಂ.ಸಿ ಅದ್ಯಕ್ಷರಾದ ಮುತ್ತಪ್ಪ, ಉಪಾಧ್ಯಕ್ಷರಾದ ಕಮಲ, ಕೊಲ್ಲಮೊಗ್ರು ಗ್ರಾಮಪಂಚಾಯತ್ ಸದಸ್ಯರಾದ...

ಕಟ್ಟ :- ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಚ್ಚತಾ ಕಾರ್ಯಕ್ರಮ

75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಸ್ವಾತಂತ್ರ್ಯೋತ್ಸವದ ಹಿಂದಿನ ದಿನ ಆ.14 ರಂದು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಗೋವಿಂದನಗರ ಹಾಗೂ ಅಂಗನವಾಡಿ ಕೇಂದ್ರ ಗೋವಿಂದನಗರ ಕಟ್ಟ ಇಲ್ಲಿ ಶಾಲಾ ಎಸ್.ಡಿ.ಎಂ.ಸಿ ಸದಸ್ಯರು, ಪೋಷಕರು, ಅಂಗನವಾಡಿ ಮಕ್ಕಳ ಪೋಷಕರು, ಬಾಲವಿಕಾಸ ಸಮಿತಿ, ಹಳೆ ವಿದ್ಯಾರ್ಥಿ ಸಂಘದ ಸದಸ್ಯರ ಸಹಕಾರದಿಂದ ಶಾಲಾ ಸ್ವಚ್ಚತಾ ಕಾರ್ಯ ನಡೆಯಿತು. ಸ್ವಚ್ಚತಾ ಕಾರ್ಯಕ್ರಮದ ಜೊತೆಗೆ...
Loading posts...

All posts loaded

No more posts

error: Content is protected !!