
ಕಲ್ಚರ್ಪೆ ಸಿರಿಕುರಲ್ ನಗರದಲ್ಲಿರುವ ವನದುರ್ಗಾ ಮತ್ತು ಪರಿವಾರ ದೈವಗಳ ದೈವಸ್ಥಾನದ ನಾಗನ ಸಾನಿಧ್ಯದಲ್ಲಿ ನಾಗರಪಂಚಮಿ ಪ್ರಯುಕ್ತ ಪರಿಸರದ ಭಕ್ತಾದಿಗಳಿಂದ ನಾಗರಪಂಚಮಿ ಆಚರಣೆ ನಡೆಯಿತು. ನಾಗರಪಂಚಮಿ ಪ್ರಯುಕ್ತ ಅರ್ಚಕರಾದ ಶ್ರೀವರ ಭಟ್ ರವರ ನೇತೃತ್ವದಲ್ಲಿ ನಾಗನಿಗೆ ಕ್ಷೀರಾಭಿಷೇಕ, ಎಳನೀರಿನ ಅಭಿಷೇಕ ಮತ್ತು ತಂಬಿಲ ಸೇವೆ ನಡೆಯಿತು. ಈ ಸಂದರ್ಭದಲ್ಲಿ ದೈವಸ್ಥಾನದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಗೋಕುಲ್ ದಾಸ್, ಕಾರ್ಯದರ್ಶಿ ಜನಾರ್ಧನ ಚೊಕ್ಕಾಡಿ, ಸಮಿತಿ ಪದಾಧಿಕಾರಿಗಳಾದ ಅಶೋಕ್ ಪೀಚೆಮನೆ, ನವೀನ್ ಕಲ್ಚರ್ಪೆ, ಪುರುಷೋತ್ತಮ ಕಲ್ಚರ್ಪೆ ಸೇರಿದಂತೆ ಭಕ್ತಾದಿಗಳು ಪಾಲ್ಗೊಂಡರು.