
ಅಡ್ಕಾರ್ ಹಿರಿಯ ಪ್ರಾಥಮಿಕ ಸರ್ಕಾರಿ ಶಾಲೆಯ ಅಧ್ಯಾಪಕರು ಶಾಲೆಗೆ ಒಂದು ಕಂಪ್ಯೂಟರ್ ಅವಶ್ಯಕತೆ ಇದೆ ಎಂದು ಊರಿನ ಹಿರಿಯ ವ್ಯಕ್ತಿಗಳಲ್ಲಿ ಕೇಳಿಕೊಂಡಾಗ ಅದಕ್ಕೆ ಅಡ್ಕಾರಿನ ಸಂಘ ಸಂಸ್ಥೆಗಳು ಊರವರು,ವಿದೇಶದಲ್ಲಿ ದುಡಿಯುವ ಊರಿನ ಸದಸ್ಯರು ಹಾಗೂ ಶಾಲೆಯ ಹಳೆ ವಿದ್ಯಾರ್ಥಿಗಳೆಲ್ಲರೂ ಸೇರಿ ಶಾಲೆಯ ಆಡಳಿತ ಸಮಿತಿಯ ಮಾತಿಗೆ ಸ್ಪಂದಿಸಿ ಮುಹಿಯಾದ್ದೀನ್ ಜಮಾ ಮಸೀದಿ ಜಾಲ್ಸೂರು (ಅಡ್ಕಾರ್) ಹೆಸರಿನಲ್ಲಿ ಕಂಪ್ಯೂಟರ್ ಶಾಲೆಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜಮಾಹತ್ ಕಮಿಟಿಯ ಉಪಾಧ್ಯಕ್ಷರಾದ ಉಸ್ಮಾನ್ ಜಿ.ಎಂ ಹೆಲ್ಪಿಂಗ್ ಹ್ಯಾಂಡ್ಸ್ ಸದಸ್ಯರಾದ ಬಶೀರ್ ಅಡ್ಕಾರ್, ಅಲಿ ಕತಾರ್, ಜುನೈದ್ ಅಡ್ಕಾರ್, ಸಿನಾನ್ ಅಡ್ಕಾರ್, ಪಾರುಖ್ ಜಿ.ಎಂ,ನೌಷಾದ್ ಅಡ್ಕಾರ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಅಧ್ಯಾಪಕರು ಉಪಸ್ಥಿರಿದ್ದರು.