
ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಎಲಿಮಲೆ
ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಜನನಿ ಎಂ ವಿ 625ರಲ್ಲಿ 623 ಅಂಕ ಗಳಿಸಿರುತ್ತಾಳೆ. ಇವಳು ಎಲಿಮಲೆಯ ಮಣಿಯೂರು ಕೊರಂಬಡ್ಕ ಮನೆಯ ವಿಜಯ ಕುಮಾರ್ ಎಂ ಮತ್ತು ಚಿತ್ರಕಲಾ ಇವರ ಪುತ್ರಿ. ಇವಳು ಕಳೆದ ವರ್ಷ ರಾಷ್ಟ್ರ ಮಟ್ಟದಲ್ಲಿ ಆಯೋಜಿಸಲ್ಪಟ್ಟ Al Responsible youth ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರದ 100 ವಿದ್ಯಾರ್ಥಿಗಳಲ್ಲಿ ಒಬ್ಬಳಾಗಿ ಲ್ಯಾಪ್ ಟಾಪ್ ಬಹುಮಾನ ಪಡೆದಿರುತ್ತಾಳೆ.
ಇಲ್ಲಿ ಒಟ್ಟು 60 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಎಲ್ಲರೂ ತೇರ್ಗಡೆಯಾಗಿದ್ದಾರೆ. ಡಿಸ್ಟಿಂಕ್ಷನ್ 9, ಪ್ರಥಮ 33, ದ್ವಿತೀಯ 13, ತೃತೀಯ ಶ್ರೇಣಿಯಲ್ಲಿ 5 ವಿದ್ಯಾರ್ಥಿಗಳು ಪಾಸಾಗಿದ್ದಾರೆ.