ಬಳ್ಪ ಆದರ್ಶ ಗ್ರಾಮದ ಒಳ ಹೊಕ್ಕರೇ ಸಮಸ್ಯೆಗಳ ಪಟ್ಟಿಯೇ ಬೆಳೆಯುತ್ತಿದೆ ಹೊರತು ಅಭಿವೃದ್ಧಿಯಲ್ಲಿ ಆದರ್ಶ ಕಾಣುತಿಲ್ಲ. ಬಳ್ಪದಿಂದ ನಾದೂರು,ಕಾಂಜಿ ದೇವಸ್ಥಾನ ಸಂಪರ್ಕಿಸಿಸುವ ರಸ್ತೆ ಮಳೆಗಾಲ ಬಂದಾಗ ಮಣ್ಣೆಲ್ಲಾ ಕೊಚ್ಚಿಹೋಗಿ ತೋಡಿನಂತಾಗಿ ಬಿಡುತ್ತದೆ. ವಾಹನಗಳು ಸರ್ಕಸ್ ಮಾಡುತ್ತಾ, ಹೊರಳಾಡುತ್ತ ಹೋಗುವ ಪರಿಸ್ಥಿತಿ ಬಂದಿದೆ.ಈ ರಸ್ತೆ ಪಂಚಾಯತ್ ಗೆ ಒಳಪಟ್ಟು ಸುಮಾರು 30 ವರ್ಷ ಕಳೆದರೂ ಅಭಿವೃದ್ಧಿ ಮಾತ್ರ ಈ ರಸ್ತೆ ಕಾಣುತಿಲ್ಲ. ಜನಪ್ರತಿನಿಧಿಗಳು ದಿನಾ ಆಶ್ವಾಸನೆ ನೀಡುತ್ತಾ ಬರುತ್ತಾರೆ ವಿನಹ ಯಾವುದೇ ರಸ್ತೆ ಅಭಿವೃದ್ಧಿ ಕೈಗೊಳ್ಳುವ ಗೋಜಿಗೆ ಹೋಗುವಂತೆ ಕಾಣುತ್ತಿಲ್ಲ. ಸಂಸದರು ಪಕ್ಷದ ಅಧ್ಯಕ್ಷರಾದ ಮೇಲಂತೂ ಗ್ರಾಮವನ್ನೇ ಮರೆತಂತಿದೆ. ಶಾಸಕರು ಸಚಿವರಾದ ಮೇಲಾದರೂ ಬಳ್ಪ ಆದರ್ಶ ಗ್ರಾಮ ಕಥೆ ಬದಲಾಗಬಹುದೇನೋ ಎಂಬ ನಿರೀಕ್ಚೆಯಲ್ಲಿದ್ದಾರೆ ಜನ. ಬಳ್ಪ ಗ್ರಾಮ ಪಂಚಾಯತ್ ಕೂಡ ಈ ಕಡೆ ಗಮನ ನೀಡಬೇಕಾಗಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
- Thursday
- November 21st, 2024