- Wednesday
- April 2nd, 2025

ಇಂದು ಸುಳ್ಯದಲ್ಲಿ 39 ಕೊರೊನ ಪಾಸಿಟಿವ್ಸುಳ್ಯದಲ್ಲಿ ಇಂದು 39 ಕೋವಿಡ್ ಪಾಸಿಟಿವ್ ಪ್ರಕರಣ ಕಂಡುಬಂದಿದೆ. ನಿನ್ನೆ ಪಾಸಿಟಿವ್ 129 ಕ್ಕೆ ಏರಿಕೆಯಾಗಿತ್ತು. ತಾಲೂಕಿನಲ್ಲಿ ಒಟ್ಟು 712 ಸಕ್ರೀಯ ಪ್ರಕರಣಗಳಿವೆ.

ತಾಲೂಕಿನಲ್ಲಿ ಜೂ.2ರಂದು 100 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದೆ. ತಾಲೂಕಿನಲ್ಲಿ ಒಟ್ಟು 597 ಸಕ್ರೀಯ ಪ್ರಕರಣಗಳು ಇದೆ. ಎಂದು ತಾಲೂಕು ಆರೋಗ್ಯಾಧಿಕಾರಿ ಅವರ ಪ್ರಕಟಣೆ ತಿಳಿಸಿದೆ. ಸುಳ್ಯ ನಗರ ವ್ಯಾಪ್ತಿಯಲ್ಲಿ 5, ಗುತ್ತಿಗಾರು 11, ಕೊಲ್ಲಮೊಗ್ರ 8,ಬೆಳ್ಳಾರೆ 7,ಸಂಪಾಜೆ 7, ಸುಬ್ರಹ್ಮಣ್ಯ 7, ಅಜ್ಜಾವರ 5, ಮಂಡೆಕೋಲು 5,ಅರಂತೋಡು 5, ಕಲ್ಮಕ್ಕಾರ್ 5, ನಾಲ್ಕೂರು 4,...

ಪ್ರಾಚೀನ ಭಾರತದಲ್ಲಿ ಹುಟ್ಟಿದ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಅಭ್ಯಾಸಗಳು ಅಥವಾ ಶಿಸ್ತುಗಳ ಒಂದು ಗುಂಪು ಯೋಗ. ಯೋಗಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅಮೇರಿಕಾದ ನಾಸಾ ಬಾಹ್ಯಕಾಶ ಸಂಶೋಧನ ಕೇಂದ್ರ ತನ್ನ ಸಂಶೋಧನೆಯಿಂದ ಹೀಗೆ ಹೇಳಿದೆ, "ಯೋಗದಲ್ಲಿ ಬಳಸುವ ಓಂಕಾರವು ಈ ಜಗತ್ತು ಹುಟ್ಟುವ ಮೊದಲೇ ಹುಟ್ಟಿತ್ತು. ಸೂರ್ಯ ಮಂಡಲದಿಂದ ಸದಾ ಹೊರಹೊಮ್ಮುವ ಕಿರಣಗಳ ಧ್ವನಿಯು...

ಸೇವಾ ಭಾರತಿ ಸುಳ್ಯ, ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಮತ್ತು ಪುತ್ತೂರು ವಲಯ ಅರಣ್ಯ ಇಲಾಖೆ ವತಿಯಿಂದ ಭೂಮಿ ಸುಪೋಷಣ್, ಪ್ರಕೃತಿ ವಂದನಾ ಕಾರ್ಯಕ್ರಮವು ಜಾಲ್ಸೂರು ಗ್ರಾಮದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ವಠಾರದಲ್ಲಿ ಮೇ.30 ರಂದು ನಡೆಯಿತು.ಅರಣ್ಯ ಸಂರಕ್ಷಣಾ ಅಧಿಕಾರಿ ಕಾರ್ಯಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಲಯ ಅರಣ್ಯಾಧಿಕಾರಿ ಸುಬ್ಬಯ್ಯ, ರಾಷ್ಟ್ರೀಯ ಸ್ವಯಂ...

ವ್ಯಕ್ತಿಯೊಬ್ಬರು ಮಾನಸಿಕ ಅಸ್ವಸ್ಥರಾಗಿ ಬಿದ್ದಿರುವುದನ್ನು ಗಮನಿಸಿ ಉಪಚರಿಸಿ ಅವರ ಮನೆಗೆ ತಲುಪಿಸಲು ಶ್ರೀ ಕ್ಷೇತ್ರ ಧರ್ಮಸ್ಥಳ ನಾಲ್ಕೂರು ವಲಯ ವಿಪತ್ತು ನಿರ್ವಹಣಾ ಘಟಕದ ಸಂಯೋಜಕ ಸತೀಶ್ ಹಾಲೆಮಜಲು ರವರು ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಮೇ 31 ಬೆಳಗಿನ ಜಾವ ನಾಲ್ಕೂರು ಗ್ರಾಮದ ಮರಕತ ಎಂಬಲ್ಲಿ ರಸ್ತೆ ಬದಿ ಬಿದ್ದಿದ್ದ ವ್ಯಕ್ತಿಯನ್ನು ಕಂಡ ಶ್ರೀ ಕ್ಷೇತ್ರ...

ಪಂಜ : ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 7 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಜಾಲತಾಣ ವಿಭಾಗದಿಂದ ಕೊಡುಗೆ
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ 7ನೇ ವರ್ಷ ಹಿನ್ನೆಲೆಯಲ್ಲಿ ಭಾಜಪ ಸುಳ್ಯ ಮಂಡಲದ ಸಾಮಾಜಿಕ ಜಾಲತಾಣ ಪ್ರಕೋಷ್ಠದ ವತಿಯಿಂದ ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಸ್ಕ್, ಕೈಗವಚ, ಜಿಂಕ್ ಮತ್ತು ವಿಟಮಿನ್ ಸಿ ಮಾತ್ರೆಗಳು, ಹ್ಯಾಂಡ್ ಸ್ಯಾನಿಟೈಝೆರ್ ಕೊಡುಗೆ ನೀಡಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ಸುಳ್ಯ ಮಂಡಲ ಸೋಷಿಯಲ್ ಮೀಡಿಯಾ ಸಂಚಾಲಕರಾದ ಫಯಾಜ್ ಕಡಬ,...