Ad Widget

ಸುಳ್ಯದಲ್ಲಿ 48 ಕೊರೊನಾ ಪಾಸಿಟಿವ್ – 690 ಸಕ್ರೀಯ ಪ್ರಕರಣ

ಸುಳ್ಯದಲ್ಲಿ ಇಂದು 48 ಕೊರೋನಾ ಪಾಸಿಟಿವ್ ದೃಢಪಟ್ಟಿದೆ.ತೊಡಿಕಾನದಲ್ಲಿ 2, ಕಳಂಜದಲ್ಲಿ 1, ಅಜ್ಜಾವರದಲ್ಲಿ 2, ನಾಲ್ಕೂರಿನಲ್ಲಿ 6, ದೇವಚಳ್ಳದಲ್ಲಿ 8, ಅಮರಮುಡ್ನೂರಿನಲ್ಲಿ 1, ಸಂಪಾಜೆಯಲ್ಲಿ 2, ಅಮರಪಡ್ನೂರಿನಲ್ಲಿ 3, ಏನೆಕಲ್ಲಿನಲ್ಲಿ 2, ಐನೆಕಿದುನಲ್ಲಿ 1, ಸುಬ್ರಹ್ಮಣ್ಯದಲ್ಲಿ 5, ಸುಳ್ಯದಲ್ಲಿ 2, ಎಡಮಂಗಲದಲ್ಲಿ 2, ಕೊಡಿಯಾಲದಲ್ಲಿ 6, ಗುತ್ತಿಗಾರಿನಲ್ಲಿ 1, ಬೆಳ್ಳಾರೆಯಲ್ಲಿ 2, ಮಂಡೆಕೋಲಿನಲ್ಲಿ 1 ಪಾಸಿಟಿವ್...

ಅಜ್ಜಾವರ : ಸೆಲ್ಕೋ ಫೌಂಡೇಶನ್ ವತಿಯಿಂದ ಕಿಟ್ ವಿತರಣೆ

ಅಜ್ಜಾವರ ಗ್ರಾಮ ಪಂಚಾಯತ್ ಅಧ್ಯಕ್ಷೆ ಸತ್ಯವತಿ ಅವರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕಡು ಬಡವರಿಗೆ ಹಾಗೂ ಅಂಗವಿಕಲಗರಿಗೆ ಕಿಟ್ ವಿತರಣೆ ಮಾಡಲು ಸೇಲ್ಕೋ ಫೌಂಡೇಷನ್ ಗೆ ಮನವಿ ಪತ್ರ ಕಳುಹಿದ್ದರು . ಇದಕ್ಕೆ ಸ್ಪಂದಿಸಿದ ಸೆಲ್ಕೋ ಫೌಂಡೇಷನ್ 50 ಕುಟುಂಬಗಳಿಗೆ ಕಿಟ್ ನ್ನು ಅಧ್ಯಕ್ಷೆ ಸತ್ಯವತಿ ಅವರಿಗೆ ಹಸ್ತಾಂತರಿಸಿದರು . ಈ ಸಂದರ್ಭದಲ್ಲಿ ಸೆಲ್ಕೋ ಸಂಸ್ಥೆಯ...
Ad Widget

ಸುಬ್ರಹ್ಮಣ್ಯ: ‘ಆಕ್ಸಿಜನ್ ಚಾಲೆಂಜ್’ ಅಭಿಯಾನಕ್ಕೆ ಚಾಲನೆ

ಎಬಿವಿಪಿ ಕರ್ನಾಟಕ ಹಾಗೂ ಎಸ್.ಎಫ್.ಡಿ ವತಿಯಿಂದ ಜೂನ್ 5 ರಿಂದ 5 ದಿನ 5 ಗಿಡ ನೆಡುವ ಮೂಲಕ 'ಆಕ್ಸಿಜನ್ ಚಾಲೆಂಜ್'ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಅಂಗವಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತು ಕುಕ್ಕೆ ಸುಬ್ರಹ್ಮಣ್ಯ ಶಾಖೆಯ ವತಿಯಿಂದ ಜೂ.8 ರಂದು ಕೆ.ಎಸ್.ಎಸ್ ಕಾಲೇಜಿನಲ್ಲಿ 5 ಗಿಡ ನೆಡುವ ಮೂಲಕ 4 ದಿನದ 'ಆಕ್ಸಿಜನ್ ಚಾಲೆಂಜ್'...

ಬೆಳ್ಳಾರೆ : ಬಾಬು ಆ್ಯಂಟನಿ ಡಿ ಸೋಜಾ ಕಾವಿನಮೂಲೆ ನಿಧನ

ಬೆಳ್ಳಾರೆ ಗ್ರಾಮದ ಕಾವಿನಮೂಲೆ ನಿವಾಸಿ, 'ಪ್ರಶಾಂತ್' ಆಟೋದ ಮಾಲಕ ಬಾಬು ಆ್ಯಂಟನಿ ಡಿ ಸೋಜಾರವರು ಅಸೌಖ್ಯದಿಂದ ಜೂ.7ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಅವರಿಗೆ 61 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಮತ್ತು ಓರ್ವ ಪುತ್ರ, ಕುಟುಂಬಸ್ಥರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ. ಕೆಲ ದಿನಗಳಿಂದ ಅಸೌಖ್ಯಕ್ಕೊಳಗಾಗಿದ್ದ ಇವರಿಗೆ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.ಸುಮಾರು 1...

ಉಪ್ಪುಕಳ : ಅಯ್ಯಪ್ಪ ಯುವಕ ಮಂಡಲದಿಂದ ವನ್ಯಜೀವಿಗಳಿಗಾಗಿ ಹಣ್ಣಿನ ಗಿಡ ಬೆಳೆಸಿ ಅಭಿಯಾನ

ಬಾಳುಗೋಡು ಗ್ರಾಮದ ಅಯ್ಯಪ್ಪ ಯುವಕ ಮಂಡಲ ಉಪ್ಪುಕಳ ಇದರ ಸದಸ್ಯರಿಂದ ವನ್ಯಜೀವಿಗಳಿಗಾಗಿ ಹಣ್ಣಿನ ಗಿಡ ಬೆಳೆಸಿ ಅಭಿಯಾನ ಜೂ. 6 ರಂದು ಆರಂಭಿಸಲಾಯಿತು. ಅಭಿಯಾನದಲ್ಲಿ ಬಾಳುಗೋಡು ಉಪ್ಪುಕಳ ಸಂಪರ್ಕ ರಸ್ತೆಯ ಮಾನಡ್ಕ ಎಂಬಲ್ಲಿಂದ ಕೊತ್ನಡ್ಕವರೆಗೆ ರಸ್ತೆಯ ಬದುಗಳಲ್ಲಿ ಮಾವಿನ ಸಸಿ, ಪೇರಳೆ ಸಸಿ, ನಕ್ಷತ್ರ ಹಣ್ಣಿನ ಸಸಿ, ಗೇರುಬೀಜ ಸಸಿ, ಕಾಳುಮೆಣಸು ಬಳ್ಳಿಗಳನ್ನು ನೆಡಲಾಯಿತು. ವಿಶೇಷವಾಗಿ...

ಕೇನ್ಯ: ಹಿಂದೂ ಜಾಗರಣ ವೇದಿಕೆ ವತಿಯಿಂದ ಶ್ರಮದಾನ

ಕೇನ್ಯ ಹಿಂದೂ ಜಾಗರಣ ವೇದಿಕೆ ವತಿಯಿಂದ ಕೇನ್ಯ ಗ್ರಾಮದ ಕಾರ್ಯತಡ್ಕದಿಂದ ಪೇರ್ಬಂಡ ಕೆರೆಕೋಡಿ ನೇಲ್ಯಡ್ಕ ರಸ್ತೆಗಳಿಗೆ ಚರಂಡಿ ವ್ಯವಸ್ಥೆ ಮತ್ತು ರಸ್ತೆ ದುರಸ್ತಿ ಮಾಡುವ ಮುಖಾಂತರ ಜೂ.6ರಂದು ಶ್ರಮದಾನ ಮಾಡಲಾಯಿತು.ಈ ಶ್ರಮದಾನದಲ್ಲಿ ಜಾಗರಣ ಕಾರ್ಯಕರ್ತರು ಭಾಗವಹಿಸಿದರು.

ಕುಳ್ಳಾಜೆ : ರಸ್ತೆ ಗುಂಡಿಗಳಿಗೆ ಕಾಂಕ್ರೀಟ್ ಹಾಕಿ ಶ್ರಮದಾನ

ಶೇಣಿ ಕುಳ್ಳಾಜೆಯ ಎಂ.ಎಸ್.ಕೆ. ತಂಡದ ಸದಸ್ಯರಿಂದ ಶೇಣಿ ಪಾಡಾಜೆ ರಸ್ತೆಯಲ್ಲಿದ್ದ ಗುಂಡಿಯನ್ನು ಕಾಂಕ್ರೀಟ್ ಹಾಕಿ ಮುಚ್ಚಲಾಯಿತು. ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ಸುಬ್ರಾಯ ಸೂರೆಂಗಿ, ವಿಜಯ ಕುಳ್ಳಾಜೆ, ಸುಬ್ರಮಣ್ಯ ಸೂರೆಂಗಿ, ದಿನೇಶ್ ಕುಳ್ಳಾಜೆ, ವಿಶ್ವನಾಥ ಕುಳ್ಳಾಜೆ, ದೀಕ್ಷಿತ್ ಶೇಣಿ, ಕೃತಿಕ್ ಕುಳ್ಳಾಜೆ, ಜಗದೀಶ್ ಕುಳ್ಳಾಜೆ, ನಿತೀನ್ ಕುಳ್ಳಾಜೆ, ಯಶೋಧರ ಕುಳ್ಳಾಜೆ, ರಾಮಚಂದ್ರ ಕುಳ್ಳಾಜೆ ಉಪಸ್ಥಿತರಿದ್ದರು.

ಉತ್ತರಾಖಂಡ್ ನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಶಿಬಿರಕ್ಕೆ ಎನ್.ಎಂ.ಸಿ ವಿದ್ಯಾರ್ಥಿನಿ ಕೆಡೆಟ್ ವಿಸ್ಮಿತ ಕೆ.ಪಿ. ಆಯ್ಕೆ

ಸುಳ್ಯದ ಎನ್ ಎಂ ಸಿ ಪ್ರಥಮ ಬಿ ಕಾಂ ವಿದ್ಯಾರ್ಥಿನಿ ಕೆಡೆಟ್ ವಿಸ್ಮಿತ ಕೆ ಪಿ ಯವರು ಉತ್ತರಕಾಶಿ ಉತ್ತರಖಾಂಡ್ ನಲ್ಲಿ ಎನ್ ಸಿ ಸಿ ವತಿಯಿಂದ ನಡೆಯುವ ರಾಷ್ಟ್ರೀಯ ಮಟ್ಟದ ಶಿಬಿರಕ್ಕೆ ಆಯ್ಕೆಯಾಗಿದ್ದಾರೆ. 19 ಕೆಎಆರ್ ಬೆಟಾಲಿಯನ್ , ಎನ್ ಸಿ ಸಿ ಮಡಿಕೇರಿಯಿಂದ ಆಯ್ಕೆ ಯಾದ ಏಕೈಕ ವಿದ್ಯಾರ್ಥಿನಿಯಾಗಿದ್ದಾರೆ. 2021 ಜೂನ್ 6...

ಕಮಿಲ : ಅನಾರೋಗ್ಯದಿಂದ ಯುವಕ ಮೃತ್ಯು

ಗುತ್ತಿಗಾರು ಗ್ರಾಮದ ಕಮಿಲ ಜೊರ್ತೆ ಗುಡ್ಡಪ್ಪ ಗೌಡರ ಪುತ್ರ ಕೌಶಿಕ್ (19) ಅಸೌಖ್ಯದಿಂದ ಜೂ.5 ರಂದು ನಿಧನರಾದರು. ಕಳೆದೆ ಒಂದುವರೆ ವರ್ಷಗಳಿಂದ ಅಂಗಾಂಗ ಬಲಹೀನತೆಗೆ ಒಳಗಾಗಿ ಚಿಕಿತ್ಸೆ ಪಡೆದು, ನಂತರ ಮನೆಯಲ್ಲಿ ಆರೈಕೆ ಪಡೆಯುತ್ತಿದ್ದರು. ಮೃತರು ತಾಯಿ ಸುಮಿತ್ರ, ತಮ್ಮ ರಿತೇಶ್ ಹಾಗೂ ತಂಗಿ ಮೌನಿತಾ ರನ್ನು ಅಗಲಿದ್ದಾರೆ.

ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫಾಗಿಂಗ್

ಕಳಂಜ ಗ್ರಾಮ ಪಂಚಾಯತ್ ಮತ್ತು ಆರೋಗ್ಯ ಇಲಾಖೆಯ ವತಿಯಿಂದ ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಣಿಮಜಲು, ಆದಳ, ಕಳಂಜ ಜನತಾ ಕಾಲೋನಿ, ಕಳಂಜ ವಿಷ್ಣುನಗರ, ಪಟ್ಟೆ ಪರಿಸರದಲ್ಲಿ ಡೆಂಗ್ಯೂ ಮುಂಜಾಗೃತ ಕ್ರಮವಾಗಿ ಜೂ.5ರಂದು ಫಾಗಿಂಗ್ ನಡೆಸಲಾಯಿತು. ಈ ಸಂದರ್ಭದಲ್ಲಿ ಫಾಗಿಂಗ್ ನಿರ್ವಾಹಕ ಶರೀಫ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಗಣೇಶ್ ರೈ, ಸದಸ್ಯರಾದ ಬಾಲಕೃಷ್ಣ ಬೇರಿಕೆ, ಪ್ರೇಮಲತಾ...
Loading posts...

All posts loaded

No more posts

error: Content is protected !!