- Friday
- April 4th, 2025

ಗುತ್ತಿಗಾರು ಗ್ರಾಮದ ವಳಲಂಬೆ ನಿವಾಸಿ, ನಿವೃತ್ತ ಹೆಲ್ತ್ ಇನ್ಸ್ ಪೆಕ್ಟರ್ ದಿ. ಬಾಲಕೃಷ್ಣ ಗೌಡರವರ ಧರ್ಮಪತ್ನಿ ಶ್ರೀಮತಿ ಚಂದ್ರಕಲಾ (78.ವ) ರವರು ಅಲ್ಪಕಾಲದ ಅಸೌಖ್ಯದಿಂದ ಜೂ.12ರಂದು ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ಪ್ರಶಾಂತ್ ಮೋಂಟಡ್ಕ, ಪ್ರಸನ್ನ ಮೋಂಟಡ್ಕ, ಪುತ್ರಿ ಪ್ರಮೀಳಾ ಶಶಿಧರ ಕೊಲ್ಯ, ಹಾಗೂ ಕುಟುಂಬಸ್ಥರು, ಬಂಧುಮಿತ್ರರನ್ನು ಅಗಲಿದ್ದಾರೆ.

ಕಳಂಜ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನ ತಡೆಗಟ್ಟುವ ಹಿನ್ನೆಲೆಯಲ್ಲಿ ವೈದ್ಯರ ತಂಡ ಮನೆ ಮನೆಗೆ ಭೇಟಿ ಮಾಡಿ ಸಾರ್ವಜನಿಕರ ಆರೋಗ್ಯದ ವಿಚಾರಣೆ ಮತ್ತು ತಪಾಸಣಾ ಕಾರ್ಯಕ್ರಮ ನಡೆಯಿತು. ಈ ವೇಳೆ ವೈದ್ಯರ ತಂಡ, ಕಳಂಜ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್ ಕಿಲಂಗೋಡಿ, ಸದಸ್ಯರಾದ ಬಾಲಕೃಷ್ಣ ಬೇರಿಕೆ, ಸುಧ ವಾರಣಾಶಿ, ಕಮಲ, ಪಿ.ಡಿ.ಒ ಶ್ರೀಧರ , ಆರೋಗ್ಯ ಸಹಾಯಕಿ...

ಕೋವಿಡ್-19 ಹೊಡೆತಕ್ಕೆ ಇಡೀ ವಿಶ್ವವೇ ಪರಿತಪಿಸುತ್ತಿರುವಾಗ ರಾಜ್ಯದಲ್ಲಿ ಪಂಚಾಯತ್ ಅನುದಾನವನ್ನು ಅಲ್ಪ ಪ್ರಮಾಣದಲ್ಲಿ ಕಡಿತಗೊಳಿಸಿರುವುದು ಸರಿಯಾದ ಕ್ರಮವಾಗಿದೆ. ಹಿಂದೆಂದೂ ಕಾಣದ ಭೀಕರ ಸಾಂಕ್ರಾಮಿಕ ರೋಗದಿಂದ ಉಂಟಾದ ಸಂಕಷ್ಟದ ನಿರ್ವಹಣೆಗೆ ರಾಜ್ಯ ಸರಕಾರ ಸಾಕಷ್ಟು ಅನುದಾನವನ್ನು ನೀಡಿದೆ. ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಸಮಾಜದ ಶ್ರಮಿಕ ವರ್ಗದ ಕಣ್ಣೀರೊರೆಸಲು ಸಾವಿರಾರು ಕೋಟಿಯ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಬಡತನ ರೇಖೆಗಿಂತ...

ಸುಳ್ಯ ಶಾಂತಿನಗರ ನಿವಾಸಿ ಸುಳ್ಯ ಮೆಸ್ಕಾಂ ಉದ್ಯೋಗಿ ನಾಗೇಶ್ ಅವರ ಪುತ್ರ ಪ್ರಮೋದ್ (21) ಡೆಂಗ್ಯೂ ಜ್ವರಕ್ಕೆ ಬಲಿಯಾದ ದುರ್ದೈವಿ. ಕೆಲ ದಿನಗಳ ಹಿಂದೆ ಜ್ವರ ಕಂಡುಬಂದು ಡೆಂಗ್ಯೂ ಎಂದು ಗೊತ್ತಾಗುವ ವೇಳೆ ತೀವ್ರ ಅಸ್ವಸ್ಥರಾಗಿದ್ದರು. ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಜೂ....

ಗುತ್ತಿಗಾರು ಗ್ರಾಮವನ್ನು ಕೇಂದ್ರವಾಗಿರಿಸಿ ಹತ್ತು ಗ್ರಾಮಗಳ ವ್ಯಾಪ್ತಿಯ ಸಾರ್ವಜನಿಕರ ಶಾಶ್ವತ ಅನುಕೂಲಕ್ಕಾಗಿ ಟ್ರಸ್ಟ್ ಮುಖಾಂತರ ದೇಣಿಗೆ ಸಂಗ್ರಹಣೆ ಮಾಡಿ ಅಂಬ್ಯುಲೆನ್ಸ್ ಖರೀದಿ ಮಾಡಿ ಮಿತ ದರದಲ್ಲಿ ಸೇವೆ ಒದಗಿಸುವ ಬಗ್ಗೆ ಸಭೆ ನಡೆಸಲಾಯಿತು. ಲಾಕ್ ಡೌನ್ ಮುಗಿದ ತಕ್ಷಣವೇ ಸದ್ರಿ ಯೋಜನೆಯನ್ನು ಅನುಷ್ಟಾನಗೊಳಿಸುವುದು ಮತ್ತು ದಾನಿಗಳು ಅಥವಾ ಸಂಸ್ಥೆಯೊಂದು ಅಂಬ್ಯುಲೆನ್ಸ್ ವಾಹನದ ಸಂಪೂರ್ಣ ವೆಚ್ಚವನ್ನು ಕೊಡುಗೆಯಾಗಿ...

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಇಳಿಕೆಯಾಗದಿರುವುದರಿಂದ ಮತ್ತೊಂದು ವಾರ ಕಾಲ ಲಾಕ್‌ಡೌನ್ ವಿಸ್ತರಣೆ ಮಾಡಿ ಮುಖ್ಯಮಂತ್ರಿ ಯಡಿಯೂರಪ್ಪನವರು ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಸೋಂಕು ಪ್ರಕರಣಗಳ ಪ್ರಮಾಣ ಹೆಚ್ಚುತ್ತಲೇ ಇದ್ದು, ಪಾಸಿಟಿವಿಟಿ ದರವನ್ನು ಕನಿಷ್ಟ ಮಟ್ಟಕ್ಕೆ ಇಳಿಸುವ ದೃಷ್ಟಿಯಿಂದ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ.ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಉಸ್ತವಾರಿ ಸಚಿವರು ಜಿಲ್ಲೆಯಲ್ಲಿ ಮತ್ತೊಂದು ವಾರ...

ಇಂದು ಸಂಜೆ ಅಡ್ಕಾರು ಬಳಿಯ ಮಾವಿನಕಟ್ಟೆಯಲ್ಲಿ ನಡೆದ ಅಪಘಾತದಲ್ಲಿ ಗಾಯಗೊಂಡವರಲ್ಲಿ ಪೆರಾಜೆಯ ಕುಂಬಳಚೇರಿ ದಿನಕರ ಎಂಬವರು ಮೃತರಾಗಿರುವುದಾಗಿ ತಿಳಿದುಬಂದಿದೆ. ಇನ್ನೂ ನಾಲ್ವರ ಗಾಯಗೊಂಡಿದ್ದಾರೆ.ಪುತ್ತೂರು ಕಡೆಯಿಂದ ಸುಳ್ಯಕ್ಕೆ ಬರುತ್ತಿದ್ದ ಪಿಕಪ್ ವಾಹನಕ್ಕೆ ಕಂಟೈನರ್ ಡಿಕ್ಕಿ ಹೊಡೆದು ಐವರು ಗಾಯಗೊಂಡಿದ್ದರು. ಗಂಭೀರ ಗಾಯಗೊಂಡಿದ್ದ ಟಿಪ್ಪರ್ ಚಾಲಕ ದಿನಕರ್ ಮತ್ತಿತರರನ್ನು ಕೆ.ವಿ.ಜಿ. ಆಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿ ದಿನಕರ್ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಪಿಕಪ್ ಗೆ ಕಂಟೈನರ್ ಲಾರಿ ಢಿಕ್ಕಿ ಹೊಡೆದ ಪರಿಣಾಮವಾಗಿ ಪಿಕಪ್ ನಲ್ಲಿದ್ದ ಓರ್ವನಿಗೆ ಗಂಭೀರ ಸೇರಿದಂತೆ ಐವರಿಗೆ ಗಾಯವಾದ ಘಟನೆ ಜಾಲ್ಸೂರು ಗ್ರಾಮದ ಅಡ್ಕಾರಿನ ಮಾವಿನಕಟ್ಟೆಯಲ್ಲಿ ಸಂಭವಿಸಿದೆ. ಪುತ್ತೂರು ಕಡೆಯಿಂದ ಸಂಪಾಜೆಗೆ ತೆರಳುತ್ತಿದ್ದ ಪಿಕಪ್ ಗೆ ಮಡಿಕೇರಿಯಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಕಂಟೈನರ್ ಅಡ್ಕಾರಿನ ಮಾವಿನಕಟ್ಟೆಯ ಬ್ಯಾರಿಕೇಡ್ ಇಟ್ಟ ಬಳಿ ಢಿಕ್ಕಿ ಹೊಡೆದಿದ್ದು, ಪಿಕಪ್ ನಲ್ಲಿದ್ದ...

ಉಬರಡ್ಕ ಮಿತ್ತೂರು ಗ್ರಾಮದ ನೀರಬಿದಿರೆ ವಿನ್ಸೆಂಟ್ ಡಿಸೋಜ ಅಲ್ಪಕಾಲದ ಅಸೌಖ್ಯದಿಂದ ಜೂ.4 ರಂದು ನಿಧನರಾದರು. ಮೃತರು ತಾಯಿ, 7 ಮಂದಿ ಸಹೋದರಿಯರು ಹಾಗೂ ಓರ್ವ ಸಹೋದರರನ್ನು ಅಗಲಿದ್ದಾರೆ.

ಹೇ ಮಾನವ….ಆಮ್ಲಜನಕ ನೀಡುವ ಮರಗಿಡಗಳನ್ನು ಕಡೆದುರುಳಿಸುತ್ತಿದ್ದೆ ಅಂದು…ಆಸ್ಪತ್ರೆಗಳಲ್ಲಿ ಆಕ್ಸಿಜನ್ ಗಾಗಿ ಪರದಾಡುತ್ತಿರುವೆ ಇಂದು… ಉದ್ಯೋಗಕ್ಕಾಗಿ ಹಳ್ಳಿಯನ್ನು ತೊರೆದು ಪಟ್ಟಣಕ್ಕೆ ಹೋದೆ ಅಂದು…ಕೊರೋನಾ ಬಂತೆಂದು ಹೆದರಿ ಉದ್ಯೋಗವನ್ನು ತೊರೆದು ಮರಳಿ ಹಳ್ಳಿಗೆ ಬಂದೆ ಇಂದು… ಸಂಬಂಧಗಳ ಬೆಲೆಯನ್ನು ಮರೆತು ಹೋದೆ ಅಂದು…ಸಂಬಂಧಗಳ ನಿಜವಾದ ಬೆಲೆಯನ್ನು ತಿಳಿದು ಹಿಂತಿರುಗಿ ಬಂದೆ ಇಂದು… ಜೀವನದಲ್ಲಿ ಹಣವೇ ಮುಖ್ಯ ಎಂದು ತಿಳಿದಿದ್ದೆ...

All posts loaded
No more posts